ನಗರದ ಪಿಇಎಸ್ ಐಎಎಮ್‌ಎಸ್ ಡಿಗ್ರಿ ಕಾಲೇಜಿನಲ್ಲಿ ಸಿಂಥೆಸಿಸ್ ಫೋರಂ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸ್ವದೇಶೀ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರದ ಮಹತ್ವವನ್ನು ತಿಳಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ವಾಣಿಜ್ಯೋದ್ಯಮದ ಕುರಿತು ಮತ್ತು ಸ್ವ ಆರ್ಥಿಕ ಸ್ವಾವಲಂಬನೆಯ ಬಗ್ಗೆ ಅರಿವನ್ನು ಮೂಡಿಸುವುದು ಇದರ ಉದ್ದೇಶವಾಗಿತ್ತು. ಪದವಿಯ ಮೂರೂ ವರ್ಷದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಒಂದು ತಂಡದಲ್ಲಿ ೫ ವಿದ್ಯಾರ್ಥಿಗಳಂತೆ ಒಟ್ಟು ೧೬ ತಂಡಗಳು ಭಾಗವಹಿಸಿದ್ದವು. ಹೋಳಿಗೆ, ಅಕ್ಕಿರೊಟ್ಟಿ, ಹಾಲುಬಾಯಿ, ಪರೋಟ, ಜಾಮೂನು, ಹಲ್ವಾ, ಗಿರ‍್ಮಿಟ್, ನಿಪ್ಪಟ್ಟು, ನಿಂಬುಸೋಡ, ಪಾನಕ, ಪ್ರೂಟ್ ಸಲಾಡ್, ಫಲೂದಾ, ಪಾನಿಪುರಿ, ಕಡ್ಲೆಕಾಳು ಉಸಳಿ, ಪಾಯಸ, ಕೋಸಂಬರಿ ವಿವಿಧ ರೀತಿಯ ಆಹಾರ ಹಾಗೂ ತಂಪು ಪಾನೀಯಗಳನ್ನು ವಿದ್ಯಾರ್ಥಿಗಳು ಫುಡ್ ಮೇಳದಲ್ಲಿ ಉಣಬಡಿಸಿದರು. ಆಹಾರ ಮೇಳವನ್ನು ಪಿಇಎಸ್ ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜಕರಾದ ಡಾ. ನಾಗರಾಜ. ಆರ್ ಅವರು ಉದ್ಘಾಟಿಸಿದರು. ತೀರ್ಪುಗಾರರಾಗಿ ಪಿಇಎಸ್ ಪಬ್ಲಿಕ್ ಸ್ಕೂಲ್‌ನ ಸಂಚಾಲಕರಾದ ಶ್ರೀಮತಿ ರೋಸಿ ಸೀಕ್ವೆರಾ ಮತ್ತು ಪಿಇಎಸ್ ಐಟಿಎಂನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಮಾನಸ ಎಂ ಬಿ ಅವರುಗಳು ಆಗಮಿಸಿದ್ದರು. ಆಹಾರ ಮೇಳದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣ ಎ, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ದಿಲೀಪ್ ಕುಮಾರ್. ಎಸ್.ಡಿ, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಮೋಹನ್ ಡಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಮಂಜುನಾಥ ಹೆಚ್ ಆರ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರೂಪ ಡಿ. ಎಸ್, ಸಿಂಥೆಸಿಸ್ ಫೋರಂನ ಸಂಚಾಲಜಕರಾದ ಶ್ರೀ ಮಹಮದ್ ಇಫ್ತೀಕರ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಪಿಇಎಸ್ ಪಬ್ಲಿಕ್ ಶಾಲೆ, ಪಿಇಎಸ್ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಪಾಲ್ಗೊಂಡಿದ್ದರು.