-ರವಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ನಿಕಟಪೂರ್ವ ಅಧ್ಯಕ್ಷರು KSPSTA ಶಿವಮೊಗ್ಗ

*2017 ರ ವೃಂದ ಹಾಗೂ ನೇಮಕಾತಿ ನಿಯಮಾನುಸಾರ ಈವರೆಗೂ SSLC,TCH, PUC ಇಂಟರ್ಷಿಪ್,PUC TCH,PUC Ded,ವಿದ್ಯಾರ್ಹತೆ ಮೇಲೆ ನೇಮಕಾತಿ ಹೊಂದಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರು (PST- 1-5) ಎಂದು ವರ್ಗೀಕರಿಸಿ, ಪದನಾಮಕರಿಸಿ ನಾವುಗಳೆಲ್ಲಾ PST ಶಿಕ್ಷಕರುಗಳು ಎಂದು ಈಗಾಗಲೇ ತೀರ್ಮಾನಿಸಲಾಗಿದೆ. ಆದರೂ ಮಕ್ಕಳ ಹಿತದೃಷ್ಟಿಯಿಂದ ಈವರೆಗೂ 1 ರಿಂದ 7/ 8 ನೇತರಗತಿಯವರೆಗೂ ಬಸವನ ತರಹ ತಾಳ್ಮೆಯಿಂದ ಬೋಧಿಸುತ್ತಿದ್ದೇವೆ ವಿನಃ ಅಸಹಾಯಕತೆ ಇಂದಲ್ಲ.


ನಮಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾಲ ಕಾಲಕ್ಕೆ ಪರಿಪೂರ್ಣತೆ ಹೊಂದಿದ ಜ್ಞಾನ ಸಂಪಾದಿಸುತ್ತಾ ಉನ್ನತ ವಿದ್ಯಾರ್ಹತೆ ಗಳನ್ನು ಪಡೆದು ಸಮಕಾಲೀನ ಶೈಕ್ಷಣಿಕ ಚಿಂತನೆಗಳಿಗೆ ಸಿದ್ದರಾಗಿ ಸರ್ಕಾರ ಹಾಗೂ ಇಲಾಖೆಯು ನಿಗದಿಪಡಿಸಿದ ಅರ್ಹ ವಿದ್ಯಾರ್ಹತೆ ಮಾನದಂಡಗಳಿಗೆ ಪದವಿ ಹಾಗೂ ಶೈಕ್ಷಣಿಕ ತರಬೇತಿಗಳನ್ನು ನಮ್ಮ ಸ್ವಂತ ಖರ್ಚಿನಲ್ಲಿ ಪಡೆದು ವಿದ್ಯಾರ್ಹತೆ ಇದ್ದರೂ 25,30,ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುವ ಶಿಕ್ಷಕರಿಗೆ 2017 C&R ನಿಯಮದಿಂದ ಬಡ್ತಿಗಳಿಂದ ವಂಚಿತರಾಗಿದ್ದೇವೆ ಇದನ್ನು ಸರಿಪಡಿಸಲು ತಾವುಗಳೆಲ್ಲಾ ಆಗಸ್ಟ್ 12 ಬೆಂಗಳೂರು ಚಲೋ ಹೋರಾಟಕ್ಕೆ ಬರಲು ವಿನಂತಿ.


ಇಂದು ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ಅಪಾರ ಶೈಕ್ಷಣಿಕ ಅನುಭವ, ಬೋಧನೆ ,ಶೈಕ್ಷಣಿಕ ಮಾರ್ಗದರ್ಶನದಿಂದ ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೂ ನಮ್ಮಗಳ ಬೋಧನೆಯಿಂದ ಕಲಿತು ಲಕ್ಷಾನುಗಟ್ಟಲೇ ಶಿಕ್ಷಕರು,ವಕೀಲರು, ವೈದ್ಯರು, ತಹಶೀಲ್ದಾರು, ಜಿಲ್ಲಾಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ಕಲಾವಿದರಾಗಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಇದ್ದಾರೆ.ಈ ಎಲ್ಲ ಸಾಧಕರು ಅವರುಗಳೇ ತಮ್ಮ ಅನುಭವಗಳನ್ನು ಹೇಳಿಕೊಳ್ಲುವಾಗ ಇಂದಿನ ಮುಖ್ಯಮಂತ್ರಿಗಳಾದ ಸನ್ಯಾನ್ಯ ಸಿದ್ದರಾಮಯ್ಯರಿಂದ ಹಿಡಿದು ಅನೇಕ ಗಣ್ಯ ಮಹನೀಯರು, ಸಾಧಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರುಗಳನ್ನು ನೆನೆದು ನಮ್ಮ ಇಂದಿನ ಸಾಧನೆಗೆ ಪ್ರಾಥಮಿಕ ಶಾಲಾ ಶಿಕ್ಷಕರೇ ಕಾರಣ ಎಂದು ಹೇಳುತ್ತಾರೆ. ಅಂತಹ ಸಾಧಕರಿಗೆ ನಮ್ಮ ಈ ಹೋರಾಟದ ಮೂಲಕ ನಮಗೆ ಆಗಿರುವ ಅನ್ಯಾಯದ ಕುರಿತು ಅವರುಗಳಿಗೆ ಮನವರಿಕೆ ಮಾಡಿ ಅವರ ಸಹಕಾರದ ಮೂಲಕ ನಮ್ಮ ಬೇಡಿಕೆ ಈಡೇರಿಸಿಕೊಳ್ಲಲು ಈ ಹೋರಾಟದಲ್ಲಿ ಪಾಲ್ಗೊಳ್ಲಬೇಕು.

ಇದನ್ನೂ ಓದಿ

https://tungataranga.com/?p=33564
ನಂಬಿಕೆ ದ್ರೋಹಿಗಳ ಮನಸುಗಳೇ “ಹೊಲಸು”, ಗಜೇಂದ್ರಸ್ವಾಮಿ ಅವರ ನೆಗಿಟೀವ್ ಥಿಂಕಿಂಗ್ ಅಂಕಣ ಓದಿ
ಸಂಪೂರ್ಣ ಅಂಕಣ ಓದಲು ಮೇಲಿನ ಲಿಂಕ್ ಬಳಸಿ
ತುಂಗಾತರಂಗ ಗುಂಪಲ್ಲಿ ಇಲ್ಲದವರು ಇಲ್ಲಿ ಸೇರಿ
https://chat.whatsapp.com/IzhQLfWK8ud0fRtId61ehs


*ಆದರೆ ಇಂದಿನ C& R ನಿಯಮಗಳ ಪ್ರಕಾರ PST ಪ್ರಾಥಮಿಕ ಶಾಲಾ ಶಿಕ್ಷಕರು, GPT ಶಿಕ್ಷಕರ ಬಡ್ತಿಗಾಗಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತರಹ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಪ್ಲೇವುಡು, ಪೆನ್, ಪೇಪರ್ ಹಿಡಿದುಕೊಂಡು ಪರೀಕ್ಷಾ ಕೊಠಡಿಯಲ್ಲಿ ಕುಳಿತು,ಈಗಾಗಲೇ ನಮ್ಮಿಂದ ಕಲಿತು ಸರ್ಕಾರಿ ಉನ್ನತ ಹುದ್ದೆ ಪಡೆದ ವಿದ್ಯಾರ್ಥಿಗಳು ನಮಗೆ ಪರೀಕ್ಷಾ ಮೇಲ್ವಿಚಾರಕರಾಗಿ,ಪರೀಕ್ಷಾ ಕೇಂದ್ರದ ಮುಖ್ಯಸ್ಥರಾಗಿ,ಮೌಲ್ಯಮಾಪಕರಾಗಿ ಹೀಗೆ ಎಲ್ಲ ಉನ್ನತ ಶ್ರೇಣಿಗಳಲ್ಲಿದ್ದು ,ಈ ಇಷ್ಟೊಂದು ಶೈಕ್ಷಣಿಕ ಅನುಭವ ಇರುವ ನಾವುಗಳು ಅಂದರೆ PST 1-5 ಶಿಕ್ಷಕರು ಪರೀಕ್ಷೆ ಬರೆದು ಅದರಲ್ಲಿ ಉತ್ತಮ ಅಂಕ,ಶ್ರೇಣಿಗಳನ್ನು ಪಡೆದು ಅವರು ನಿಗದಿ ಪಡಿಸಿರುವ 67:33 ರ (67 – ನೇರ ನೇಮಕಾತಿ ಹಾಗೂ 33 ಬಡ್ತಿ ಮೂಲಕ ಹುದ್ದೆ ತುಂಬುವುದು) ಅನುಪಾತದಲ್ಲಿ ಆಯ್ಕೆಯಾಗಿ ಇಲಾಖೆ ನಡೆಸುವ ಕೌನ್ಸಿಲಿಂಗ್ ಮೂಲಕ ಈ ಇಳೀ ವಯಸ್ಸಿನಲ್ಲಿ ಜಿಲ್ಲೆಯ ಯಾವುದೇ ಮೂಲೆಯಲ್ಲಿದ್ದರೂ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು,ಬೇಡವೆಂದು ನಿರಾಕರಿಸಿದಲ್ಲಿ 10,15,20,25,30 ವರ್ಷಗಳ ಕಾಲ ಮಿತಿ ಬಡ್ತಿ ಕೂಡಾ ಕಳೆದುಕೊಳ್ಳಬೇಕು ಈಗಾಗಲೇ ನೇಮಕವಾದ GPT ಶಿಕ್ಷಕರ ಹಿರಿತನದ ಕೆಳಗೆ ಕೆಲಸ ಮಾಡಬೇಕು ಇದು ನಮ್ಮ ಇಂದಿನ PST – 1-5 ಶಿಕ್ಷಕರ ವಾಸ್ತವಿಕ ಸ್ಥಿತಿ. ಯಾವ ಇಲಾಖೆಯಲ್ಲಿಯೂ ಇಲ್ಲದ ಇಂತಹ C& R ನಮಗೆ ಜಾರಿಗೆ ತಂದಿದ್ದು ಇದರ ಬದಲಾವಣೆಯ ಹೋರಾಟಕ್ಕಾಗಿ ತಾವುಗಳು ಸ್ವ ಇಚ್ಛೆಯಿಂದ ಸಂಘಟನೆ ಕರೆದ ಈ ಹೋರಾಟಕ್ಕೆ ತಾವು ತಮ್ಮೆಲ್ಲ ಸ್ನೇಹಿತರ ಜೊತೆ ಬಂದು ಹೋರಾಟಕ್ಕೆ ಸಹಕರಿಸ ಬೇಕು.

https://tungataranga.com/?p=33568
ಹೋಲಿಸಿ ಪರಚಿಕೊಂಡ್ರು…?!, ತುಂಗಾತರಂಗ ನೆಗಿಟೀವ್ ಅಂಕಣದ ಸುತ್ತ…., ಜನಾಭಿಪ್ರಾಯ ಓದಿ
ಸಂಪೂರ್ಣ ಅಂಕಣ ಓದಲು ಲಿಂಕ್ ಬಳಸಿ


*2017 ರ C& R ನಿಯಮಾವಳಿಯ ಪ್ರಕಾರ ಒಟ್ಟು 1,80,000 ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕೇಡರ್ ಸೃಷ್ಟಿ ಮಾಡಿ ವರ್ಗೀಕರಿಸಿ ಅದರಲ್ಲಿ 1,20,000 ಶಿಕ್ಷಕರು PST1-5 ಎಂದು, ಹಾಗೂ 51000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು GPT 6-8 ಎಂದು ವರ್ಗೀಕರಿಸಿ ಅದರಲ್ಲಿ ಈವರೆಗೂ 16, 877 ಶಿಕ್ಷಕರನ್ನು ನೇರ ನೇಮಕಾತಿ ಮೂಲಕ ತುಂಬಲಾಗಿದೆ.ಉಳಿದ ಹುದ್ದೆಗಳಿಗಾದರೂ 1,20,000,ಕ್ಕೂ ಹೆಚ್ಚಿರುವ ನಾವುಗಳು ಹೋರಾಟ ಮಾಡಿ GPT ಶಿಕ್ಷಕರಾಗಿ ಸೇವಾ ಜೇಷ್ಟಾತೆಯ ಸಂರಕ್ಷಣೆ ಮೂಲಕ ಪರೀಕ್ಷೆ ರದ್ದು ಗೊಳಿಸಿ ಸೇವಾ ಹಿರಿತನದ ಮೂಲಕ GPT ಶಿಕ್ಷಕರಾಗಿ ಬಡ್ತಿ ಹೊಂದಬೇಕು ಅದಕ್ಕಾಗಿ ಆಗಸ್ಟ್ 12 ಹೋರಾಟಕ್ಕೆ ಶಾಲೆಗಳನ್ನು ಮುಚ್ಚಿ ತಾವುಗಳು ಕಡ್ಡಾಯವಾಗಿ ಬರಲೇಬೇಕು.


*ಸಹಶಿಕ್ಷಕ ಹುದ್ದೆಯಿಂದ ಮುಖ್ಯಶಿಕ್ಷಕ,ಹಿರಿಯ ಮುಖ್ಯಶಿಕ್ಷಕ,ಪ್ರೌಢಶಾಲಾ ಸಹ ಶಿಕ್ಷಕ ಹುದ್ದೆಗೆ ಈ ಹಿಂದಿನಂತೆ ನಮ್ಮ ಸೇವಾ ಹಿರಿತನ ಪರಿಗಣಿಸಿ ಕಾಲ ಕಾಲಕ್ಕೆ ಬಡ್ತಿ ನೀಡುವಂತೆ ಸರ್ಕಾರ, ಇಲಾಖೆ ಆದೇಶ ಹೊರಡಿಸಬೇಕು. ಆ ಕಾರಣಕ್ಕಾಗಿ ತಾವುಗಳೆಲ್ಲಾ ಹೋರಾಟಕ್ಕೆ ಸಂಘಟನೆ ಜೊತೆ ಕೈ ಜೋಡಿಸಿ ನಮ್ಮ ಬೇಡಿಕೆ ಈಡೇರಿಕೆಗೆ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನೊಂದ PST ಎಲ್ಲ ಶಿಕ್ಷಕರೂ ಶಾಲೆ ಬಂದ್ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಗಸ್ಟ್ 12 ರ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಈ ಹೋರಾಟ ಯಶಸ್ವಿಗೊಳಿಸಬೇಕೆಂದು ನಿಮ್ಮಲ್ಲಿ ವಿನಂತಿಸುವೆ.

By admin

ನಿಮ್ಮದೊಂದು ಉತ್ತರ

error: Content is protected !!