ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಿಂದೂ ಮಹಿಳೆಯರಿಗೆ ರಕ್ಷಣೆ ಕೊಡುವಲ್ಲಿ ವಿಫಲವಾಗಿದೆ. ಹಿಂದೂಗಳನ್ನು ಜಾಗೃತಿ ಮಾಡಿದ್ದರೆ ನಮ್ಮ ಮಹಿಳೆಯರಿಗೆ ರಕ್ಷಣೆ ಇರಲ್ಲ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಭದ್ರಾವತಿ ತರಿಕೆರೆ ರಸ್ತೆಯಲ್ಲಿರುವ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಹಿಂದು ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ, ಮಹಿಳೆಯರಿಗೆ ಭಾರತದಲ್ಲಿ ತಾಯಿ ಸ್ಥಾನ ನೀಡಲಾಗಿದೆ. ಕಾಂಗ್ರೆಸ್‌ ಸರ್ಕಾರ ಮಸಲ್ಮಾನರಿಗೆ ರಕ್ಷಣೆ ಕೊಡಲಿ ಪರವಾಗಿಲ್ಲ. ಆದರೆ ಹಿಂದೂಗಳ ಮೇಲೆ ಏಕೆ ತಾತ್ಸಾರ ಎಂದು ಪ್ರಶ್ನಿಸಿದರು.

ನೇಹಾ ಹತ್ಯೆ ಬಗ್ಗೆ ಸಿಎಂ ಲವ್ ಜಿಹಾದ್ ಅಲ್ಲ ಎನ್ನುತ್ತಾರೆ. ಖಾಸಗಿ ವಿಚಾರವಾಗಿದ್ದರೆ ಕಾಲೇಜಿಗೆ ನುಗ್ಗಿ ಕೊಲೆ ಮಾಡಬಹುದಾ. ನೇಹಾ ಹತ್ಯೆ ಪ್ರಕರಣವನ್ನು ಸಿಒಡಿಗೆ ತನಿಖೆಗೆ ಕೊಟ್ಟಿದ್ದನ್ನು ಯಾರು ಒಪ್ಪಲ್ಲ. ಸಿಬಿಐ ತನಿಖೆಗೆ ಕೊಡಿ ಎಂದು ಒತ್ತಾಯಿಸಿದರು.

ಹರ್ಷ ಏನು ತಪ್ಪು ಮಾಡಿದ್ದ. ಕದ್ದು ರಾತ್ರಿ ಹೊತ್ತು ಬಂದು ಕೊಲೆ ಮಾಡಿದ ಹೇಡಿ ಮುಸಲ್ಮಾನ ಗೂಂಡಾಗಳ ಬಗ್ಗೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಿಎಂ ಮಾತನಾಡಲ್ಲ. ಕೇವಲ ಮುಸಲ್ಮಾನರ ರಕ್ಷಣೆ ಮಾಡಲು ನಿಮಗೆ ಓಟ್ ಕೊಟ್ಟಿಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಎನ್ನುತ್ತೀರಿ, ಎಲ್ಲಾ ಧರ್ಮದ ಜನರಿಗೆ ನೀವು ರಕ್ಷಣೆ ಕೊಡಬೇಕು. ಪದೇ ಪದೇ ಹಿಂದೂ ಯುವತಿಯರ ಕೊಲೆಯಾದರೆ, ರಾಜ್ಯದಲ್ಲಿ ರಕ್ತ ಕ್ರಾಂತಿ ಆಗಲಿದೆ. ಹಿಂದೂ ಸಮಾಜದ ತಾಳ್ಮೆ ದೌರ್ಬಲ್ಯವಲ್ಲ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ಕೊಟ್ಟಿಗೆಯಲ್ಲಿದ್ದ ಸಣ್ಣ ಸಣ್ಣ ಕರುವನ್ನು ಕದಿಯುತ್ತಾರೆ. ಹಿಡಿದುಕೊಟ್ಟರೆ ಅವರ ಮೇಲೆ ಕ್ರಮವಾಗುತ್ತದೆ. ಈ ವ್ಯವಸ್ಥೆ ತಡೆಯಬೇಕು. ಇದು ಸಮಾವೇಶದ ಒತ್ತಾಯ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಕಾಶಿ ವಿಶ್ವನಾಥನ ಮಂದಿರ ಪಕ್ಕದಲ್ಲಿ ಜ್ಞಾನವ್ಯಾಪಿ ಮಸೀದಿಯಲ್ಲಿ ಪೂಜೆ ಮಾಡಲು ಕೋರ್ಟ್ ಅವಕಾಶ ಕೊಟ್ಟಿದೆ. ಮಥುರಾದಲ್ಲಿ ಸಹ ಕೃಷ್ಣ ಜನ್ಮಸ್ಥಾನದಲ್ಲಿದ್ದ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕೃಷ್ಣ ಜನ್ಮ ಸ್ಥಾನದ ಮಸೀದಿಯ ಜಾಗದಲ್ಲಿ ಕೃಷ್ಣ ದೇವಸ್ಥಾನ ನಿರ್ಮಾಣವಾಗಲಿದೆ. ನಮ್ಮ ಪೂರ್ವಜರು ಕಟ್ಟಿದ್ದ ದೇವಸ್ಥಾನಗಳ ಜಾಗದಲ್ಲಿರುವ ಮಸೀದಿಗಳನ್ನುಯಾವುದು ಬಿಡುವುದಿಲ್ಲ ಎಲ್ಲಾ ಕಡೆ ಮಂದಿರ ನಿರ್ಮಾಣ ಮಾಡುತ್ತೇವೆ ಎಂದರು.

ಅಂಬೇಡ್ಕರ್ ಪುತ್ಥಳಿಗೆ ಹಾರ ಹಾಕುವ ಮೂಲಕ ಕೆ.ಎಸ್ ಈಶ್ವರಪ್ಪ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಭದ್ರಾವತಿ ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿದ ರ್ಯಾಲಿ ಭದ್ರಾವತಿ ತರಿಕೆರೆ ರಸ್ತೆಯಲ್ಲಿರುವ ಪಾಂಡುರಂಗ ಕಲ್ಯಾಣ ಮಂಟಪದ ಬಳಿ ತಲುಪಿತು. ಕಲ್ಯಾಣ ಮಂಟಪ ಬಳಿ ಮಂಗಳವಾದ್ಯಗಳೊಂದಿಗೆ ಮಹಿಳೆಯರು ಈಶ್ವರಪ್ಪ ರವರಿಗೆ ಪೂರ್ಣಕುಂಭ ಸ್ವಾಗತ ಮಾಡಿದರು.

ಕಾರ್ಯಕ್ರದಲ್ಲಿ ಭದ್ರಾವತಿ ಮಂಡಲದ ಬಿಜೆಪಿ ಮಾಜಿ ಅಧ್ಯಕ್ಷ ಪ್ರಭಾಕರ್, ಹಿಂದುತ್ವವಾದಿ ನಾರಾಯಣಪ್ಪ, ಪ್ರದೀಪ್ ಕುಟ್ಟಿ

ಸೇರಿದಂತೆ ಅನೇಕ ಹಿಂದು ಕಾರ್ಯಕರ್ತರು ಇದ್ದರು.

——————

ಕೇಸರಿ ಧ್ವಜ ಭದ್ರಾವತಿಯ ಮುಖ್ಯ ರಸ್ತೆಯಲ್ಲಿ ಬರುವಾಗ ಪಾಕಿಸ್ಥಾನ ಹಿಂದೂಸ್ಥಾನ ಒಂದಾಗಿದೆ ಎಂಬ ಭಾವನೆ ಬರುವಂತೆ ಮಾಡದ್ದೀರಿ. ಪೂರ್ಣ ಕುಂಭ ಮೂಲಕ ಸ್ವಾಗತಿಸಿದ ಮಹಿಳೆಯರಿಗೆ ಧನ್ಯವಾದ. ಗಾಂಧಿ ವೃತ್ತದಲ್ಲಿ ಪುಷ್ಪ ವೃಷ್ಟಿ ಮಾಡಿದಾಗ ಭಗವಂತನೇ ಆಶೀರ್ವಾದ ಮಾಡಿದ ಹಾಗೆ ಇತ್ತು ಎಂದು ಕೆ.ಎಸ್‌.ಈಶ್ವರಪ್ಪ ಹರ್ಷ ವ್ಯಕ್ತಪಡಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!