ಶಿವಮೊಗ್ಗ: ಕಲ್ಕತ್ತಾದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ರೋಟರಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು.

ಶಿವಮೊಗ್ಗ ನಗರದ ಎಂಟು ರೋಟರಿ ಕ್ಲಬ್ ಹಾಗೂ ೫ ಇನ್ನರ್ ವ್ಹೀಲ್ ಸಂಸ್ಥೆಗಳು, ಒಕ್ಕಲಿಗರ ಮಹಿಳಾ ವೇದಿಕೆ, ಕದಳಿ ಸಮಾಜ, ದೈವಜ್ಞ ಮಹಿಳಾ ಮಂಡಳಿ, ಪ್ರೇರಣ ಮಹಿಳಾ ಮಂಡಳಿ, ಭೂಮಿಕಾ ಮಹಿಳಾ ಸಂಘ, ಅನ್ಸ್ ಕ್ಲಬ್, ಶರಾವತಿ ಮಹಿಳಾ ಸಂಘ, ಮಹಿಳಾ ಒಕ್ಕಲಿಗರ ಹಾಗೂ ತಾಲೂಕು ಮಹಿಳಾ ಒಕ್ಕಲಿಗರ ವೇದಿಕೆ ಭದ್ರಾವತಿ ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ನಗರದ ಅಮೀರ್ ಅಹ್ಮದ್ ಸರ್ಕಲ್ ಇಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ಭಿತ್ತಿ ಪತ್ರದೊಂದಿಗೆ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಪ್ರತಿನಿಧಿ ತಹಸೀಲ್ದಾರ್ ಪ್ರದೀಪ್ ಅವರ ಮುಖಾಂತರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿಯನ್ನ ಸಲ್ಲಿಸಲಾಯಿತು.

ರೋಟರಿ ವಲಯ ಹನ್ನೊಂದರ ಸಹಾಯಕ ಗವರ್ನರ್ ಸುರೇಶ್ ಎಚ್ ಎಂ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರದ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವುದು ಮನುಕುಲಕ್ಕೆ ಹೇಸಿಗೆಯಾಗಿದೆ. ಈ ನಿಟ್ಟಿನಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವುದರ ಮುಖಾಂತರ ಪ್ರಕರಣಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಇಂಥ ಹೀನಾಯ ಕೃತ್ಯಗಳಿಗೆ ನಮ್ಮ ರೋಟರಿ ಸಂಸ್ಥೆಗಳು ಸದಾ ಖಂಡಿಸುತ್ತವೆ. ಈ ನಿಟ್ಟಿನಲ್ಲಿ ಸರ್ಕಾರಗಳು ಇಂತಹ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡುವುದರ ಮುಖಾಂತರ ಇಂತಹ ಪ್ರಕರಣಗಳು ನಿಲ್ಲಿಸಬೇಕು ಎಂದರು.

ಮೆರವಣಿಗೆಯಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ , ರೋಟರಿ ಶಿವಮೊಗ್ಗ ಪೂರ್ವ ಇನ್ನರ್ ವ್ಹೀಲ್ ಕ್ಲಬ್ಬಿನ ಅಧ್ಯಕ್ಷೆ ವಾಗ್ದೇವಿ ಬಸವರಾಜ್, ಶಿವಮೊಗ್ಗ ಕ್ಲಬ್ಬಿನ ಸೂರ್ಯನಾರಾಯಣ ಉಡುಪ, ರೋಟರಿ ಉತ್ತರದ ಅಧ್ಯಕ್ಷ ಸುಂದರ್ ರಾಮ್, ಮಲ್ನಾಡ್ ಕ್ಲಬ್ಬಿನ ಅಧ್ಯಕ್ಷ ಮುಸ್ತಾಕ್ ಅಲಿ, ಸುರೇಶ್ ಕುಮಾರ್. ರಿವರ್ಸ್ ಸೈಡ್ ಕ್ಲಬ್ಬಿನ ಬಸವರಾಜ್, ಕೋಣಂದೂರು ಕ್ಲಬ್ಬಿನ ಗಿರೀಶ್ , ಕೆಪಿ ಶೆಟ್ಟಿ , ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ , ಮಾಜಿ ಸಹಾಯಕ ಗವರ್ನರ್ ಜಿ ವಿಜಯಕುಮಾರ್, ಜಿ ರವಿ, ಮಾಜಿ ಜಿಲ್ಲಾ ಗವರ್ನರ್ ಪ್ರೊಫೆಸರ್ ಎ ಎಸ್ ಚಂದ್ರಶೇಖರ್, ಎಚ್ ಎಲ್ ರವಿ ಇನ್ನರ್ವೇಲ್ ಮಾಜಿ ಜಿಲ್ಲಾ ಚೇರ್ಮನ್ ಭಾರತಿ ಚಂದ್ರಶೇಖರ್, ವಾರಿಜಾ ಜಗದೀಶ್, ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ , ಬಿಜಿ ಧನರಾಜ್ ಇನ್ನರ್ವಿಲ್ ಮಾಜಿ ಅಧ್ಯಕ್ಷರೇ ಬಿಂದು ವಿಜಯ ಕುಮಾರ್. ಇನ್ನರ್ ವೀಲ್ ಜಿಲ್ಲಾ ವೈಸ್ ಚೇರ್ಮನ್ ಶಬರಿ ಕಡಿದಾಳ್. ಮಂಜುನಾಥ್ ರಾವ್ ಕದಂ ಹಾಗೂ ಎಲ್ಲಾ ಮಹಿಳಾ ಸಂಘಟನೆಗಳ ಇನ್ನೂರಕ್ಕೂ ಹೆಚ್ಚು ರೋಟರಿ ಸದಸ್ಯರು , ಇನ್ನರ್ವಿಲ್ ಸದಸ್ಯನೀಯರು

ಪಾಲ್ಗೊಂಡು ಮನವಿ ನೀಡಿದರು.

By admin

ನಿಮ್ಮದೊಂದು ಉತ್ತರ

error: Content is protected !!