(ಕ್ಯೂಆರ್ ಕೋಡ್ ಲಗತ್ತಿಸಿದೆ)


ಶಿವಮೊಗ್ಗ: ಇಂದಿನ ಶೈಕ್ಷಣಿಕ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಗಣಿತದ ಮೂಲಭೂತ ಪಾಠಗಳನ್ನು ಕಲಿಯಲು ತೀರಾ ಕಡಿಮೆ ಅವಕಾಶವಿದ್ದು ಈ ಹಿನ್ನೆಲೆಯಲ್ಲಿ ಗಣಿತ ಕೌಶಲ್ಯವನ್ನು ಉತ್ತಮಪಡಿಸಲು ಅಕ್ಷರ ಫೌಂಡೇಶನ್ ತಯಾರಿಸಿರುವ ಬಿಲ್ಡಿಂಗ್ ಬ್ಲಾಕ್ಸ್ ಆಪ್ ನ್ನು ಮಕ್ಕಳಿಗಾಗಿ ತರಲಾಗಿದೆ.
ಈ ಚಟುವಟಿಕೆ ಆಧಾರಿತ ತಂತ್ರಾಂಶದಲ್ಲಿ ಪಠ್ಯಾಧಾರಿತ ೧ ರಿಂದ ೫ ಮತ್ತು ೬ ರಿಂದ ೮ ನೇ ತರಗತಿವರೆಗಿನ ವಿದ್ಯಾರ್ಥಿಗಳ ಗಣಿತ ಕಲಿಕೆಗೆ ೨ ವಿಭಾಗಗಳಲ್ಲಿ ಅವಕಾಶ ನೀಡಲಾಗಿದೆ. ಆಟದ ಮೂಲಕ ಅಭ್ಯಾಸ ಮಾಡುವುದರಿಂದ ಶಾಶ್ವತ ಕಲಿಕೆ ಉಂಟಾಗುತ್ತದೆ. ಮಕ್ಕಳಿಗೆ ಗಣಿತದಲ್ಲಿ ಪರಿಣಿತಿ ಪಡೆಯಲು ಬೇಕಾದ ಕೌಶಲ್ಯ ಮತ್ತು ಆತ್ಮಸ್ಥೈರ್ಯ ಮೂಡಿಸಲು ಸಾಂಪ್ರದಾಯಿಕ ಕಲಿಕೆಗೆ ವಿಭಿನ್ನವಾಗಿ ಈ ಆಪ್ ಸಿದ್ದಪಡಿಸಲಾಗಿದೆ.


ಗಣಿತ ಕಲಿಕೆಯನ್ನು ಎಲ್ಲ ಮಕ್ಕಳಿಗೂ ದೊರೆಯುವಂತೆ ಮಾಡುವುದೇ ಇದರ ಉದ್ದೇಶವಾಗಿದೆ. ಇದು ೪೦೦ ಕ್ಕೂ ಹೆಚ್ಚು ಸಂವಾದಾತ್ಮಕ ಆಟಳಗಳನ್ನು ಒಳಗೊಂಡಿದ್ದು ಎಲ್ಲ ಆಟಗಳನ್ನು ಎನ್‌ಸಿಇಆರ್‌ಟಿ ಪಠ್ಯಕ್ರಮಕ್ಕೆ ಮ್ಯಾಪ್ ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕಲಿಕೆಯಲ್ಲಿ ಅಭಿವೃದ್ದಿ ಹೊಂದಬೇಕು. ಈ ಆಪ್ ಎಲ್ಲ ಆಂಡ್ರಾಯ್ಡ್ ಫೋನ್‌ಗಳಲ್ಲೂ ಲಭ್ಯವಿದೆ. ಅಪ್ಲಿಕೇಷನ್ ಡೌನ್‌ಲೋಡ್‌ಗಾಗಿ ಲಿಂಕ್ http://play.google.com/store/apps/details?id=com.akshara.easymath&hl+en IN&gl=US&pli+1 ನ್ನು ನೋಡಬಹುದಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕ(ಅಭಿವೃದ್ದಿ) ಬಸವರಾಜಪ್ಪ ತಿಳಿಸಿದ್ದಾರೆ.


By admin

ನಿಮ್ಮದೊಂದು ಉತ್ತರ

You missed

error: Content is protected !!