ಶಿವಮೊಗ್ಗ, ಜುಲೈ 31, 2024:  ವಿಭಿನ್ನ ರಕ್ತದ ಗುಂಪಿನ ವ್ಯಕ್ತಿಗೆ  ಕಿಡ್ನಿ ಟ್ರಾನ್ಸ್ ಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಶಿವಮೊಗ್ಗದ ಎನ್ಯು ಹಾಸ್ಪಿಟಲ್ಸ್ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿದೆ. 65 ವರ್ಷ ವಯಸ್ಸಿನ ಅಜ್ಜಿ 21 ವರ್ಷದ ಮೊಮ್ಮಗಳಿಗೆ ತನ್ನ ಮೂತ್ರಪಿಂಡವನ್ನು ದಾನ ಮಾಡಿದ್ದಾರೆ. ಇದೊಂದು ತುಂಬಾ ಅಪರೂಪದ ಪ್ರಕರಣವಾಗಿದ್ದು, ಎನ್ ಯು ಆಸ್ಪತ್ರೆ ವೈದ್ಯರ ನೈಪುಣ್ಯತೆಗೆ ಸಾಕ್ಷಿಯಾಗಿದೆ. 

ಈ ಪ್ರಕರಣದ ವೈಶಿಷ್ಟ್ಯವೆಂದರೆ ಮೂತ್ರಪಿಂಡ ನೀಡುತ್ತಿರುವ ದಾನಿಯ ಹಾಗೂ ತೆಗೆದುಕೊಳ್ಳುತ್ತಿರುವ ರೋಗಿಯ ರಕ್ತದ ಗುಂಪು ವಿಭಿನ್ನವಾಗಿತ್ತು. ವೈದ್ಯಕೀಯವಾಗಿ ಇದೊಂದು ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿದ್ದು, ವಿಭಿನ್ನ ರಕ್ತದ ಗುಂಪಿನವರಿಗೆ ಟ್ರಾನ್ಸ್ ಪ್ಲಾಂಟ್ ಮಾಡುವುದು ಸುಲಭ ಸಾಧ್ಯವಾಗಿರುವದಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿ ನವೀನ ತಂತ್ರಜ್ಞಾನಗಳನ್ನು ಬಳಸಿ ಎನ್ಯು ಆಸ್ಪತ್ರೆಯು ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ಯಶಸ್ಸು ಸಾಧಿಸಿದ್ದಾರೆ. ಆ ಮೂಲಕ ಮಲೆನಾಡು ಭಾಗದಲ್ಲಿ ಹೊಸದೊಂದು ವೈದ್ಯಕೀಯ ಅಚ್ಚರಿಯನ್ನು ಸೃಷ್ಟಿಸಿ ಈ ಭಾಗದ ಜನತೆಯಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಈ ರೀತಿಯ ಪ್ರಕರಣದಲ್ಲಿ ಪ್ರಪ್ರಥಮ ಬಾರಿಗೆ ಕೈಗೊಂಡ ಯಶಸ್ವಿ ಶಸ್ತ್ರಚಿಕಿತ್ಸೆ ಇದಾಗಿದ್ದು, ಈ ಸಾಧನೆಯ ಕೀರ್ತಿ ಎನ್ಯು ಆಸ್ಪತ್ರೆಗೆ ಸಲ್ಲುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಇಂಥಹ ಸಂಕೀರ್ಣ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಲು ಇದು ಪ್ರೇರಣೆಯಾಗಲಿದೆ. ಮಲೆನಾಡು ಭಾಗದ ಜನರು ಮೂತ್ರಪಿಂಡಕ್ಕೆ ಸಂಬಂಧಿತ ಸಮಸ್ಯೆಗಳಿಗೆ ನಿಖರ ಪರಿಹಾರ ಕಂಡುಕೊಳ್ಳಲು ಎನ್ ಯು ಆಸ್ಪತ್ರೆ ನೆರವಾಗಲಿದೆ.

ಈ ಪ್ರಕರಣವನ್ನು ಗಮನಿಸುವುದಾದರೆ ಯುವತಿಯು (ರೋಗಿ) ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಳು. ಮೇ 2023ರಲ್ಲಿ ಆಕೆಗೆ ಕಿಡ್ನಿ ಸಮಸ್ಯೆ ಇರುವುದನ್ನು ವೈದ್ಯರು ದೃಢಪಡಿಸಿದ್ದರು. ಆಕೆಗೆ 2023ರ ಡಿಸೆಂಬರ್ ನಲ್ಲಿ ಡಯಾಲಿಸಿಸ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ರೋಗಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಆಕೆಯ ಅಜ್ಜಿಯೇ ಕಿಡ್ನಿ ನೀಡಲು ಮುಂದಾದರು. ಆದರೆ ಇಲ್ಲೊಂದು ಚಿಕ್ಕ ಸಮಸ್ಯೆ ಎದುರಾಗಿತ್ತು. ಅಜ್ಜಿ ಹಾಗೂ ಮೊಮ್ಮಗಳ ರಕ್ತದ ಗುಂಪು ಬೇರೆ, ಬೇರೆಯಾಗಿತ್ತು. ಮಲೆನಾಡು ಭಾಗದಲ್ಲಿ ಇಲ್ಲಿಯವರೆಗೆ ಹೀಗೆ ವಿಭಿನ್ನ ರಕ್ತದ ಗುಂಪಿನ ಪ್ರಕರಣದಲ್ಲಿ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಕೈಗೊಂಡಿರಲಿಲ್ಲ. ಹೀಗಾಗಿ ಇದು ಸಾಧ್ಯವಾಗುತ್ತದಾ ಎಂಬ ಆತಂಕವಿತ್ತು. ಆದ್ರೆ ನಿಪುಣ ಹಾಗೂ ಅನುಭವಿ ತಜ್ಞ ವೈದ್ಯರನ್ನ ಹೊಂದಿರುವ ಶಿವಮೊಗ್ಗದ ಎನ್ ಯು ಆಸ್ಪತ್ರೆಯು ಈ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಲು ಮುಂದಾದರು ಅದರಂತೆ ಹಲವಾರು ಸವಾಲುಗಳ ನಡುವೆಯೇ 2024ರ ಏಪ್ರಿಲ್ನಲ್ಲಿ ಚಿಕಿತ್ಸೆಯನ್ನು ಕೈಗೊಳ್ಳಲಾಯಿತು. 

ಶಿವಮೊಗ್ಗದ ಎನ್ಯು ಆಸ್ಪತ್ರೆಯ ಖ್ಯಾತ ಯುರಾಲಜಿಸ್ಟ್ ಮತ್ತು ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಪ್ರದೀಪ್ ಎಮ್ ಜಿ, ಡಾ. ಪ್ರವೀಣ್ ಮಾಳವದೆ (ಅಸೋಸಿಯೇಟ್ ಮೆಡಿಕಲ್ ಡೈರೆಕ್ಟರ್ ಅಂಡ್ ಟ್ರಾನ್ಸ್ ಪ್ಲಾಂಟ್ ಫಿಸಿಷಿಯನ್) ಹಾಗೂ ಅರವಳಿಕೆ ತಜ್ಞರಾದ ಡಾ. ಕಾರ್ತಿಕ್ ಮತ್ತು ಡಾ. ಅನುಷಾ ಅವರ ಬೆಂಬಲದೊಂದಿಗೆ ಸಂಕೀರ್ಣ ಕಿಡ್ನಿ ‌ಟ್ರಾನ್ಸ್‌ ಪ್ಲಾಂಟ್ ಪ್ರಕ್ರಿಯೆಯನ್ನು ನಿಖರವಾಗಿ ಯೋಜಿಸಿ ಕಾರ್ಯಗತಗೊಳಿಸಲಾಯಿತು. 

ರೋಗಿಗೆ ಶಸ್ತ್ರಚಿಕಿತ್ಸೆ ಕೈಗೊಂಡ ಬಳಿಕ ಆಕೆಯ ಅಜ್ಜಿಯಿಂದ ಪಡೆದ ಮೂತ್ರಪಿಂಡವು ಸಮರ್ಥವಾಗಿ ಕಾರ್ಯನಿರ್ವಹಿಸಲಾರಂಭಿಸಿತು. ಅದು ನಿರೀಕ್ಷಿತ ಸಮಯಕ್ಕಿಂತ ಮೊದಲೇ ರೋಗಿಯು ಚೇತರಿಸಿಕೊಂಡಿದ್ದು, ಸಮರ್ಥ ವೈದ್ಯರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಈ ಯಶಸ್ಸು ಮಲೆನಾಡಿಗರು ಇಂಥಹ ಪ್ರಕರಣಗಳಲ್ಲಿ ನಿರಾಂತಕವಾಗಿ ಶಸ್ತ್ರಚಿಕಿತ್ಸೆಗೆ ಮುಂದಾಗಲು ವಿಶ್ವಾಸ ಮೂಡಿಸಿದೆ.

ಈ ಕುರಿತಂತೆ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಎನ್ಯು ಆಸ್ಪತ್ರೆಯ ವೈದ್ಯ ಡಾ. ಪ್ರವೀಣ್ ಮಾಳವದೆ (ಅಸೋಸಿಯೇಟ್ ಮೆಡಿಕಲ್ ಡೈರೆಕ್ಟರ್ ಅಂಡ್ ಟ್ರಾನ್ಸ್ ಪ್ಲಾಂಟ್ ಫಿಸಿಷಿಯನ್) ಅವರು ಮಾತನಾಡಿ, ʼಈ ಪ್ರಕರಣವು ಕಿಡ್ನಿ ಟ್ರಾನ್ಸ್‌ ಪ್ಲಾಂಟ್ ಚಿಕಿತ್ಸೆಯಲ್ಲಿನ ಹೊಸ ಸಾಧ್ಯತೆಗಳ ಜೊತೆಗೆ ಕೌಟುಂಬಿಕ ಪ್ರೀತಿ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಇದರ ಜೊತೆಗೆ ನಮ್ಮ ತಂಡದ ಸಮರ್ಪಣೆ ಮತ್ತು ನಿರಂತರ ಪ್ರಯತ್ನಗಳಿಂದ ವಿಭಿನ್ನ ರಕ್ತದ ಗುಂಪಿನ ವ್ಯಕ್ತಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿಸಲಾಯಿತುʼ ಎಂದರು. 

ಈ ಯಶಸ್ವಿ ಚಿಕಿತ್ಸೆಯು ಯುವತಿಯ ಜೀವವನ್ನು ಉಳಿಸಿದ್ದು ಮಾತ್ರವಲ್ಲದೆ ಮಲೆನಾಡು ಭಾಗದಲ್ಲಿ ಮೂತ್ರಪಿಂಡದ ಸಮಸ್ಯೆ ಹೊಂದಿರುವವರಿಗೆ ಹೊಸ ಆಶಾಕಿರಣವಾಗಿದೆ. ಈ ಯಶಸ್ಸಿನ ಮೂಲಕ ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಪ್ರದೇಶಗಳಲ್ಲಿ ಕಿಡ್ನಿ ಸಮಸ್ಯೆ ಹೊಂದಿರುವವರಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ ತನ್ನ ಬದ್ಧತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಪ್ರತಿ ವ್ಯಕ್ತಿಯು ಗುಣಮಟ್ಟದ ಆರೈಕೆ ಮತ್ತು ಆರೋಗ್ಯ ಸೇವೆಯನ್ನು ಪಡೆಯಲು ಅರ್ಹ ಎಂಬುದನ್ನ ಖಾತರಿಪಡಿಸಿದೆ.

ಎನ್ ಯು ಆಸ್ಪತ್ರೆಯು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಲ್ಲಿ ನಿರಂತರವಾಗಿ ಸಫಲವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಗುಣಮಟ್ಟದ ಆರೈಕೆ ಮತ್ತು ಸೂಕ್ತ ಔಷಧ ಪದ್ಧತಿಗಳನುಸಾರ ಸಮಾನ ಚಿಕಿತ್ಸೆಯನ್ನು ಪಡೆಯುತ್ತಾನೆ ಎಂದು ಖಾತ್ರಿಪಡಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ: 6364409651, 6364466240

ಶಿವಮೊಗ್ಗದ ಎನ್ ಯು ಆಸ್ಪತ್ರೆ:

ಎನ್ ಯು ಆಸ್ಪತ್ರೆಯು ಮೂತ್ರಪಿಂಡ ಮತ್ತು ಮೂತ್ರಶಾಸ್ತ್ರ ಆರೈಕೆಯಲ್ಲಿ ಪರಿಣತಿ ಹೊಂದಿದ ಪ್ರಮುಖ ಆರೋಗ್ಯ ಕೇಂದ್ರವಾಗಿದೆ. ಮಲೆನಾಡು ಪ್ರದೇಶದಲ್ಲಿ ಜನರ ಕ್ಷೇಮವನ್ನು ಹೆಚ್ಚಿಸಲು ಸಮಗ್ರ ಮತ್ತು ಸಹಾನುಭೂತಿಯ ಸೇವೆಗಳನ್ನು ಒದಗಿಸುತ್ತಿದೆ. ಈ ಆಸ್ಪತ್ರೆಯು ತನ್ನ ಅತ್ಯಾಧುನಿಕ ಸೌಲಭ್ಯಗಳು, ತಜ್ಞ ವೈದ್ಯಕೀಯ ವೃತ್ತಿಪರರು ಮತ್ತು ರೋಗಿಗಳ ಕೇಂದ್ರಿತ ಚಿಕಿತ್ಸಾ ವಿಧಾನಕ್ಕೆ ಹೆಸರುವಾಸಿಯಾಗಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!