ಶಿವಮೊಗ್ಗ, ಆಗಸ್ಟ್ ೧೪, : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ೨೦೨೪-೨೫ ಸಾಲಿನಲ್ಲಿ ಮೆಟ್ರಿಕ್ ನಂತರದ (ಸಾಮಾನ್ಯ ಪದವಿ ಮಟ್ಟದ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಮಾತ್ರ) ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ
ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಅರ್ಜಿಯನ್ನು ರಾಜ್ಯ ವಿದ್ಯಾರ್ಥಿ ನಿಲಯದ ತಂತ್ರಾಂಶ https://shp.karnataka.gov.in ರಲ್ಲಿ ಸೆ.೧೨ ರೊಳಗಾಗಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಶಿವಮೊಗ್ಗ – ೦೮೧೮೨-೨೨೦೨೦೬, ಶಿವಮೊಗ್ಗ ವಿಸ್ತರಣಾಧಿಕಾರಿಗಳು- ೯೭೩೧೯೭೯೧೩೧, ಸಾಗರ ವಿಸ್ತರಣಾಧಿಕಾರಿಗಳು-೯೧೧೦೨೭೮೦೩೧,
ಶಿವಮೊಗ್ಗ ಜಿಲ್ಲಾ ಮಾಹಿತಿ ಕೇಂದ್ರ-೭೬೭೬೮೮೮೩೮೮, ತಾಲೂಕು ಮಾಹಿತಿ ಕೇಂದ್ರಗಳಾದ
ಭದ್ರಾವತಿ-೯೫೩೮೮೫೩೬೮೦, ತೀರ್ಥಹಳ್ಳಿ-೮೮೬೧೯೮೨೮೩೫, ಶಿಕಾರಿಪುರ-೭೮೨೯೧೩೬೭೨೪, ಸಾಗರ-೭೩೩೮೨೨೨೯೦೭, ಸೊರಬ-೯೫೧೩೮೧೫೫೧೩, ಹೊಸನಗರ-೯೦೦೮೪೪೭೦೨೯ ಗಳನ್ನು ಸಂಪರ್ಕಿಸುವುದು.