ತೀರ್ಥಹಳ್ಳಿ,ಜೂ.16:
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಂ. ಪಿ. ಆದರ್ಶ ಅವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ 2022– 23ನೇ ಸಾಲಿನ ಚಿನ್ನದ ಪದಕದ ಪುರಸ್ಕಾರವನ್ನು ನೀಡಿ ಘೋಷಣೆ ಮಾಡಲಾಗಿದೆ.


ವಲಯ ಅರಣ್ಯ ಅಧಿಕಾರಿ ಆದರ್ಶ್ ಅವರು ಈ ಹಿಂದೆ ಹೊಸನಗರ ತಾಲೂಕಿನ ಹೊಸನಗರ, ನಗರದ ವಲಯ ಅರಣ್ಯ ಅಧಿಕಾರಿ ಸೇವೆ ಸಲ್ಲಿಸಿ ಕಳೆದ ಎರಡು ವರ್ಷಗಳಿಂದ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ಅರಣ್ಯ ಭೂಮಿ ಸಂರಕ್ಷಣೆ, ನೈಸರ್ಗಿಕವಾಗಿರುವ ಅರಣ್ಯ ಪುನರುತ್ಪತ್ತಿ ಸೇರಿದಂತೆ ಹತ್ತಾರು ಉತ್ತಮ ಕೆಲಸ ಮಾಡಿದ ವಿಷಯಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಮಂಡಗದ್ದೆಯ ವಲಯ ಅರಣ್ಯ ಅಧಿಕಾರಿಯಾಗಿ ಆದರ್ಶರವರು ಅರಣ್ಯ ಮತ್ತು ಅರಣ್ಯ ಭೂಮಿಯನ್ನು ಸಂರಕ್ಷಣೆ ಮಾಡುವುದರ ಜೊತೆಯಲ್ಲಿ ಅನೇಕ ಭೂ ಒತ್ತುವರಿ, ಕಬಳಿಕೆಯನ್ನು ಪತ್ತೆ ಹಚ್ಚಿ ಕ್ರಮ ಜರುಗಿಸುವುದರೊಂದಿಗೆ ಹೊಸ ಒತ್ತುವರಿಗಳನ್ನು ತೆರವುಗೊಳಿಸುವುದು ಹಿಂದಿನ ಒತ್ತುವರಿ, ದಬ್ಬಾಳಿಕೆಗಳನ್ನು ನ್ಯಾಯಾಲಯದಲ್ಲಿ ಮತ್ತು ಇಲಾಖೆಯ ಮಟ್ಟದಲ್ಲಿ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಕ್ರಮ ಜರುಗಿಸಲು ಮುಂದಾಗಿದ್ದರು.

ಅರಣ್ಯ ಭೂಮಿಯ ಅಕ್ರಮ ಮರ ಕಡತಲೆ, ವನ್ಯಜೀವಿಗಳ ಬೇಟೆಯಾಡಿ ಪ್ರಾಣಿ ಗಳ ಹತ್ತೆ, ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮರಳು, ಮಣ್ಣು ತೆಗೆದು ಸಾಗಿಸುವುದು ಮುಂತಾದ ಅನೇಕ ಗಂಭೀರ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಿಸುವುದರ ಜೊತೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದನ್ನು ಸರ್ಕಾರ ಪರಿಗಣಿಸಿ ಮುಖ್ಯಮಂತ್ರಿ ಗಳ ಚಿನ್ನದ ಪದಕ ಪುರಸ್ಕಾರವನ್ನು ನೀಡಿ ಘೋಷಣೆ ಮಾಡಿರುತ್ತದೆ.


ಆದರ್ಶರವರು ಮಂಡ್ಯ ಜಿಲ್ಲೆಯ ನಾಗಮಂಗಲ, ಶಿವಮೊಗ್ಗ ಹೊಸನಗರ, ನಗರ ಮುಂತಾದ ಊರುಗಳಲ್ಲಿ ಅರಣ್ಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.


ಅವರಿಗೆ ರಾಜ್ಯ ಮುಖ್ಯ ಮಂತ್ರಿಗಳ ಚಿನ್ನದ ಪದಕ ಲಭಿಸಿರುವುದು ತೀರ್ಥಹಳ್ಳಿಯ ಹೆಮ್ಮೆಯ ವಿಚಾರವಾಗಿದ್ದು ತೀರ್ಥಹಳ್ಳಿಗೆ ಮತ್ತು ಅರಣ್ಯ ಇಲಾಖೆಗೆ ರಾಜ್ಯಮಟ್ಟದಲ್ಲಿ ಮತ್ತೊಂದು ಕಿರೀಟ ಮತ್ತು ಗೌರವ ಲಭಿಸಿದಂತಾಗಿದೆ.

ವರದಿ ಕೃಪೆ: ಲಿಯೋ ಆರೋಜಾ, ತೀರ್ಥಹಳ್ಳಿ

By admin

ನಿಮ್ಮದೊಂದು ಉತ್ತರ

You missed

error: Content is protected !!