ಶಿವಮೊಗ್ಗ: ಜನವಸತಿ ಪ್ರದೇಶದಲ್ಲಿ ಬಾರ್ ಅಂಡ್ ರೆಸ್ಟೊರೆಂಟ್ ತೆರೆಯಲು ಅನುಮತಿ ನೀಡಬಾರದೆಂದು ಆಗ್ರಹಿಸಿ ವೆಂಕಟೇಶ ನಗರದ ನಾಲ್ಕನೇ ತಿರುವಿನ ನಿವಾಸಿಗಳು ಅಬಕಾರಿ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.
ಭಾಸ್ಕರ್ ಬಾಬು ಎಂಬುವವರು ವೆಂಕಟೇಶ ನಗರದಲ್ಲಿರುವ ತಮ್ಮ ಸ್ವಂತ ಕಟ್ಟಡದಲ್ಲಿ ಬಾರ್, ಲಾಡ್ಜ್, ರೆಸ್ಟೋರೆಂಟ್ ತೆರೆಯಲು ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯು ನಮಗೆ ದೊರೆತಿದ್ದು ಆ ಕಟ್ಟಡದ ಹಿಂದೆ ಮುಂದೆ ಅಕ್ಕಪಕ್ಕ ಜನವಸತಿ ಪ್ರದೇಶವಿದ್ದು ಹಾಗೂ ೧೦೦ ಮೀಟರ್ ವ್ಯಾಪ್ತಿಯಲ್ಲಿ ಶಾಲೆ ಮತ್ತು ದೇವಸ್ಥಾನವಿದೆ.
ಹತ್ತಾರು ವರ್ಷಗಳಿಂದ ಅಲ್ಲಿನ ನಿವಾಸಿಗಳಾದ ನಾವು ಇಲ್ಲಿ ಗೌರವದಿಂದ ಬದುಕುತ್ತಿದ್ದು ಮೊದಲೇ ಸೂಕ್ಷ್ಮ ಪ್ರದೇಶವಾದ ನಮ್ಮ ವೆಂಕಟೇಶ್ ನಗರದಲ್ಲಿ ಬಾರ್ ಮಾಡಲು ಅವಕಾಶ ನೀಡಿದರೆ ಗಲಾಟೆ ದೊಂಬಿ ಆಗಿ ಅಲ್ಲಿ ಬದುಕುವುದು
ನಮಗೆ ಕಷ್ಟವಾಗುತ್ತದೆ ಎಂದು ದೂರಿದ್ದಾರೆ.
ಬಾರ್ ತೆರೆಯಲು ಅವಕಾಶ ನೀಡಬಾರದು. ಒಂದು ವೇಳೆ ಬಾರ್ ತರೆಯಲು ಅನುಮತಿಸಿದರೆ ಅನಿವಾರ್ಯವಾಗಿ ನೂರಾರು ಸಂಖ್ಯೆಯ ಸ್ಥಳೀಯರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮೋಹನ್, ಶಿವಕುಮಾರ, ಮಧುಕುಮಾರ್, ಶಶಿಕುಮಾರ್, ಆನಂದ್, ಗುಣಸುಂದರಿ, ಸೆಲ್ವಿ ಇದ್ದರು.