ಶಿವಮೊಗ್ಗ, ಜ.೨೫: ಯಾವುದೇ ಮುಲಾಜಿಲ್ಲದೆ ಹಾಗೂ ರಾಜಕೀಯ ಒತ್ತಡಕ್ಕೆ ಒಳಗಾಗದೆ ಅಕ್ರಮ ಕ್ವಾರಿ ಗಳನ್ನು ಸೀಜ್ ಮಾಡುವಂತೆ, ಅಧಿಕೃತ ಗಣಿಗಾರಿಕೆಯವರಿಗೆ ಬ್ಲಾಸ್ಟಿಂಗ್ ಅನುಮತಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಅನದಿಕೃತ ೮೦ ಗಣಿಗಾರಿಕೆ ಕಂಡುಬಂದಿದ್ದು ಇದರಲ್ಲಿ ೪೦-೪೫ ದೊಡ್ಡ ಮಟ್ಟದಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ. ಇವುಗಳ ಭೂಮಿಯನ್ನೇ ವಾಪಾಸ್ ಪಡೆಯಲು ಸೂಚಿಸಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ, ಈ ಅಕ್ರಮ ಗಣಿಗಾರಿಕೆಯನ್ನ ತಡೆಯಲು ಚೆಕ್ ಪೋಸ್ಟ್ ಹೆಚ್ಚಿಸುವ ಬಗ್ಗೆ, ತಂಡಗಳ ರಚನೆಯ ಬಗ್ಗೆ, ಸಿಸಿ ಟಿವಿ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲು ಚಿಂತಿಸಲಾಗುತ್ತಿದೆ. ೧೧ ಭೂಮಿಗಳ ಪ್ರಕರಣ ಎಸಿ ಕೋರ್ಟ್‌ನಲ್ಲಿದ್ದು ಅವುಗಳ ಮಾಲೀಕರಿಗೆ ನೋಟೀಸ್ ನೀಡಿದರೂ ಮುಂದೆ ಬರುತ್ತಿಲ್ಲ. ಹಾಗಾಗಿ ಅವುಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದರು.
ಡಿಎಫ್‌ಒ ಶಂಕರ್ ಮಾತನಾಡಿ, ಅರಣ್ಯದಲ್ಲಿ ೨೩ ಗಣಿಗಾರಿಕೆ ನಡೆಯುತ್ತಿದೆ. ಅವುಗಳನ್ನ ವಶಪಡಿಸಲಾಗುವುದು ಎಂದರು.
ನಂತರ ಮಾತನಾಡಿದ ಸಚಿವ ಈಶ್ವರಪ್ಪ, ಈ ಎಲ್ಲಾ ದೊಡ್ಡ ಮತ್ತು ಸಣ್ಣ ಮಟ್ಟದ ಕ್ವಾರಿಗಳ ಭೂಮಿಯನ್ನ ವಾಪಾಸ್ ಪಡೆಯಬೇಕು. ಅಭಿವೃದ್ಧಿ ಹೆಸರಿನಲ್ಲಿ ಕಾಮಗಾರಿಗಳು ಸ್ಥಗಿತಗೊಳ್ಳದಂತೆ ೭೬ ಅಧಿಕೃತ ಗಣಿಗಾರಿಕೆಗಳಿಗೆ ಬ್ಲಾಸ್ಟಿಂಗ್ ಅನುಮತಿ ನೀಡಲು ಸೂಚಿಸಿದರು.
ಸ್ಪೋಟಕ ವಸ್ತುಗಳನ್ನ ಸಾಗಾಣಿಕೆಯೂ ಸಹ ಕಾನೂನು ಬಾಹಿರವಾಗಿದೆ. ಖರೀದಿ, ಸಾಗಾಣಿಕೆ, ಬ್ಲಾಸ್ಟ್ ಸಹ ಕಾನೂನು ಕ್ರಮದಲ್ಲಿ ಸಾಗಬೇಕು. ಅವುಗಳು ಆಗುತ್ತಿಲ್ಲವೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸ್ಪೋಟಕಗಳನ್ನ ಮಾರಾಟ ಮಾಡುವರು ಅಧಿಕೃತ ಒಬ್ಬನೇ ಇರುತ್ತಾನೆ. ಆದರೆ ಈ ಅಧಿಕೃತ ಮಾರಾಟಗಾರರ ಜೊತೆ ಈ ಅನದಿಕೃತ ಗಣಿಗಾರಿಕೆಯವರು ಖರೀದಿಸುವುದೇ ಇಲ್ಲ. ಇವರು ಬೇರೆ ರಾಜ್ಯಗಳಿಂದ ಖರೀದಿಸುತ್ತಾರೆ. ಇದನ್ನ ತಡೆಯಲು ಸಾಧ್ಯವಾಗುತ್ತಿಲ್ಲವೆಂದರು.
ಕ್ವಾರೆಯಲ್ಲಿ ಸತ್ತರೆ ಲೇಬರ್ ಇಲಾಖೆಯಿಂದ ಹಣ ಬರುತ್ತಿಲ್ಲ ಕಾರಣವೆಂದರೆ ಕ್ರಶರ್ ಲೇಬರ್ ನ ಮಾಹಿತಿ ಇಟ್ಟಿಲ್ಲ. ಹಾಗಾಗಿ ಪರಿಹಾರವಿಲ್ಲವೆಂದು ಲೇಬರ್ ಅಧಿಕಾರಿಗಳು ಮಾಹಿತಿ ನೀಡಿದರು.
ಜೀವ ವೈವಿಧ್ಯ ನಿಗಮದ ಅಧ್ಯಕ್ಷ ಅನಂತ ಹೆಗಡೆ ಅಶೀಶರ, ಜಿ.ಪಂ. ಸಿಇಒ ಎಂ.ಎಲ್.ವೈಶಾಲಿ, ಎಸ್‌ಪಿ ಶಾಂತರಾಜ್, ಉಪವಿಭಾಗಾಕಾರಿ ಟಿ.ವಿ.ಪ್ರಕಾಶ್ ಹಾಜರಿದ್ದರು.

.

By admin

ನಿಮ್ಮದೊಂದು ಉತ್ತರ

error: Content is protected !!