ಸತತ ಮೂರನೆಯಬಾರಿಗೆ ಜನಾದೇಶ ಪಡೆದ ಶ್ರೀ ನರೇಂದ್ರಮೋದಿ ಯವರ 3.0 ಸರ್ಕಾರದ ಪೂರ್ಣ ಪ್ರಮಾಣದ ಪ್ರಥಮ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣ,
ಯುವಜನಸ್ನೇಹಿ, ನಾವೀನ್ಯತೆ ಪೂರಕವಾದ ಮತ್ತು ಮಧ್ಯಮ ವರ್ಗದ ಜನರ ಅನೂಕೂಲಕರವಾದ ಬಜೆಟ್ ಘೋಷಿಸಿದೆ.
ಹೊಸ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆ
ವಿನಾಯಿತಿ, ಕುಟುಂಬ ಪಿಂಚಣಿ ಮೇಲಿನ ಮಿತಿ ಸರಳೀಕರಣ,
ಸ್ಟಾರ್ಟ್ ಆಪ್ ಗಳಿಗೆ ಉತ್ತೇಜಿಸುವ ಸಲುವಾಗಿ ಏಂಜಲ್ ತೆರಿಗೆ ರದ್ದುಗೊಳಿಸುವ ನಿರ್ಧಾರ,
ಕಂಪನಿ ತೆರಿಗೆಯನ್ನು ಕಡಿಮೆಗೊಳಿಸಿದ ನಿರ್ಧಾರ, ಪ್ರವಾಸೋದ್ಯಮ ಉತ್ತೇಜಿಸಲು ಕೈಗೊಂಡಿರುವ ವಿಷ್ಣುಪಾದ ಕಾರಿಡಾರ್ ಯೋಜನೆ ಅತ್ಯುತ್ತಮ ನಿರ್ಧಾರವಾಗಿದೆ.
ಇನ್ನು ರೈತರಿಗೆ ಹಾಗೂ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಕೃಷಿ ಆಧಾರಿತ ಹೊಸ ಹೊಸ ಸಂಶೋಧನೆಗೆ ಉತ್ತೇಜಿಸಿರುವುದು ಸ್ವಾಗತಾರ್ಹ.