ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣವು ಫುಟ್ಬಾಲ್ ಲೀಗ್ ಪಂದ್ಯಾವಳಿಯ ಹಬ್ಬಕ್ಕೆ ಸಾಕ್ಷಿಯಾಗಿದೆ. ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಫುಟ್ ಬಾಲ್ ಲೀಗ್ ಪಂದ್ಯಾವಳಿ ಅಯೋಜಿಸಿದ್ದು, ಕ್ರೀಡಾಸಕ್ತರ ಗಮನವೀಗ ನೆಹರು ಕ್ರೀಡಾಂಗಣ ದ ಮೇಲಿದೆ.

ಹಲವು ಕಾರಣಗಳಿಗಾಗಿ ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ಫುಟಬಾಲ್ ಲೀಗ್ ಪಂದ್ಯಾವಳಿಗೆ
ಜಿಲ್ಲಾ ಫುಟ್ ಬಾಲ್ ಸಂಸ್ಥೆಯು ಈ ವರ್ಷ ದಿಂದ ಮತ್ತೆ ಚಾಲನೆ ನೀಡಿದೆಯಲ್ಲದೆ, ಈ ಬಾರಿ ಜಿಲ್ಲೆಯ ಎಲ್ಲಾ ಫುಟ್ ಬಾಲ್ ಕ್ಲಬ್ ಗಳನ್ನು ತನ್ನ ತೆಕ್ಕೆಗೆ ತೆಗದುಕೊಂಡು ಪಂದ್ಯಾವಳಿ ಆಯೋಜಿಸಿರುವುದು ವಿಶೇಷವಾಗಿದೆ.

ಜೂನ್ ೨೪ ರಿಂದಲೇ ಲೀಗ್ ಪಂದ್ಯಾವಳಿ ಆರಂಭಗೊಂಡಿದ್ದು, ಆರಂಭಿಕ ವಾಗಿ ಶಿವಮೊಗ್ಗ ನಗರದ ಹೆಸರಾಂತ ತಂಡಗಳಾದ ಜಾನ್ ಮನ್ರೋಜ್ ಮತ್ತು ಮಜೆಂಟ್ ಕ್ಲಬ್ ಗಳ ನಡುವೆ ಪಂದ್ಯ ನಡೆಯಿತು. ನಿನ್ನೆ ಮಧ್ಯಾಹ್ನ ಸುಮಾರು ೩.೩೦ಕ್ಕೆ ಪಂದ್ಯ ಆರಂಭವಾಗುವ ಸಮಯಕ್ಕೆ ಮಳೆ ಸುರಿದು, ಕ್ರೀಡಾಂಗಣ ವೆಲ್ಲ ಕೆಸರಾಯಿತಾದರೂ, ಈ ಕಸೆರಿನಲ್ಲಿ ಆಟಗಾರರು ಉತ್ಸಾಹದಿಂದ ಆಟವಾಡಿದ್ದು , ನೋಡುಗರಲ್ಲಿ ಕುತೂಹಲ ಮೂಡಿಸಿತು.

ಆಟದ ಆರಂಭಕ್ಕೂ ಮುನ್ನ ಲೀಗ್ ಫುಟ್ ಬಾಲ್ ಪಂದ್ಯಾವಳಿಗೆ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎಸ್ , ಚನ್ನಬಸಪ್ಪ ಅವರು ಚಾಲನೆ ನೀಡಿ, ಮಾತನಾಡಿದರು. ಕ್ರೀಡೆಗಳು ಮಾನಸಿಕ, ದೈಹಿಕ ಆರೋಗ್ಯಕ್ಕೆ ಸಹಕಾರಿ. ಈ ನಿಟ್ಟಿನಲ್ಲಿ ಜಿಲ್ಲಾ ಫುಟ್ ಬಾಲ್ ಸಂಸ್ಥೆಲೀಗ್ ಪಂದ್ಯಾವಳಿ ಆಯೋಜಿಸಿದ್ದು ಒಳ್ಳೆಯ ಕೆಲಸ ಎಂದು ಬಣ್ಣಿಸಿದರಲ್ಲದೆ, ಅತ್ಯಂತ ಶ್ರಮದಾಯಕ ಆಟವಾದ ಫುಟ್ ಬಾಲ್ ಪಂದ್ಯಾವಳಿಗೆ ಜನರಿಂದ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ ಎಂದರು.

ಜಿಲ್ಲಾ ಫುಟ್ ಬಾಲ್ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಶ್ರೀನಾಥ್ ಮಾತನಾಡಿ, ಜಿಲ್ಲಾ ಮಟ್ಟದ ಫುಟ್ ಬಾಲ್ ಪಂದ್ಯಾವಳಿಯು ಕಳೆದ ಐದು ವರ್ಷಗಳಿಂದ ಹಲವು ಕಾರಣಕ್ಕೆ ನಿಂತು ಹೋಗಿತ್ತು. ಆದರೆ ಈ ಸಂಸ್ಥೆಯ ಹೊಸ ಸಮತಿ ರಚನೆಯ ಮೂಲಕ ಲೀಗ್ ಪಂದ್ಯಾವಳಿಗೆ ಮತ್ತ ಚಾಲನೆ ನೀಡಲಾಗಿದೆ. ಇನ್ನುಮುಂದೆ ಪ್ರತಿ ವರ್ಷವೂ ನಡೆಸಿಕೊಂಡುಬರಲು ನಿರ್ಧರಿಸಲಾಗಿದೆ ಎಂದರಲ್ಲದೆ, ಲೀಗ್ ಪಂದ್ಯಾವಳಿಗೆ ಸರ್ಕಾರದಿಂದ ಯಾವುದೇ ಅನುದಾನ ಇಲ್ಲ. ಆದಾಗ್ಯೂಸಂಸ್ಥೆಯ ಪದಾಧಿಕಾರಿಗಳೇ ಹಣ ಹಾಕಿ ಲೀಗ್ ಪಂದ್ಯಾವಳಿ ಆಯೋಜಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಫುಟ್ ಬಾಲ್ ಸಂಸ್ಥೆಯ ಪದಾಧಿ ಕಾರಿಗಳಾದ ವಿಜಯ್ ಕುಮಾರ್, ವಿನ್ಸೆಂಟ್, ಸುರೇಶ್, ಮೈಕೆಲ್ ಕಿರಣ್, ರಾಮಣ್ಣ ಪಟ್ಟು ಕಿಲ್ಲಣ್ಣ, ಕೆ. ಹರ್ಷ ಭೋವಿ,ಸುನೀಲ್ ಡಿಸೋಜಾ, ಮಧುಸೂದನ್ ಅಪ್ರುದಸ್ ಸ್ವಾಮಿ, ಆರಿಫ್ ಅಹಮದ್, ಜ್ಞಾನ ಪ್ರಕಾಶ್, ಪತ್ರಕರ್ತ ದೇಶಾದ್ರಿ ಹೊಸ್ಮನೆ ಸೇರಿದಂತೆ ಮತ್ತಿತರರು ಇದ್ದರು.

ಜೂನ್ ೨೪ ರಿಂದ ಆರಂಭಗೊಂಡು ೧೨ ದಿನಗಳ ಕಾಲ ನಡೆಯುವ ಈ ಲೀಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ನಗರದ ಒಟ್ಟು ೯ ತಂಡಗಳು ಪಾಲ್ಗೊಂಡಿವೆ. ಆರಂಭಿಕ ಪಂದ್ಯವಾಗಿ ಸೋಮವಾರ ಜಾನ್ ಮನೋಜ್ ಮತ್ತು ಮಜೆಂಟ್ ಕ್ಲಬ್ ತಂಡಗಳ ನಡುವೆ ಪಂದ್ಯ ನಡೆಯಿತು. ಇವರೆಡು ತಂಡಗಳ ನಡುವಣ ಸೆಣಸಾಟದಲ್ಲಿ ಜಾನ್

ಮನ್ರೋಜ್ ತಂಡವು ಮಚೆಂಟ್ ತಂಡವನ್ನು ೧-೦ ಗೋಲುಗಳಿಂದ ಸೋಲಿಸಿತು. ಹಾಗೆಯೇ ಎರಡನೇ ಪಂದ್ಯದಲ್ಲಿ ಮೊಹಮದನ್ ಸ್ಪೋಟಿಂಗ್ ಮತ್ತು ಮಲ್ನಾಡ್ ಕಿಕರ್ಸ್ ನಡುವೆ ಸೆಣಸಾಟ ನಡೆಯಿತು. ಈ ಪಂದ್ಯದಲ್ಲಿ ಮಲ್ನಾಡ್ ಕಿಕರ್ಸ್ ತಂಡವು ಜಾನ್ ಮನೋಜ್ ವಿರುದ್ಧ ೦-೬ ಗೋಲುಗಳಿಂದ ಗೆಲುವು ಸಾಧಿಸಿತು. ಮಲ್ನಾಡ್ ಕಿಕರ್ಸ್ ತಂಡದ ಅಕ್ರಮಣಕಾರಿ ಆಟದ ಮುಂದೆ ಮಹಮೊದನ್ ಸ್ಪೋಟಿಂಗ್ ತಂಡವು ಸೆಣಸಾಡದೆ ಕುಸಿದು ಹೋಯಿತು.

By admin

ನಿಮ್ಮದೊಂದು ಉತ್ತರ

error: Content is protected !!