ಶಿವಮೊಗ್ಗ: ಸಂಗ್ರಾಮದ ದಿನಗಳು ಮುಗಿಯಿತು. ಇನ್ನು ಮೇಲೆ ಅಭಿವೃದ್ಧಿಯ ದಿನಗಳು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಬಿ.ವೈ ರಾಘವೇಂದ್ರ ಅತಿ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ. ಈ ಚುನಾವಣಾ ಸಂಗ್ರಾಮಕ್ಕೆ ಜಿಲ್ಲಾ ಬಿಜೆಪಿ, ರಾಜ್ಯ ಬಿಜೆಪಿಯ ಹಿರಿಯ ನಾಯಕರು,

ಎಲ್ಲಾ ಮಹಾಶಕ್ತಿ ಕೇಂದ್ರಗಳ ಪ್ರಮುಖರು ಕಾರ್ಯಕರ್ತರು ಶ್ರಮಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ತನ್ನ ಮಗ ಎಂದು ಭಾವಿಸದೇ ಒಬ್ಬ ಅಭಿವೃದ್ಧಿಯ ಹರಿಕಾರ ಎಂದು ಪರಿಗಣಿಸಿ ಮಗನ ಪರವಾಗಿ ಅನೇಕ ಕಾರ್ಯಕ್ರಮಗಳನ್ನು

ಹಮ್ಮಿಕೊಂಡಿದ್ದರು. ರಾಷ್ಟ್ರ ಮತ್ತು ರಾಜ್ಯ ನಾಯಕರು ಕೂಡ ಸೊರಬದಲ್ಲಿ ಅನೇಕ ಸಭೆಗಳನ್ನು ನಡೆಸಿದ್ದಾರೆ. ಅಭೂತಪೂರ್ವ ಲೀಡ್ ಬರಲಿದೆ ಎಂದರು. 

ಕಾನೂನು ಮೀರಿ ಯಾರೂ ಕೂಡ ಚುನಾವಣೆ ನಡೆಸಲಾಗುವುದಿಲ್ಲ. ಹಲವಾರು ಮಾತುಗಳು ಬಂದು ಹೋಗಿವೆ. ಮುಂದಿನ ದಿನಗಳಲ್ಲಿ ಮಾತುಗಳನ್ನು ಬದಲಾಯಿಸಬೇಕಾಗುತ್ತದೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!