ಸಾಗರ(ಶಿವಮೊಗ್ಗ),ಮೇ.೦೯:ಪ್ರಸ್ತುತ ೨೦೨೩-೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು ಸಾಗರ ತಾಲ್ಲೂಕು ಜಿಲ್ಲೆಯಲ್ಲಿ ಉತ್ತಮವಾದ ಫಲಿತಾಂಶ ಪ್ರಕಟವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇ.ಪರಶುರಾಮಪ್ಪ ತಿಳಿಸಿದ್ದಾರೆ.
ಅವರು ತಾಲ್ಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶದ ಬಗ್ಗೆ ಮಾಹಿತಿಯನ್ನು ನೀಡಿ ತಾಲ್ಲೂಕಿನಲ್ಲಿ ಒಟ್ಟು ೫೫ ಪ್ರೌಢಶಾಲೆಗಳಲ್ಲಿ ಇದರಲ್ಲಿ ೨೪ ಪ್ರೌಢಶಾಲೆಗಳು ೧೦೦ಕ್ಕೆ ೧೦೦ರಷ್ಟು ಫಲಿತಾಂಶ ದಾಖಲಿಸಿದ್ದು ಸರ್ಕಾರಿ ಶಾಲೆಗಳಲ್ಲಿ ೧೪ ಶಾಲೆಗಳು ೧೦೦ ಫಲಿತಾಂಶ ದಾಖಲಾಗಿದೆ. ಈ ಭಾರಿಯ ವಿಶೇಷವಾಗಿದೆ. ಒಟ್ಟು ೨೭೫೫ ಮಕ್ಕಳು ದಾಖಲಾಗಿದ್ದು ೨೬೧೪ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ೯೪.೮೮% ಫಲಿತಾಂಶ ಪ್ರಕಟವಾಗಿದೆ.
೧೦೦% ಫಲಿತಾಂಶ ಪಡೆದ ಸರ್ಕಾರಿ ಶಾಲೆಗಳು: ಸರ್ಕಾರಿ ಪ್ರೌಢಶಾಲೆ ನಾಗವಳ್ಳಿ, ಆವಿನಹಳ್ಳಿ, ಹಿರೇನೆಲ್ಲೂರು, ಮಾಸೂರು, ಕಟ್ಟಿನಕಾರು, ತಡಗಳಲೆ, ಸರ್ಕಾರಿ ಉರ್ದು ಪ್ರೌಢಶಾಲೆ ಸಾಗರ, ಮೌಲನಾ ಆಜಾದ್ ವಸತಿ ಶಾಲೆ ಸಾಗರ, ಇಂದಿರಾಗಾಂಧಿ ವಸತಿ ಶಾಲೆ ಯಡೇಹಳ್ಳಿ, ಅಂಬೇಡ್ಕರ್ ವಸತಿ ಶಾಲೆ ಆವಿನಹಳ್ಳಿ, ಅಟಲ್ ಬಿಹಾರಿ ವಸತಿಶಾಲೆ ಆವಿನಹಳ್ಳಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಕೆಳದಿ, ಅಂಬೇಡ್ಕರ್ ವಸತಿ ಶಾಲೆ, ತಾಳಗುಪ್ಪ, ಇಂದಿರಾಗಾಂಧಿ ವಸತಿ ಶಾಲೆ ತುಮರಿ,
೧೦೦% ರಷ್ಟು ಪಡೆದ ಖಾಸಗಿ ಶಾಲೆಗಳು : ಕ್ರಿಯೆಟೀವ್ ಶಾಲೆ ಆಚಾಪುರ, ಪ್ರಜ್ಞಾಭಾರತಿ ಶಾಲೆ ಸಾಗರ, ಕೊಡಚಾದ್ರಿ ವಸತಿ ಶಾಲೆ ಗಿಣಿವಾರ, ವಿ.ಎಸ್.ಪ್ರೌಢಶಾಲೆ ಕೇಡಲಸರ, ಭಾರತೀ ಪ್ರೌಢಶಾಲೆ ಕೆಳದಿ, ರಾಮಕೃಷ್ಣ ವಸತಿ ಶಾಲೆ ಎಂ.ಎಲ್.ಹಳ್ಳಿ, ಕೋಯಾ ಪ್ರೌಢಶಾಲೆ, ಸಾಗರ, ರಾಭಿಯಾ ಪ್ರೌಢಶಾಲೆ ಸಾಗರ, ಇಕ್ಕೇರಿ ಪ್ರೌಢಶಾಲೆ ಯಡೆಜಿಗಳೆ ಮನೆ, ಅಕಾಡೆಮಿ ಶಾಲೆ ಸಾಗರ.
ಸರ್ಕಾರಿ ಶಾಲೆಗಳಲ್ಲಿ: ಸುಭಾಷ್ನಗರ-೯೧.೨೬, ಪದವಿಪೂರ್ವ ಕಾಲೇಜು- ೮೭.೬೧, ಹುಲಿದೇವರಬನ-೯೫.೧೨, ಬಿಳಿಗಾರು-೯೫.೪೫. ಎಂ.ಎಲ್.ಹಳ್ಳಿ-೯೪.೪೪, ಬ್ಯಾಕೋಡು-೯೩.೧೦, ಉಳ್ಳೂರು-೮೪.೨೧, ತ್ಯಾಗರ್ತಿ-೮೮.೯೯, ಹಿರೇನೆಲ್ಲೂರು- , ಬರೂರು-೯೪.೧೧, ಕಾರ್ಗಲ್-೯೨.೯೮, ಕಾನಲೆ-೯೭.೫೦, ಸಿರಿವಂತೆ-೯೨.೦೦, ಕರ್ನಾಟಕ ಪಬ್ಲಿಕ್ ಶಾಲೆ ಆನಂದಪುರ-೯೧.೩೬, ತಡಗಳಲೆ- , ತುಮರಿ-೯೩.೩೩,
ಅನುದಾತ ಶಾಲೆಗಳು: ರ್ಮಲ ಬಾಲಿಕಾ ಪ್ರೌಢಶಾಲೆ-೯೮.೩೩, ಎಂಜಿಎನ್ ಪೈ ಪ್ರೌಢಶಾಲೆ-೯೪.೬೯, ಸ್ವಾಮಿವಿವೇಕಾನಂದ ಪ್ರೌಢಶಾಲೆ ತ್ಯಾಗರ್ತಿ-೯೩.೩೩, ನಲಂದ ಪ್ರೌಢಶಾಲೆ ತಾಳಗುಪ್ಪ-೮೮.೦೦, ಹೆಚ್.ಶಿವಲಿಂಗಪ್ಪ ಪ್ರೌಢಶಾಲೆ-೮೬.೫೩, ಕೆಪಿಸಿಸಿ ಪ್ರೌಢಶಾಲೆ ಜೋಗ-೯೧.೧೭, ಜ್ಞಾನ ಸಹ್ಯಾದ್ರಿ ಪ್ರೌಢಶಾಲೆ ಯಡೇಹಳ್ಳಿ-೮೬.೯೫, ಮಲೆನಾಡು ಪ್ರೌಢಶಾಲೆ ಗೌತಮಪುರ-೮೩.೭೨, ಎಸ್.ಜೆ.ಜಿ ಪ್ರೌಢಶಾಲೆ ಮುರುಘಾಮಠ-೭೭.೪೧, ಚನ್ನಮ್ಮಾಜಿ ಪ್ರೌಢಶಾಲೆ ಐಗಿನಬೈಲು-೯೧.೩೦, ಶಾಂತವೇರಿ ಗೋಪಾಲಗೌಡ ಪ್ರೌಢಶಾಲೆ ಸೈದೂರು-೯೮.೦೩, ಅಂತೋನಿ ಪ್ರೌಢಶಾಲೆ ಇಡುವಳ್ಳಿ-೯೫.೨೩,
ಅನುದಾನ ರಹಿತ ಪ್ರೌಢಶಾಲೆ: ರಾಮಕೃಷ್ಣ ಪ್ರೌಢಶಾಲೆ ಸಾಗರ-೯೪.೯೧, ಸಾಧನಾ ವಿದ್ಯಾ ಕೇಂದ್ರ-೯೬.೮೭, ಪ್ರಗತಿ ಸಂಯುಕ್ತ ಪ್ರೌಢಶಾಲೆ-೯೫.೫೩, ಸಂತ ಜೋಸೇಫ್ ಆಂಗ್ಲ ಮಾಧ್ಯಮ ಶಾಲೆ ಮಂಕಳಲೆ-೯೬.೧೯,