ಶಿವಮೊಗ್ಗ,ಮೇ೩೦:
ವಿನೋಬನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ ರಷ್ಟು ಫಲಿತಾಂಶ ಬಂದಿದೆ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಿ.ಬಾಲು ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯೯೪ರಲ್ಲಿ ಸ್ಥಾಪನೆಗೊಂಡ ಈ ಶಾಲೆ ನಗರದ ಅತ್ಯುತ್ತಮ ಶಾಲೆ ಎಂಬ ಖ್ಯಾತಿ ಪಡೆದಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ೨೦೨೨ರಲ್ಲಿ ಶೇ.೭೯, ಹಾಗೂ ೨೩ರಲ್ಲಿ ಶೇ.೮೫ರಷ್ಟು ಫಲಿತಾಂಶ ಬಂದಿದೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ್ ಮಾತನಾಡಿ, ಶಾಲೆಗೆ ದಾಖಲಾಗುವ ಎಲ್ಲಾ ಮಕ್ಕಳಿಗೆ ಪ್ರತಿವರ್ಷ ಶೈಕ್ಷಣಿಕ ಉಚಿತ ಕಿಟ್ ವಿತರಿಸಲಾಗುತ್ತಿದ್ದು, ಕಂಪ್ಯೂಟರ್ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ. ವಿಶಾಲ ವಾದ, ಸುಸಜ್ಜಿತವಾದ, ಹೈಟೆಕ್ ಕೊಠಡಿಗ ಳಿದ್ದು,
ಜೂನ್ ಆರಂಭದಲ್ಲಿ ವಿಶೇಷ ತರಗತಿ ಗಳು ಹಾಗೂ ಸಂಜೆ ವೇಳೆಯಲ್ಲಿ ಗುಂಪು ಅಧ್ಯಯನ, ಗುಣಮಟ್ಟದ ಬಿಸಿಯೂಟ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸು ವುದು ಹೀಗೆ ಹಲವಾರು ಚಟುವಟಿಕೆ
ಗಳನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಶಾಲೆ ಇಷ್ಟೆಲ್ಲಾ ಅಭಿವೃದ್ಧಿ, ಉತ್ತಮ ಫಲಿತಾಂಶ ಬರಲು ಡಿಡಿಪಿಐ, ಡಿ.ಇ.ಓ., ಶಾಲೆಯ ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗದ ವರು ಹಾಗೂ ಎಸ್‌ಡಿಎಂಸಿ ಸದಸ್ಯರು,
ಶಾಲೆಯ ಸುತ್ತಮುತ್ತಿಲಿನ ಸಂಘ ಸಂಸ್ಥೆಗಳು ಕಾರಣವಾಗಿ ರುವುದರಿಂದ ಅವರೆಲ್ಲರಿಗೂ ಅಭಿನಂದನೆಗಳು ಎಂದ ಅವರು, ಆಂಗ್ಲ ಮಾಧ್ಯಮ ಆರಂಭಿಸುವ ಉದ್ದೇಶವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ್, ರಮೇಶ್, ಕವಿತ, ವಿನೋದ್, ಶರಣ್, ಸಂತು ಇದ್ದರು.