ಸಾಗರ(ಶಿವಮೊಗ್ಗ),ಆ.೧೯: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಸಾಗರದ ದೇಶಿ ಸೇವಾ ಪ್ರತಿಷ್ಠಾನದ ಶ್ರೀಧರ ಮೂರ್ತಿ ಆರೋಪಿಸಿದರು.
ಅವರು ಕರ್ನಾಟಕ ರಾಜ್ಯಪಾಲರ ವಿರುದ್ಧ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದ ಹೊರಗಡೆ ಪ್ರತಿಭಟನೆ ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಬೆಂಬಲ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯದ ಬಿಜೆಪಿಯವರ ಒತ್ತಡಕ್ಕೆ ಮಣಿದು ರಾಜ್ಯ ಪಾಲರು ಕರ್ನಾಟಕ ಸರ್ಕಾರದ ವಿರುದ್ಧ ಪಿತೂರಿ ನಡೆಸುವ ದುರುದ್ದೇಶ ದಿಂದ ಮುಖ್ಯಮಂತ್ರಿ ಸಿದ್ದ ರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ ಎಂದರು.
ಕಳೆದ ೪೦ ವರ್ಷದ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿಗಳ ಮೇಲೆ ಒಂದೇ ಒಂದು ಕಪ್ಪು ಚುಕ್ಕೆಯು ಕೂಡ ಇಲ್ಲದನ್ನು ಸಹಿಸದ ಬಿಜೆಪಿಯವರು ಈ ನೀಚ ಕೃತ್ಯಕ್ಕೆ ಕೈ ಹಾಕಿದ್ದಾರೆ. ಕೇಂದ್ರ ಸಚಿವ ಕುಮಾರ ಸ್ವಾಮಿಯವರ ಮೇಲೆ ಪ್ಯ್ರಾಸಿ ಕ್ಯೂಷನ್ ಗೆ ಅನುಮತಿ ಕೋರಿರುವ ಕಡತ ರಾಜ್ಯ ಪಾಲರ ಕಚೇರಿಯಲ್ಲಿ ದೂಳು ತಿನ್ನುತ್ತಿದೆ. ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ರಾಜ್ಯಪಾಲರ ಈ ರೀತಿಯ ನಡೆಯ ವಿರುದ್ಧ ಉಗ್ರ ಹೋರಾಟ ನಡೆಸುತ್ತೇವೆ ಎಂದರು.
ಹಿಂದುಳಿದ ವರ್ಗಗಳ ನಾಯಕ,ಬಡವರ ಮಹಿಳೆ ಯರ ಪರವಾದ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ನವರ ವಿರುದ್ಧ ಕಿರುಕುಳ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಚಂದ್ರಶೇಖರ ಶಿರಿವಂತೆ, ನಾಗರಾಜ ಗುಡ್ಡೇಮನೆ, ಶ್ರಿಕಾಂತ್, ದೇವು,ಮಂಜಪ್ಪ ಹಿರೆನ್ಲ್ಲೂರು,ಲಿಂಗರಾಜ್ ಆರೊಡಿ,ರವಿಕುಮಾರ್ ಜಂಬಗಾರು ಮೊದಲಾದವರು ಪಾಲ್ಗೊಂಡಿದ್ದರು.