ಶಿವಮೊಗ್ಗ,ಜು.31:
ಶಿವಮೊಗ್ಗ ನಗರದಲ್ಲಿ 3 ಶ್ರೀ ಬಾಲಸುಬ್ರಹ್ಮಣ್ಯಂ ಸ್ವಾಮಿ ಜಾತ್ರೆ ವಿಶೇಷ ನೋಡಿ ಶ್ರೀ ಬಾಲಸುಬ್ರಹ್ಮಣ್ಯಂ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ (ಹರೋ ಹರ ಜಾತ್ರೆ) ಶಿವಮೊಗ್ಗ ಸಂಸದರು ಬಿ. ವೈ. ರಾಘವೇಂದ್ರರವರ ಬೇಟಿಯ ಮೂಲಕ ವಿಶೇಷ ಪ್ರಾರ್ಥನೆಯೊಂದಿಗೆ ಶುಭಾರಂಭಿಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಬಾಲಸುಬ್ರಹ್ಮಣ್ಯಂ ಸ್ವಾಮಿ ಟ್ರಸ್ಟ್ ಸಮಿತಿಯವರಾದ ಡಿ.ರಾಜಶೇಖರಪ್ಪ, ಎಂ. ಪಿ ಸಂಪತ್, ಎಂ. ಪಿ ಗಣೇಶ್ ಮತ್ತು ಶ್ರೀ ರೋಜಾ ಗುರೂಜಿ ಅಂತರರಾಷ್ಟ್ರೀಯ ಟ್ರಸ್ಟ್ ನ ಟ್ರಸ್ಟಿರವರಾದ ಸಂದೇಶ್ ಷಣ್ಮುಗಂ (M. Tech) ಜೊತೆಗಿದ್ದರು.
ಮುಂಬರುವ ದಿನಗಳಲ್ಲಿ ಶ್ರೀ ಬಾಲಸುಬ್ರಹ್ಮಣ್ಯಂ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಮತ್ತು ದೇವಸ್ಥಾನದ ಹಲವು ಯೋಜನೆಗಳ ಕುರಿತಂತೆ ಚರ್ಚಿಸಲಾಯಿತು.