ಶಿವಮೊಗ್ಗ: ಇಲ್ಲಿಯ ನವುಲೆಯಲ್ಲಿ ಅಭಿವೃದ್ಧಿ ಪಡಿಸಿದ ಸರ್ಕಾರಿ ನೌಕರರ ನೀಲಮ್ಮ ಜ್ಞಾನೇಶ್ವರ್ ಬಡವಾಣೆಗೆ ತಕ್ಷಣ ಕುಡಿಯುವ ನೀರು ಮತ್ತು ರಸ್ತೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಅಲ್ಲಿನ ನಿವಾಸಿಗಳ ಸಂಘದ ಪದಾಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ರರಿಗೆ ಮನವಿ ಸಲ್ಲಿಸಿದರು.,


ಈ ಬಡಾವಣೆ ಮಹಾನಗರ ಪಾಲಿಕೆಗೆ ಒಳಪಡುತ್ತದೆ. ಈಗಾಗಲೇ ಇಲ್ಲಿ ಸುಮಾರು ೨೫ ಮನೆಗಳು ನಿರ್ಮಾಣವಾಗಿದೆ. ೧೦ ಮನೆಗಳು ನಿರ್ಮಾಣದ ಹಂತದಲ್ಲವೆ. ಇನ್ನೊಂದು ವರ್ಷದಲ್ಲಿ ಇನ್ನೂ ಸುಮಾರು ೨೫ ಮನೆಗಳಾಗುವ ಸಾಧ್ಯತೆ ಇದೆ.

ಸರಿಯಾದ ಸಮಯಕ್ಕೆ ಎಲ್ಲರೂ ಪಾಲಿಕೆಗೆ ಸಂದಾಯುವಾಗಬೇಕಾದ ನೀರು ಇತ್ಯಾದಿ ತೆರಿಗೆಗಳನ್ನು ಪಾವತಿಸುತ್ತೀದ್ದೆವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ಕಳೆದ ೨-೩ ವರ್ಷಗಳ ಹಿಂದೆಯೇ ಬಡವಾಣೆ ಸಂಪೂರ್ಣ ಪಾಲಿಕೆಗೆ ಹಸ್ತಾಂತರವಾದರೂ ಪಾಲಿಕೆ ನಮಗೆ ಇನ್ನೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿರುವುದಿಲ್ಲ ಎಂಬುದನ್ನು ಉಲ್ಲೇಖಿಸಲಾಗಿದೆ.


ಈ ಬಡಾವಣೆಯಿಂದ ಕೇವಲ ೭೫ ಆಡಿ ದೂರದಲ್ಲಿ, ದೊಡ್ಡ ನೀರಿನ ಟ್ಯಾಂಕ್ ಇದೆ. ಬಡಾವಣೆಗೋಸ್ಕರ ಹೊಸದಾಗಿ ನೀರಿನ ಟ್ಯಾಂಕ್ ನಿರ್ಮಿಸುವ ಅವಶ್ಯಕತೆ ಎರುವುದಿಲ್ಲ (ಸಾನ್ವಿ ಲೇ ಔಟ್), ಕುಡಿಯುವ ನೀರಿನ ಪೈಪ್‌ನ್ನೂ ಕೂಡ ಬಡವಾಣೆಗೆ ಹಾಕಲಾಗಿದೆ. ಕೇವಲ ಸಂಪರ್ಕ ಕೊಡುವುದು ಬಾಕಿ ಇರುತ್ತದೆ. ಆದರಿಂದ ಸದರಿ ಬಡವಾಣೆಗೆ ಹತ್ತಿರ ಇರುವ ದೊಡ್ಡ ಟ್ಯಾಂಕಿನಿಂದ ಕುಡಿಯುವ ನೀರಿನ ಪೂರೈಕೆ ಮಾಡಿ ನಿವಾಸಿಗಳಿಗೆ ನಾಗರೀಕ ಸೌಲಭ್ಯ ಕೊಡಬೇಕೆಂದು ಪದಾಧಿಕಾರಿಗಳು ತಿಳಿಸಿದರು.


ಅಲ್ಲದೇ ನಮ್ಮ ಬಡವಾಣೆಗೆ ಸಂಪರ್ಕ ಕಲ್ಪಿಸುವ ನವುಲೆ ರಸ್ತೆಯಲ್ಲಿ ಅರುಣೋದಯ ಶಾಲೆಯಿಂದ ಮೆಟ್ರಿಕ್ ನಂತರದ ಸರ್ಕಾರಿ ಬಾಲಕರ ವಸತಿ ನಿಲಯದ ವರಗಿನ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿ ಓಡಾಡಲು ಬಾರದಂತಾಗಿದೆ. ಹಾಗೆ ಬೊಮ್ಮನಕಟ್ಟೆ ಆಶ್ರಯ ಬಡವಾಣೆಯ

ಆಟೋಸ್ಟಾಂಡಿನಿಂದ ಸಾನ್ವಿ ಲೇಔಟ್ ಮಾರ್ಗವಾಗಿ (ಈಗ ಸರ್ಕಾರಿ ಹಿಂದುಳಿದ ವರ್ಗದ ಬಾಲಕಿಯರ ಹಾಸ್ಟೆಲ್ ನಿರ್ಮಾಣವಾಗುತ್ತಿರುವ ರಸ್ತೆ) ನಮ್ಮ ಬಡವಾಣೆಗೆ ತಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹದಗೆಟ್ಟು ಸಂಚರಿಸಲು ಅಸಾಧ್ಯವಾಗಿದೆ. ಈ ರಸ್ತೆಯನ್ನೂ ಡಾಂಬರೀಕರಣ ಮಾಡಿಕೊಡಬೇಕೆಂದು ಆಗ್ರಹಿಸಲಾಗಿದೆ.


ಆಯುಕ್ತರ ಪರವಾಗಿ ಉಪ ಆಯುಕ್ತ (ಎಡ್ಮಿನ್) ತುಷಾರ ಹೊಸೂರು ಅವರು ಮನವಿ ಸ್ವೀಕರಿಸಿ, ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಾಗಿ ಹೇಳಿದರು
ಸಂಘದ ಅಧ್ಯಕ್ಷ ಬಾಲಾಜಿ ದೇಶಪಾಂಡೆ, ಪ್ರಮುಖರಾದ ಡಾ.ಬಾಲಕೃಷ್ಣ ಹೆಗಡೆ, ಡಾ.ಪುರುಷೋತ್ತಮ, ಸದಾನಂದ, ಪ್ರಸನ್ನ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!