ಶಿವಮೊಗ್ಗ,ಜ.18:
ಕೊರನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮೈಸೂರು ತಾಳಗುಪ್ಪ ಇಂಟರ್ ಸಿಟಿ ರೈಲು ಜ.20 ರಿಂದ ತಾತ್ಕಾಲಿಕವಾಗಿ ಆರಂಭವಾಗಲಿದೆ.
ಜ.20 ರಿಂದ ಜ.31 ರ ವರೆಗೆ ಈ ಮಾರ್ಗದ ರೈಲು ತಾತ್ಕಾಲಿಕವಾಗಿ ಚಲಿಸಲಿದೆ. ಪ್ರಯಾಣಿಕರ ಆಧಾರದ ಮೇಲೆ ಇದು ಮುಂದುವರೆಯುವ ಸಾಧ್ಯತೆಯೂ ಹೆಚ್ಚಿದೆ. ಎಂದಿನಂತೆ ಕೊರನ ಮಾರ್ಗಸೂಚಿಯ ಅಡಿಯಲ್ಲಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಗಳು ಖಡ್ಡಾಯವಾಗಿ ಅನುಸರಿಸುವ ಮಾರ್ಗಸೂಚಿಗಳಾಗಿವೆ.
ಟಿಕೆಟ್ ಸಹ ಎಲ್ಲಾ ಎಕ್ಸ್ ಪ್ರೆಸ್ ನಲ್ಲಿ ಈಗ ಅನುಸರಿಸಲಾಗುತ್ತಿರುವ ಆನ್ ಲೈನ್ ಮೂಲಕವೇ ಪಡೆದು ಸಂಚರಿಸಬೇಕಿದೆ. ಸ್ಟೇಷನ್ ನಲ್ಲಿ ಯಾವುದೇ ಕಾರಣಕ್ಕೂ ಟಿಕೆಟ್ ನೀಡಲಾಗುವುದಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಮೈಸೂರು ಮತ್ತು ತಾಲಳಗುಪ್ಪದ ನಡುವೆ 06295 ಕ್ರಮ ಸಂಖ್ಯೆ ಜ.20 ರಂದು ಬೆಳಿಗ್ಗೆ 6 ಗಂಟೆಗೆ ಮೈಸೂರು ಬಿಡಲಿದ್ದು, ಕೆ.ಆರ್ ಪೇಟೆ, ಹಾಸನ್ (8-00) ಅರಸೀಕೆರೆ(8-40), ಕಡೂರು ಬೀರೂರು ತರೀಕೆರೆ ಭದ್ರಾವತಿ ಮೂಲಕ ಶಿವಮೊಗ್ಗವನ್ನ 10-45 ಕ್ಕೆತಲುಪಲಿದೆ. ಶಿವಮೊಗ್ಗವನ್ನ 10-50 ಕ್ಕೆ ಬಿಡಲಿದ್ದು ಸಾಗರದ ಮೂಲಕ ತಾಳಗುಪ್ಪವನ್ನ ಮಧ್ಯಾಹ್ನ 1-15 ಕ್ಕೆ ಸೇರಲಿದೆ.
ನಂತರ ತಾಳಗುಪ್ಪವನ್ನ 06296 ಕ್ರಮ ಸಂಖ್ಯೆಯ ರೈಲು ಅಂದು ಮಧ್ಯಾಹ್ನ 3 ಗಂಟೆಗೆ ಬಿಡಲಿದ್ದು, ಸಂಜೆ 4-50 ಶಿವಮೊಗ್ಗ ತಲುಪಲಿದೆ. 4-55 ನ್ನ ಶಿವಮೊಗ್ಗ ರೈಲ್ವೆ ನಿಲ್ದಾಣವನ್ನ ಬಿಡಲಿದ್ದು, ಭದ್ರಾವತಿ ಕಡೂರು ಬೀರೂರು ಅರಸೀಕೆರೆ(6-50) ಹಾಸನ್(7-40) ಕೆ.ಆರ್ ಪೇಟೆ ಮೂಲಕ ರಾತ್ರಿ 10-15 ರಂದು ತಲುಪಲಿದೆ.