ಶಿವಮೊಗ್ಗ, ಮೇ.೧೭:
ಬರ ನಿರ್ವಹಣೆ, ಡೆಂಗ್ಯು ಮತ್ತು ಮಾನ್ಸೂನ್ ಬಗ್ಗೆ ನಿರ್ಲಕ್ಷ್ಯ ಮಾಡುವಂತಿಲ್ಲ, ಕುಡಿಯುವ ನೀರಿನ ಬಗ್ಗೆ ಪ್ರತಿಯೊಂದು ಇಲಾಖೆಗಳು ಸರಿಯಾದ ಸ್ವಚ್ಚತೆಯ ಕ್ರಮ ವಹಿಸಬೇಕು. ಅಂಗನವಾಡಿ, ಶಾಲೆ ಮತು ಹಾಸ್ಟೆಲ್‌ಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಚ ಮಾಡಿ ಬಳಸಬೇಕು ಎಂದು ಶಿವಮೊಗ್ಗ ತಹಶೀ ಲ್ದಾರ್ ಗೀರಿಶ್ ಎಂ. ಎನ್. ಸೂಚನೆ ನೀಡಿದ್ದರು.
ಮೇ -೧೭ ರಂದು ಶಿವಮೊಗ್ಗ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ತಾಲ್ಲೂಕಿನ ಸಂಬಂದ ಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಬರ ಪರಿಹಾರ ಕೆಲಸದಲ್ಲಿ ರೈತರು ಕಛೇರಿಗೆ ಬೇಟಿ ನೀಡಿದಾಗ ಸಮಾಧಾನ ಮತ್ತು ಸಂಯಮಯಿಂದ ಕೆಲಸ ಮಾಡಿಕೊಡಿ.
ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮಗೆ ನಿರ್ವಹಿಸಿದ ಕೆಲಸವನ್ನು ನಿಷ್ಠೆ ಮತ್ತು ಜವಾಬ್ದಾರಿಯಿಂದ ಮಾಡಬೇಕು ಎಂದು ತಿಳಿಸಿದರು.
ಶಾಲೆ ಮತ್ತು ಅಂಗನವಾಡಿಗಳಲ್ಲಿ ಕಡ್ಡಾಯವಾಗಿ ಕುಡಿಯುವ ನೀರಿನ ಟೆಸ್ಟ್ ಮಾಡಿಸಿ ಬಳಕೆ ಮಾಡ ಬೇಕು. ಶೌಚಾಲಯಗಳನ್ನು ಸುಚಿತ್ವದಿಂದ ಕಾಪಾಡಿ ಕೊಂಡು ಮಕ್ಕಳನ್ನು ಆರೋಗ್ಯವಂತರಾಗಿ ಇಡುವುದು ನಮ್ಮ ಕರ್ತವ್ಯವಾಗಿದೆ. ಎಲ್ಲರು ಡೆಂಗ್ಯುಯಿಂದ ರಕ್ಷಣೆಗೆ ಸುರಕ್ಷಿತ ಕ್ರಮವನ್ನು ತೆಗೆದುಕೂಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದ ಅವರು ಶಾಲೆ ಮತ್ತು ಅಂಗನವಾಡಿಗಳಿಗೆ ಬಣ್ಣ ಬಳಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಮಾನ್ಸೂನ್ ಹೆಚ್ಚುವ ಸಾದ್ಯತೆ ಇರುವ ಕಾರಣ ಅರಣ್ಯ ಇಲಾಖೆಯವರು ರಸ್ತೆ ಬದಿಯಿರುವ ಮತ್ತು ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊ ಳಿಸಬೇಕು.
ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದಂತೆ ಚರಂಡಿ ಹಾಗೂ ಡ್ರೈನೇಜ್ ಸ್ವಚ್ಚ ಮಾಡಬೇಕು ಮತ್ತು ಡೆಂಗ್ಯು ನಿರ್ಮೂಲನೆಗೆ ಸಹಕಾರಿಯಾಗುವ ಕೆಲಸ ಮಾಡಬೇಕೆಂದು ಮಹಾನಗರ ಪಾಲಿಕೆಗೆ ಸೂಚನೆ ನೀಡಿದ್ದರು. ರಸ್ತೆ ಬದಿಯಲ್ಲಿನ ಅಪಾಯದ ಸ್ಥಿಯಲ್ಲಿರುವ ಲೈನ್ ಕಂಬಗಳನ್ನು ತೆರವು ಗೊಳಿಸಿ ಸಾರ್ವಜನಿಕರ ಸಂರಕ್ಷಣೆ ಮಾಡಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ತಾಲ್ಲೂಕು ಡಿ. ಹೆಚ್. ಓ. ಚಂದ್ರಶೇಖರ್ ಜಿ. ಬಿ.ರವರು ಮಾತನಾಡಿ ಡೆಂಗ್ಯು ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಕಳೆದ ಬಾರಿ ಈ ಸಮಯಕ್ಕೆ ೮ ಡೆಂಗ್ಯು ಪ್ರಕರಣಗಳು ಇದ್ದು, ಈ ಬಾರಿ ೫೫ ಕ್ಕೆ ಏರಿಕೆ ಯಾಗಿದೆ. ಡ್ಯೆಂಗ್ಯು ರೋಗಗಳು ಬಾರದಂತೆ ತಡೆಯಲು ಶೇಖರಿಸಿದ ನೀರಿನ ಸಂಗ್ರಹಕಗಳನ್ನು ವಾರಕ್ಕೆ ೨ ಬಾರಿ ಸ್ವಚ್ಚಗೊಳಿಸಿ ನೀರಿನ ಶೇಖರಣೆ ಮಾಡುವುದು, ತೊಟ್ಟಿ ಡ್ರಮ್‌ಗಳನ್ನು ವಾರಕ್ಕೆ ೨ ಬಾರಿ
ಸ್ವಚ್ಚಗೊಳಿಸುವುದು, ಟೈರುಗಳು ಮತ್ತು ವಾಹನದ ಅನುಪಯುಕ್ತ ಬಿಡಿ ಭಾಗಳನ್ನು ಸೂಕ್ತ ಸ್ಥಳದಲ್ಲಿ ಶೇಖರಣೆ ಮಾಡುವುದು, ಆಸ್ಪತ್ರೆ, ಶಾಲೆ ಮತ್ತು ಮನೆಯ ಸುತ್ತ ಮುತ್ತ ಘನ ತ್ಯಾಜ್ಯದಲ್ಲಿ ಮಳೆನೀರು ಸಂಗ್ರಹವಾಗದಂತೆ ತಡೆಗಟ್ಟಲು ನಿಯಮಿತ ವಿಲೇವಾರಿ ಮಾಡುವುದರಿಂದ ಸೊಳ್ಳೆ ಉತ್ಪತಿಯಾಗದಂತೆ ತಡೆಯಬಹುದಾಗಿದೆ. ಸಾರ್ವಜನಿಕರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ
ಪಡೆದುಕೊಳ್ಳುವಂತೆ ಹಾಗೂ ಸಹಾಯವಾಣಿ ೦೮೧೮೨- ೨೭೯೩೧೨ ಕರೆಮಾಡಿ ಮಾಹಿತಿ ನೀಡಿ ಎಂದು ಹೇಳಿದರು. ಸಭೆಯಲ್ಲಿ ತಾಲ್ಲೂಕಿನ ಸಿ.ಇ.ಓ ಅವಿನಾಶ್ ಸಿ., ಪೊಲೀಸ್ ಉಪಾಧೀಕ್ಷಕರು, ತಾಲೂಕು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.