ಶಿವಮೊಗ್ಗ, ಮೇ.೩೧:
ತಂಬಾಕು ತ್ಯಜಿಸಿ ಆರೋಗ್ಯಯುತ ಜೀವನ ನಡೆಸಿ ಎಂದು ತಹಶೀಲ್ದಾರ್ ಗಿರೀಶ್ ಹೇಳಿದರು.
ಅವರು ಇಂದು ಜಿಲ್ಲಾ ಆಡಳಿತ ಹಾಗು ಜಿಲ್ಲಾ ಪಂಚಾಯತ್ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಶಿವಮೊಗ್ಗ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಊರುಗಡೂರು ಗ್ಲೋಬಲ್

ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜ್ ಹಾಗೂ ಮಲ್ನಾಡ್ ಲೈಫ್ ಲೈನ್ ಆಸ್ಪತ್ರೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ತಂಬಾಕು ರಹಿತ ದಿನ ಹಾಗೂ ಗುಲಾಬಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ತಂಬಾಕಿನಿಂದ ಕೇವಲ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಅಷ್ಟೇ ಅಲ್ಲ ಪರಿಸರದ ಮೇಲೂ ಕೂಡ ಅನೇಕ ದುಷ್ಪರಿಣಾಮ ಗಳನ್ನು ಉಂಟುಮಾಡುತ್ತದೆ ಒಬ್ಬ ಧೂಮಪಾನೀ ತನ್ನ ಜೀವನದಲ್ಲಿ ಐದು ಟನ್ನಷ್ಟು ಕಾರ್ಬನ್ ಡೈಆಕ್ಸೈಡನ್ನು ಹೊರ ಹಾಕುತ್ತಾನೆ ಅಂದರೆ ಬಿಡಿ ಹಾಗೂ ಸಿಗರೇಟ್ ಸೇದುವವರು ಕಾರ್ಬನ್ ಡೈ ಆಕ್ಸೈಡನ್ನು ಬಿಡುಗಡೆ ಮಾಡುವ ಮೂಲಕ ಪರಿಸರದ ಮಾಲಿನ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ ಇದಲ್ಲದೆ ಸೇದಿ ಬಿಸಾಡುವಂತಹ ನಾಲ್ಕು ಐದು ಟ್ರಿಲಿಯನ್ ಸಿಗರೇಟ್ ತುಂಡುಗಳು ಮಣ್ಣಿನಲ್ಲಿ ಕರಗದೆ ಭೂಮಿಯ ಮೇಲೆ ಪರಿಸರವನ್ನು ಕಲುಷಿತಗೊಳಿಸುವ ಜೊತೆಗೆ ಭೂಮಿಯ ಒಳಬಾಗದ ಅಂತರ್ಜಲವನ್ನು ಸಹ ಕಳುಹಿಸಿತಗೊಳಿ ಸುತ್ತದೆ ಹಾಗೆಯೇ ಈ

ಸಿಗರೇಟ್ ತುಂಡುಗಳು ಮಳೆ ನೀರಿನ ಜೊತೆ ನದಿಗಳಲ್ಲಿ ಸೇರಿಕೊಂಡು ನದಿಗಳ ಮೂಲಕ ಸಮುದ್ರವನ್ನು ಸೇರುತ್ತವೆ (ಸೇರಿದ ನಂತರ ಅಲ್ಲಿನ ನೀರನ್ನು ಕನಿಷಿತಗೊಳಿಸಿ ಅನೇಕ ಜನ ಚರ ಪ್ರಾಣಿಗಳು ಸಾವಿಗೆ ಕಾರಣವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಮಲ್ಲಪ್ಪ ಓ. ಮಾತನಾಡುತ್ತಾ, ಪ್ರಪಂಚದಲ್ಲಿ ೮೦ ಲಕ್ಷಕ್ಕೂ ಹೆಚ್ಚು ಜನ ತಂಬಾಕು ಸೇವನಿಂದ ಮರಣವನ್ನು ಒಪ್ಪುತ್ತಿದ್ದಾರೆ ತಂಬಾಕು ಉದ್ಯಮ

ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು ಈ ವರ್ಷದ ಘೋಷ ವಾಕ್ಯದಂತೆ ತಂಬಾಕು ಉತ್ಪನ್ನಗಳ ಬಳಕೆಯಿಂದ ಆಗುವ ದುಷ್ಪರಿಣಾಮ ಮತ್ತು ಆರೋಗ್ಯದ ಮೇಲೆ ಬೀರುವ ಪರಿಣಾಮದಿಂದ ಮಕ್ಕಳನ್ನು ದೂರವಿರಿಸಿ ರಕ್ಷಿಸುವುದು ಹಾಗೂ ತಂಬಾಕಿನಿಂದ ಅನೇಕ ದುಷ್ಪರಿಣಾಮಗಳು ನಮ್ಮ ಹಾಗೂ ನಮ್ಮ ಸುತ್ತಲ ಪರಿಸರಕ್ಕೆ ಸಾಕಷ್ಟು ಹಾನಿಯನ್ನು ಉಂಟುಮಾಡುತ್ತದೆ ಎಂದರು.
ತಂಬಾಕು ಚಟದಿಂದ ಹೊರಬರಲು ಸಹಾಯ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಮೆಗಾನ್ ಬೋಧನಾ ಆಸ್ಪತ್ರೆಯ ಕೊಠಡಿ ನಂಬರ್ ೧೭ರಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರವೂ ಕಾರ್ಯನಿರ್ವಹಿಸುತ್ತಿದೆ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾತ ಹಾಗೂ ಗುಲಾಬಿ ಆಂದೋ

ಲನ ಕಾರ್ಯಕ್ರಮ ನೆರವೇರಿತು.. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ದೊಡ್ಡವೀರಪ್ಪ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಬಸವರಾಜ್. ಗೌಡ ಬಿಎಸ್ ಆರೋಗ್ಯ ನಿರೀಕ್ಷಣಾಧಿಕಾರಿಗಳು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ ವಿಜಯಕುಮಾರ್. ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

By admin

ನಿಮ್ಮದೊಂದು ಉತ್ತರ

You missed

error: Content is protected !!