ಶಿವಮೊಗ್ಗ,ಆ.12:
ಇಲ್ಲಿನ ಬೊಮ್ಮನಕಟ್ಟೆಯಲ್ಲಿ ಗಾರೆ ಕೆಲಸ ಮಾಡುತ್ತಾ ಸುಖೀ ಸಂಸಾರ ನಡೆಸುತ್ತಿದ್ದ ಕುಟುಂಬದ ಮೂರನೇ ತರಗತಿ ಓದುತ್ತಿದ್ದ ಒಂಬತ್ತು ವರುಷದ ಬಾಲಕಿಗೆ ಕಾಣಿಸಿಕೊಂಡ ಕ್ಯಾನ್ಸರ್ ನಾಲ್ಕನೇ ಹಂತಕ್ಕೆ ತಲುಪಿದ್ದು, ಇಡೀ ಕುಟುಂಬ ಆತಂಕದಲ್ಲಿ ಮುಳುಗಿದೆ.
ಬೊಮ್ಮನಕಟ್ಟೆಯ ನಿವಾಸಿ ಗಾರೆ ಕೆಲಸ ಮಾಡುತ್ತಿದ್ದ ಸೋಮಶೇಖರ್ (ಮಧು) ಹಾಗೂ ದೀಪಿಕಾ ಅವರ ಮೊದಲ ಮಗಳು ವಚನಾ ಬೊಮ್ಮನಕಟ್ಟೆಯ ಶ್ರೀ ರಾಮಕೃಷ್ಣ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ ಪ್ರತಿಭಾನ್ವಿತೆ.
ಕಳೆದ ಎರಡು ತಿಂಗಳಿಂದ ವಚನಾ ಕೆಮ್ಮು ಶೀತ ಜ್ವರ ಉಸಿರಾಟ ತೊಂದರೆಯ ಅನಾರೋಗ್ಯದ ಸಮಯದಲ್ಲಿ ಶಿವಮೊಗ್ಗದ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಮೆಗಾನ್ ಅಸ್ಪತ್ರೆಗೆ ಹೋದಾಗ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ವಚನಾಗೆ ಕ್ಯಾನ್ಸರ್ ಪತ್ತೆಯಾಗಿದೆ. ಅದೂ ಮೂರನೇ ಹಂತ ಮುಗಿಸಿ ನಾಲ್ಕನೇ ಹಂತಕ್ಕೆ ಕಾಲಿಟ್ಟಿರುವುದು ಪತ್ತೆಯಾಗಿದೆ. ಅಂದಿನ ಬದುಕಿಗೆ ಅಂದಿನ ದುಡಿಮೆಗೆ ಸೀಮಿತವಾಗಿದ್ದ ಈ ಕುಟುಂಬ ಆತಂಕಕ್ಕೆ ಸಿಲುಕಿದೆ.
ಇಲ್ಲಿಯವರೆಗೆ ದುಡಿದ ಹಣವಷ್ಟೆ ಅಲ್ಲ ಸಾಕಷ್ಟು ಸಾಲ ಮಾಡಿ ಮಗಳಿಗೆ ಚಿಕಿತ್ಸೆ ಕೊಡಿಸಿದ ಸೋಮಶೇಖರ್ ಈಗ ಮುಂದಿನ ದಾರಿ ಕಾಣದೇ ಸಹಾಯ ಕೋರಿದ್ದಾರೆ.
ವಚನಾ ಉಳಿಸಲು ಸಾಕಷ್ಟು ಹಣದ ಅಗತ್ಯ ಇದ್ದು, ಆತ್ಮೀಯರು ಉದಾರ ನೆರವು ನೀಡುವಂತೆ ವಿನಂತಿಸಿದ್ದಾರೆ.
ಬಂಧನ ಬ್ಯಾಂಕ್, ನೆಹರೂರಸ್ತೆ, ಬೇದ್ರೆ ಕಾಂಪ್ಲೆಕ್ಸ್, ಶಿವಮೊಗ್ಗದ ಅಕೌಂಟ್ ಗೆ ಸಹಾಯ ಮಾಡಲು ವಿನಂತಿಸಿದ್ದಾರೆ.
ಅಕೌಂಟ್ ನಂ: 20200019850755,
ಐಎಫ್ಎಸ್ ಸಿ ನಂ: BDBL0001892
ಪೋನ್ ಫೇ ನಂ: 7483252917
(ಸೋಮಶೇಖರ್)