ಶಿವಮೊಗ್ಗ,ಜು.೩೦: ಅಧಿಕಾರ ಇಲ್ಲದಿದ್ದರೆ ಪಕ್ಷ ಸಂಘಟನೆ ಮಾಡುವುದು ಬಹಳ ಕಷ್ಟ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದ್ದಾರೆ.


ಅವರು ಇಂದು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮುಂಬರುವ ಪಾಲಿಕೆ ಹಾಗೂ ಜಿ.ಪಂ. ಚುನಾವಣಾ ಪೂರ್ವಬಾವಿ ಸಿದ್ದತ ಸಭೆ ಹಾಗೂ ಅಭಿನಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ನಾವು ಪ್ರಮಾಣಿಕವಾಗಿ ಜನರ ಧ್ವನಿಯಾಗಿ ಕೆಲಸ ಮಾಡುವಾಗ ಯಾವ ಅಧಿಕಾರಿಯೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ನಮ್ಮ ನಾಯಕರಾದ ಕುಮಾರಸ್ವಾಮಿಯವರು ಕೇಂದ್ರ ಮಂತ್ರಿಯಾಗಿದ್ದು, ಪಕ್ಷಕ್ಕೆ ಬಲ ಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಿಂದ ರಾಜ್ಯದಲ್ಲಿ ಮತ್ತೊಮ್ಮೆ ಮೈತ್ರಿ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದರು.


ಆದರೆ ಪಕ್ಷ ಸಂಘಟನೆಯಲ್ಲಿ ನಿರ್ಲಕ್ಷ್ಯ ಬೇಡ. ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಉಡಾಫೆ ಮಾಡದೇ, ಗಂಭೀರವಾಗಿ ಪರಿಗಣಿಸಿ ಜೆಡಿಎಸ್ ಜಿಲ್ಲೆಯಲ್ಲಿ ಭದ್ರಾವಾಗಿದೆ ಎಂಬುವುದನ್ನು ಸಾಭೀತುಪಡಿಸಬೇಕು. ಆ ಶಕ್ತಿ ನಮ್ಮ ಕಾರ್ಯಕರ್ತರಲ್ಲಿ ಇದೆ ಎಂದರು.
ಶಿಕ್ಷಕರ ಕ್ಷೇತ್ರದಲ್ಲಿ ಗೆಲ್ಲಿಸಿದ್ದೀರಿ, ನಿಮ್ಮ ಕೆಲಸ ಕಾರ್ಯ ಮಾಡುವ ಜವಬ್ದಾರಿ ನನ್ನ ಮೇಲಿದೆ. ಕುಮಾರಸ್ವಾಮಿ ಮತ್ತೊಮ್ಮೆ ಸಿ.ಎಂ. ಆಗುವುದನ್ನು ನಾವು ನೋಡಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂದರು.


ಶಾಸಕಿ ಶಾರದ ಪೂರ‍್ಯನಾಯ್ಕ್ ಮಾತನಾಡಿ, ಭೋಜೇಗೌಡ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಶಿಕ್ಷಕರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದರಿಂದ ಮೊದಲ ಪ್ರಾಶಸ್ತ್ಯದ ಮತದಲ್ಲೇ ಭಾರೀ ಲೀಡ್‌ನಲ್ಲಿ ಗೆಲ್ಲಿಸಿದ್ದಾರೆ ಎಂದರು.


ಕಾರ್ಯಕರ್ತರು ಹೆಚ್ಚು ಶ್ರಮ ಹಾಕಿ ಪಕ್ಷ ಸಂಘಟನೆ ಮಾಡಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಸಂಘನಾತ್ಮಕವಾಗಿ ಪಕ್ಷ ಕಟ್ಟಲು ನಾಯಕರು ಸೇರಿದ್ದೇವೆ. ಗೆದ್ದ ನಾಯಕರಿಗೆ ಸನ್ಮಾನ ಮಾಡುವ ಸಂದರ್ಭ ಇದಾಗಿದೆ. ಪಕ್ಷದ ಸದಸ್ಯತ್ವವನ್ನು ಕೂಡ ಪದಾಧಿಕಾರಿಗಳು ಮುತುವರ್ಜಿ ವಹಿಸಿ ಮಾಡಿದಾಗ, ನಮ್ಮ ಪಕ್ಷಕ್ಕೆ ಮತದಾರರು ಹೆಚ್ಚಾಗುತ್ತಾರೆ. ಮುಂಬರುವ ಚುನಾವಣೆಗೆ ಸಿದ್ಧವಾಗಬೇಕಾಗಿದೆ ಎಂದರು.


ಕಾಂಗ್ರೆಸ್ ಪಕ್ಷದ ದುರಾಡಳಿತ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸೇರಿದಂತೆ ಕಾಂಗ್ರೆಸ್ ನಾಯಕರು ದರೋಡೆ ಮಾಡಿದ್ದಾರೆ. ೩೯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿಕ್ಷಕರ ಕ್ಷೇತ್ರ ಇದಾಗಿದ್ದು, ಸದಸ್ಯತ್ವ ಹೆಚ್ಚಳ ಮಾಡಬೇಕು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಕಂಗಲಾಗಿದೆ. ಇವತ್ತೆ ಜೆಡಿಎಸ್ ಸದಸ್ಯತ್ವ ಅಭಿಯಾನ ಪ್ರಾರಂಭಿಸಿ ಎಂದರು.


ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಪಕ್ಷದ ವತಿಯಿಂದ ಭೆಜೆಗೌಡರನ್ನು ಸನ್ಮಾನಿಸಿ ಇಂದಿನ ಕಾರ್ಯಕ್ರಮ ಚುನಾವಣೆಗೆ ಸಿದ್ಧತೆ, ಸದಸ್ಯತ್ವ ಹೆಚ್ಚಳ ಮಾಡುವುದು, ಭೋಜೆಗೌಡರಿಗೆ ಮತ್ತು ಗೆಲುವಿಗೆ ಕಾರಣರಾದ ಕಾರ್ಯಕರ್ತರನ್ನು ಅಭಿನಂದಿಸುವುದಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಮಕೃಷ್ಣ, ಗೋವಿಂದಪ್ಪ, ಶಾರದ ಅಪ್ಪಾಜಿಗೌಡ ,ಮಾಜಿ ಪಾಲಿಕೆ ಸದಸ್ಯ ರಘು ಬಾಲರಾಜ್, ದೀಪಕ್‌ಸಿಂಗ್, , ಮಧು, ಯೋಗೀಶ್, ರಾಜಮ್ಮ, ಗೀತಾ ಸತೀಶ್, ಗಂಧದ ಮನೆ ನರಸಿಂಹ, ನಿಖಿಲ್, ರಮೇಶ್ ನಾಯ್ಕ್, ಹನುಮಂತಪ್ಪ ಮೊದಲಾದವರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!