ಆಧ್ಯಾತ್ಮ ಗುರುಗಳಾದ ನಡೆದಾಡುವ ಅಯ್ಯಪ್ಪ ಶ್ರೀ ಶ್ರೀ ರೋಜಾ ಗುರೂಜಿ ರವರ ಹಿರಿಯ ಪುತ್ರರಾದ ಶ್ರೀ ಶಬರೀಶ್ ಸ್ವಾಮಿ ಯವರಿಗೆ “ದೈವೀಗ ಅರುಳ್ ಸುಡರ್” ಬಿರುದು ಪ್ರದಾನ ಕಾರ್ಯಕ್ರಮವು ದಿನಾಂಕ 05 ಮೇ 2024 ರ ಭಾನುವಾರದಂದು ಚೆನ್ನೈನಲ್ಲಿ ನಡೆಯಿತು.
ನಕ್ಕೀರರ್ ತಮಿಳ್ ಸಂಗಂ, ಚೆನ್ನೈ ಇವರ ಆಶ್ರಯದಲ್ಲಿ ಶ್ರಮದಿಂದ ಉನ್ನತ ಸ್ಥಾನಕ್ಕೆ ಬಂದವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಚೆನ್ನೈನ ಶ್ರೀ ಭಾರತೀಯ ವಿಧ್ಯಾ ಭವನ ಮೈಲಾಪುರ್ ನಲ್ಲಿ ಏರ್ಪಡಿಸಲಾಗಿತ್ತು.


ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಶಿವಮೊಗ್ಗದ ಶ್ರೀ ಶ್ರೀ ರೋಜಾ ಗುರೂಜಿ ರವರ ಪುತ್ರರಾದ ಶ್ರೀ ಶಬರೀಶ್ ಸ್ವಾಮಿ ಯವರನ್ನು ಆಹ್ವಾನಿಸಲಾಗಿತ್ತು. ವಿಶೇಷ ಆಹ್ವಾನಿತರಾಗಿ ಚೆನ್ನೈ ನ ಶ್ರೀ ಶ್ರೀ ಶಬರೀಶ್ ಗುರೂಜಿ ಟ್ರಸ್ಟ್ ನ ಟ್ರಸ್ಟಿಗಳು, ಶ್ರೀಮತಿ ವಿಜಯಲಕ್ಷ್ಮೀ ಗಾಂಧಿ (ಸ್ಥಾಪಕರು ರಾಜರಾಜನ್ ರಾಜಮಾರನ್ ಪಬ್ಲಿಷಿಂಗ್ ಹೌಸ್), ಶ್ರೀಮತಿ ವಾಣಿ ಚಿತ್ತುರಾಜ ( ಸ್ಥಾಪಕರು ವಾಶಿಟ್ ಬಿಲ್ಡರ್ಸ್), ಶ್ರೀ ಬಾಲಾಜಿ, ಶ್ರೀ ರಾಜಾರಾಮನ್, ರಮಣ ತಿಲಗಂ, ಕವಿ ಮಿನ್ನಲ್ ಪ್ರಿಯನ್ ಪಾಲ್ಗೊಂಡಿದ್ದರು.


ಈ ಸಂದರ್ಭದಲ್ಲಿ ಶ್ರೀ ಶಬರೀಶ್ ಸ್ವಾಮಿಯವರಿಗೆ “ದೈವೀಗ ಅರುಳ್ ಸುಡರ್” ಬಿರುದು, ಸನ್ಮಾನ ಪತ್ರ, ಸ್ಮರಣಿಕ ಹಾಗೂ ಅಯೋಧ್ಯಾದ ವಿಶೇಷ ಮುತ್ತಿನ ಹಾರವನ್ನು ನೀಡಿ ಗೌರವಿಸಿದರು.


ಶ್ರೀ ಶಬರೀಶ್ ಸ್ವಾಮಿಯವರು ನೆರೆದಿದ್ದ ಜನರನ್ನು ಕುರಿತು ಮಾತನಾಡಿ ಕೆಲಸದ ಮೇಲಿನ ಸಮರ್ಪಣೆ ಹಾಗೂ ಕಠಿಣ ಪರಿಶ್ರಮ ಇದ್ದರೆ ಜೀವನದಲ್ಲಿ ಏನನ್ನು ಬೇಕಿದ್ದರೂ ಸಾದಿಸಬಹದು ಎಂದು ತಿಳಿಸಿಕೊಟ್ಟರು.

ಹಾಗೆ ಅಯ್ಯಪ್ಪನ ಮಹಿಮೆಯನ್ನು ತಿಳಿಸಿಕೊಟ್ಟು ತಮಗೆ ನಡೆದ ಅದ್ಭುತಗಳನ್ನು ವಿವರಿಸಿದರು.


ಪ್ರಶಸ್ತಿ ಪುರಸ್ಕೃತರಾದ ಕೃತಕ ಕಾಲುಗಳ ಸರಬರಾಜು ಮಾಡುವ ಮಿನ್ನಲ್ ಪ್ರಿಯನ್, ವಿಶೇಷ ಮಕ್ಕಳಿಗಾಗಿ ಶಾಲೆ ನಡೆಸುವ ಶ್ರೀಮತಿ ರಮಣ ತಿಲಗಂ, ಬಡವರಿಗೆ ವಿಧ್ಯಾಭ್ಯಾಸ ನೀಡುವ ಕಲಾಂ ಮಕ್ಕಳ್ ಮಂಡ್ರಂ ಟ್ರಸ್ಟ್ ನಡೆಸುವ ಶ್ರೀಮತಿ ಸಯೀದ, ಜಯ್ ಟಿವಿ ಸಂಸ್ಥಾಪಕರು ಹಾಗೂ ಸಮಾಜ ಸೇವಕರಾದ ಶ್ರೀ ಆರುಳ್ ಜಯ್ ಹಾಗೂ ಇತರ ಅನೇಕ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಶ್ರೀ ಶಬರೀಶ್ ಸ್ವಾಮಿಯವರು ಸನ್ಮಾನಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!