ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ಞಾವಂತರು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ವಿರುದ್ಧ ಮತ ಚಲಾಯಿಸುವುದು ನಿಶ್ಚಿತ.


16 ವರ್ಷಗಳ ಕಾಲ ಜಿಲ್ಲೆಯಲ್ಲಿ ಸರ್ಕಾರಿ ಸೇವೆಯ ನಿಮಿತ್ತ ಸುತ್ತಾಟ ಮತ್ತು ಸಂಪರ್ಕ, 30 ವರ್ಷಗಳ ಕಾಲದ ಸಾಮಾಜಿಕ ಸಂಘಟನೆ ಮತ್ತು ಕ್ರೀಡಾ ಕ್ಷೇತ್ರದ ಕಾರ್ಯಗಳು, 18 ನೇ ರಾಷ್ಟ್ರೀಯ ಕ್ರೀಡೆಗಳ ಆಯೋಜನೆ ಇತ್ಯಾದಿ ವಿಚಾರಗಳನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ, ಶಿವಮೊಗ್ಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮತ್ತು ಸಾಹಿತ್ಯಕ ಕಾರಣಕ್ಕೆ ಕನ್ನಡ ಸಾಹಿತ್ಯ

ಪರಿಷತ್ ಸದಸ್ಯರ ಬೆಂಬಲ ಇದೆ.
ಕ್ಷೇತ್ರದಲ್ಲಿ ನಾನು ಹೋದೆಡೆಯೆಲ್ಲ ಕಂಪ್ಯೂಟರ್ ಎಂದು ಗುರುತಿಸುವ ಮಟ್ಟಿಗೆ ನನ್ನ ಚಿನ್ಹೆ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರವಾಗಿದೆ. ಪರಿಚಿತರು ಮನೆಗೊಂದು ಮತ ನೀಡುವ ಭರವಸೆ ನೀಡಿದ್ದಾರೆ. ಈ

ಕಾರಣದಿಂದ ಸಾಕಷ್ಟು ಮತಗಳಿಕೆ ತರಲಿದೆ, ಮಾತ್ರವಲ್ಲ ಚುನಾವಣೆ ಮತ್ತು ಮತದಾನದಿಂದ ದೂರ ಇರುವ ಜನತಾ ಪರಿವಾರದ ಮತಬಾಂಧವರು ಈ ಬಾರಿ ಮತ ಚಲಾಯಿಸುವರು. ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ. 80ರಷ್ಟು ಮತ ಚಲಾವಣೆ ಆಗಲಿದೆ. ನಿರೀಕ್ಷೆಗೂ ಮೀರಿ ಮತಗಳು ನನ್ನ ಪರವಾಗಲಿದೆ.


ಇನ್ನು ಬಿಜೆಪಿ ಅಭ್ಯರ್ಥಿ ಮತ್ತು ಬಿಜಿಪಿಯ ರೆಬೆಲ್ ಅಭ್ಯರ್ಥಿ ಪೈಪೋಟಿಯಿಂದ ಜಾತಿ ಸಂಘಗಳಿಗೆ ದೇವಸ್ಥಾನ ಕಮಿಟಿಗಳ ಹೆಸರಿನಲ್ಲಿ 5 ರಿಂದ ಹತ್ತು ಲಕ್ಷ ಹಂಚಿದ್ದಾರೆ. ಜಿಲ್ಲಾ ಪಂಚಾಯತ್ ಒಂದಕ್ಕೆ ಒಂದು ಕೋಟಿಯಂತೆ ಖರ್ಚು ಮಾಡಿದ್ದಾರೆ. ಅಲ್ಲಿಗೆ ಆಯೋಗ ವಿಧಿಸಿದ 95 ಲಕ್ಷ ಮಿತಿಯ ಕಥೆ ಏನು. ರಾಷ್ಟ್ರೀಯ ಪಕ್ಷಗಳ ಮುಖಂಡರು ಕಾರ್ಯಕರ್ತರು ಎಗ್ಗಿಲ್ಲದೆ ಅಮಾಯಕ ಮತದಾರರಿಗೆ ಹಣ ಹಂಚಿಕೆ ಮಾಡಿ ಓಲೈಸುತ್ತಿದ್ದಾರೆ. ಇದರಿಂದ ಪ್ರಚೋದನೆಯಾದ ದೇವಸ್ಥಾನ ಸಮಿತಿ ಮತ್ತು ಸಂಘ ಸಂಸ್ಥೆಗಳ ಹೆಸರಿನಲ್ಲಿ ನನಗೆ ಫೋನ್ ಮಾಡಿ ಹಣ ಕಳುಹಿಸಿ ಎಂದು ಕೇಳುತ್ತಿದ್ದಾರೆ. ಹೀಗಾದರೆ ಪ್ರಾಮಾಣಿಕರು ಚುನಾವಣೆ ಮಾಡುವುದು ಹೇಗೆ. ಇನ್ನು ಜಾತಿ ನಾಯಕರು ಪಕ್ಷಗಳ ಪರ ನಿಲ್ಲುವಂತೆ ಒತ್ತಡ ಹಾಕುತ್ತಿದ್ದಾರೆ. ಯಾವುದೇ ಜಾತಿಗೆ ಸೀಮಿತನಾಗಿ ಸಂಸದರಾಗ ಬಯಸುವುದು ಸರಿಯೇ.


ಒಟ್ಟಾರೆ ಕುಟುಂಬ ರಾಜಕಾರಣ ವಿರೋಧಿಸುವ ಜನತಾ ಪರಿವಾರವನ್ನು ಪುನರ್ಸಂಘಟನೆ ಮಾಡುವುದು ಗುರಿ ಆಯಾ ಮೂಲಕ ಪರ್ಯಾಯ ರಾಜಕಾರಣದ ಮರುಹುಟ್ಟು ಹಾಕುವ ನನ್ನ ಈ ಯತ್ನ ಯಶಸ್ವಿಗುತ್ತಿದೆ ಎಂಬುದೇ ಸಂತೋಷದ ಸಂಗತಿ.

By admin

ನಿಮ್ಮದೊಂದು ಉತ್ತರ

error: Content is protected !!