ಶಿವಮೊಗ್ಗ : ಆಗಸ್ಟ್ ೦೭ : ಶಿವಮೊಗ್ಗ ಜಿಲ್ಲೆಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿಯಿರುವ ಪುರುಷ ಮತ್ತು

ಮಹಿಳಾ ಗೃಹರಕ್ಷಕರ ಒಟ್ಟು ೧೮೯ ಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಸಿದ್ದರಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಭಾರತೀಯ ಪ್ರಜೆಯಾಗಿದ್ದು, ೧೯ ರಿಂದ ೪೫ ವರ್ಷ ವಯೋಮಿತಿಯ, ೧೦ನೇ ತರಗತಿ ಪಾಸಾಗಿರುವ, ವೈದ್ಯಕೀಯವಾಗಿ ಸಶಕ್ತರಾಗಿರುವ ಹಾಗೂ ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು/ಆರೋಪ ಅಥವಾ ಅಪರಾಧಿಯಾಗಿರದವರು ಅರ್ಜಿ ಸಲ್ಲಿಸಬಹುದಾಗಿದೆ.


ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ,

ಶಾಂತ ಮ್ಯಾನ್‌ಷನ್, ೨ನೇ ಮಹಡಿ, ಗಾಂಧಿನಗರ ಮುಖ್ಯರಸ್ತೆ, ಶಿವಮೊಗ್ಗ, ಅಥವಾ ಜಿಲ್ಲೆಯ

ಎಲ್ಲಾ ಗೃಹರಕ್ಷಕ ದಳ ಘಟಕ/ಉಪ ಘಟಕಗಳ ಕಚೇರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆ.೧೨ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಗೌರವ ಸಮಾದೇಷ್ಠರಾದ ಡಾ. ಚೇತನ ಹೆಚ್.ಪಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಹೆಚ್ಚಿನ ಮಾಹಿತಿಗಾಗಿ ದೂ.ಸಂ.: ೦೮೧೮೨-೨೯೫೬೩೦ / ೨೫೫೬೩೦ ಗಳನ್ನು ಸಂಪರ್ಕಿಸುವುದು.

By admin

ನಿಮ್ಮದೊಂದು ಉತ್ತರ

error: Content is protected !!