ಶಿವಮೊಗ್ಗ,ಆ.೧೩: ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಹುಟ್ಟುಹಬ್ಬದ ಆಚರಣೆಗೆ ಹಾಕಿದ ಪ್ಲೆಕ್ಸ್‌ನ್ನು ಮಹಾನಗರ ಪಾಲಿಕೆ ಏಕಾಏಕಿ ತೆರವುಗೊಳಿಸಿರುವುದನ್ನು ಖಂಡಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದೆ.


ಸಂಗೊಳ್ಳಿ ರಾಯಣ್ಣ ಆ.೧೫ರಂದು ಜನಿಸಿದವರು ಬ್ರಿಟಿಷ್ ಆಳ್ವಿಕೆ ವಿರುದ್ಧ ಬಂಡಾಯವೆದ್ದ ಮೊದಲ ಮಹಿಳಾ ಆಡಳಿತಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಅಡಿಯಲ್ಲಿ ಕಿತ್ತೂರು ಸಾಮ್ರಾಜ್ಯದ ಸೇನಾ ಮುಖ್ಯಸ್ಥಾರಿಗೆ ಸೇವೆ ಸಲ್ಲಿಸಿದವರು.


೧೮೨೪ರ ದಂಗೆಯಲ್ಲಿ ಬ್ರಿಟಿಷ್‌ರಿಂದ ಬಂಧಿಸಲ್ಪಟ್ಟವರು. ಅಂತಿಮವಾಗಿ ಬ್ರಿಟಿಷರು ಅವರನ್ನು ಸೆರೆಹಿಡಿದು ಗಲ್ಲಿಗೇರಿಸಿದರು. ಅವರ ಸವಿನೆನಪಿಗಾಗಿ ಆ.೧೫ರ ಸ್ವಾತಂತ್ರ್ಯ ದಿನಾಚರಣೆಯಂದು ಸಂಗೊಳ್ಳಿರಾಯಣ್ಣ ಹುಟ್ಟುಹಬ್ಬ ಆಚರಣೆಯನ್ನು ನಗರದ ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ ಮತ್ತು ವಿನೋಬನಗರದಲ್ಲಿ ಪ್ಲೆಕ್ಸ್ ಹಾಕಿದ್ದು, ನಮ್ಮ ಸಂಘಟನೆಯ ಪದಾಧಿಕಾರಿಗಳಿಗೆ

ತಿಳಿಸದೇ ಪಾಲಿಕೆ ಏಕಾಏಕಿ ತೆರವುಗೊಳಿಸಿದ್ದು, ಸ್ವಾತಂತ್ರ್ಯ ಹೋರಾಟಗಾರನಿಗೆ ಮಾಡಿದ ಅವಮಾನವಾಗಿದೆ. ನಗರದಲ್ಲಿ ಹಲವು ರಾಜಕೀಯ ಪಕ್ಷಗಳ ಮುಖಂಡರುಗಳ ಪ್ಲೆಕ್ಸ್ ಏನು ಹಾನಿಯಾಗದೇ ರಾರಾಜಾರಿಸುತ್ತಿದ್ದು, ಅನೇಕ ವಾಣಿಜ್ಯ ಸಂಬಂಧಿತ ಫ್ಲೆಕ್ಸ್‌ಗಳು ಕೂಡ ಯಾವುದೇ ಅನುಮತಿ ಪಡೆಯದೇ ಅಲ್ಲಲ್ಲಿ ಹಾಕುತ್ತಿದ್ದಾರೆ. ಆಗ ಕಣ್ಮುಚ್ಚಿ ಕುಳಿತ್ತಿರುವ ಪಾಲಿಕೆ ಈಗ ಸಂಗೊಳ್ಳಿ

ರಾಯಣ್ಣ ಒಬ್ಬ ಹಿಂದುಳಿದ ವರ್ಗದ ಕುರುಬ ಜನಾಂಗದ ಸ್ವಾತಂತ್ರ್ಯ ವೀರನಾಗಿದ್ದು, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರನಾಗಿದ್ದು, ಇವರ ಪ್ಲೆಕ್ಸ್‌ನ್ನು ತೆರವು ಗೊಳಿಸಿದ ಸರ್ಕಾರಿ ಅಧಿಕಾರಿಗಳು ಪುನಃ ಪ್ಲೆಕ್ಸ್ ಹಾಕಿಕೊಡಬೇಕು. ಇಲ್ಲವಾದಲ್ಲಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಉಗ್ರ ಪ್ರತಿಭಟನೆ ನಡೆಸಿ ಪಾಲಿಕೆಗೆ ಮುತ್ತಿಗೆಯಾಕುತ್ತೇವೆ ಎಂದು ವೇದಿಕೆಯಿಂದ ಎಚ್ಚರಿಕೆ ನೀಡಲಾಯಿತು.


ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ವಾಟಾಳ್ ನಾಗರಾಜ್, ನಿತಿನ್ ರೆಡ್ಡಿ, ರವಿಸಾಧುಶೆಟ್ಟಿ, ಸತೀಶ್ ಗೌಡ, ಲೋಕೇಶ್ ಅಕ್ಬರ್ ಪಾಶಾ, ಚೇತನ್, ಮಾರುತಿ, ರಾಘವೇಂದ್ರ, ಪ್ರವೀಣ್, ಮಂಜುನಾಥ್ ಮೊದಲಾದವರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!