ಶಿವಮೊಗ್ಗ, ಏ.25:
ನಿವೇಶನವನ್ನು ಹೆಸರಿಗೆ ಮಾಡಿಕೊಡಲು 15,000 ಲಂಚದ ಬೇಡಿಕೆ ಇಟ್ಟಿದ್ದ ಶಿವಮೊಗ್ಗ ತಾಲೂಕ್ ಅಬ್ಬಲಗೆರೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಯೋಗಿ ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ ಲಂಚದ ಹಣ ಸಹಿತ ಆತನ ವಿರುದ್ಧ ದೂರು ದಾಖಲಾಗಿದ್ದು ಬಂಧಿಸಲಾಗಿದೆ.


ಘಟನೆಯ ಸಮಗ್ರ ವಿವರ:
ಬಿ.ಯಶವಂತ ಬಿನ್ ಲೇಟ್ ಬಸಪ್ಪ, 57ವರ್ಷ, ಶಾಮಿಯಾನ ಸಪ್ಪೆ ಕೆಲಸ ವಾಸ: ತಿಮ್ಮರಾಯಪ್ಪ ಬಿಲ್ಡಿಂಗ್ ಗ್ಯಾಸ ಗೋಡನ್ ಹತ್ತಿರ, ನವುಲೆ, ಶಿವಮೊಗ್ಗ ಇವರು ದಿನಾಂಕ:24-04-2024 ರಂದು ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಠಾಣೆಯಲ್ಲಿ ಹಾಜರಾಗಿ ಗಣಕೀಕೃತ ದೂರನ್ನು ನೀಡಿದ್ದು, ಸದರಿ ದೂರಿನಲ್ಲಿ ದೂರುದಾರರ ಹೆಸರಿಗೆ ಶಿವಮೊಗ್ಗದ ಚನ್ನಮುಂಭಾಪುರ ಅಕ್ಷರ ಕಾಲೇಜ್ ಎದುರು ಸ.ನಂ: 9/8 ರಲ್ಲಿ 00-10.08 ಗುಂಟೆ ಜಾಗವಿದ್ದು, ಸದರಿ ಜಾಗವನ್ನು ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಶಿವಮೊಗ್ಗ ತಾಲ್ಲೂಕ್ ಅಬ್ಬಲಗೆರೆ ಗ್ರಾಮ ಪಂಚಾಯ್ತಿಯ ಆಪಾದಿತ ಅಧಿಕಾರಿಯಾದ ಕಾರ್ಯದರ್ಶಿ-02 ಯೋಗೇಶ್‌ರವರ ಬಳಿ ಈಗ್ಗೆ 6 ತಿಂಗಳ ಹಿಂದೆ ಆಧಾರ ಕಾರ್ಡ್, ಸ್ಟೇಚ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಏಕ ನಿವೇಶನ ವಿನ್ಯಾಸ ನಕ್ಷೆ ದೃಢೀಕರಣ, ಡಿ.ಸಿ.ಯವರ ಅಲಿನೇಷನ್ ಪತ್ರವನ್ನು ಲಗತ್ತಿಸಿ ಅರ್ಜಿಯನ್ನು ಕೊಡಲು ಹೋದಾಗ ಆಪಾದಿತ ಅಧಿಕಾರಿ ಪಿರ್ಯಾದಿಯಿಂದ ಅರ್ಜಿಯನ್ನು ಪಡೆದುಕೊಂಡು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದರು.

ದಿನಾಂಕ:-23-04-2024 ರಂದು ಮದ್ಯಾಹ್ನ ಸುಮಾರು 12.45 ಗಂಟೆಗೆ ಪಿರ್ಯಾದಿಯು ಆಪಾದಿತ ಅಧಿಕಾರಿಯವರ ಕಛೇರಿಗೆ ಹೋದಾಗ ಆಪಾದಿತ ಅಧಿಕಾರಿಯು ಪಿರ್ಯಾದಿಗೆ ನಿಮ್ಮ ಜಾಗವು ಅಪ್ರೋವಲ್ ಆಗಿದೆ ಅಂತ ಹೇಳಿ 15,000/-ರೂಗಳ ಲಂಚದ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿರುತ್ತಾರೆ. ಪಿರ್ಯಾದಿಗೆ ಲಂಚದ ಹಣವನ್ನು ನೀಡಲು ಇಷ್ಟವಿರದ ದೂರುದಾರರು ಶಿವಮೊಗ್ಗ ಲೋಕಾಯುಕ್ತ ಕಛೇರಿಗೆ ಹಾಜರಾಗಿ ದೂರು ನೀಡಿದ ಮೇರೆಗೆ ದಿನಾಂಕ:24-04-2024 ರಂದು ಬೆಳಗ್ಗೆ 08-30 ಗಂಟೆಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ:07/2024. ಕಲಂ:7(ಎ)ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರ ಪ್ರಕಾರ ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಕಛೇರಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.


ಅದರಂತೆ ಇಂದು ದಿನಾಂಕ:24-04-2024 ರಂದು ಆರೋಪಿ ಯೋಗೇಶ ಟಿ. ಗ್ರೇಡ್-2 ಕಾರ್ಯದರ್ಶಿ, ಅಬ್ಬಲಗೆರೆ ಗ್ರಾಮ ಪಂಚಾಯತಿ ಇವರು ಪಿರ್ಯಾದಿದಾರರಿಂದ ರೂ. 15,000/- ಲಂಚದ ಹಣವನ್ನು ಪಿಠಾದಿದಾರರಿಂದ ಪಡೆಯುವಾಗ ನಮ್ಮ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಅವರಿಂದ ರೂ.15,000/-ಗಳ ಲಂಚದ ಹಣವನ್ನು ಜಪ್ತಿಪಡಿಸಿಕೊಂಡಿದ್ದು, ಆಪಾದಿತರನ್ನು ಬಂಧಿಸಿ ತನಿಖೆಯನ್ನು ವೀರಬಸಪ್ಪ ಎಲ್.ಕುಸಲಾಪುರ ಪೊಲೀಸ್ ನಿರೀಕ್ಷಕರು, ಕ.ಲೋ, ಶಿವಮೊಗ್ಗ ಇವರು ಕೈಗೊಂಡಿರುತ್ತಾರೆ.
ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಕಚೇರಿಯ ಪೊಲೀಸ್ ಅಧೀಕ್ಷಕರಾದ ಮಂಜುನಾಥ ಚೌದರಿ. ಎಂ.ಹೆಚ್, ಹಾಗೂ ಪೊಲೀಸ್ ಉಪಾಧೀಕ್ಷಕರಾದ ಉಮೇಶ್ ಈಶ್ವರನಾಯ್ಕ ಇವರ ಸೂಕ್ತ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ನಿರೀಕ್ಷಕರಾದ ವೀರಬಸಪ್ಪ ಎಲ್. ಕುಸಲಾಪುರ, ಪ್ರಕಾಶ್, ಹೆಚ್.ಎಸ್.ಸುರೇಶ್ ಮತ್ತು ಸಿಬ್ಬಂದಿಯವರಾದ ಯೋಗೇಶ್ ಸಿ.ಹೆಚ್.ಸಿ, ಸುರೇಂದ್ರ ಹೆಚ್.ಜಿ, ಸಿ.ಹೆಚ್.ಸಿ, ಪ್ರಶಾಂತ್ ಕುಮಾರ್ ಸಿ.ಪಿ.ಸಿ, ರಘುನಾಯ್ಕ ಸಿ.ಪಿ.ಸಿ, ದೇವರಾಜ್ ಸಿಪಿಸಿ, ಪುಟ್ಟಮ್ಮ ಎನ್. ಮಪಿಸಿ, ಪ್ರದೀಪ್, ಎ.ಪಿ.ಸಿ, ಗೋಪಿ ವಿ. ಎ.ಪಿ.ಸಿ. ಜಯಂತ್ ಎ.ಪಿ.ಸಿ. ಇವರುಗಳು ಹಾಜರಿದ್ದು, ಕರ್ತವ್ಯ ನಿರ್ವಹಿಸಿರುತ್ತಾರೆ.

By admin

ನಿಮ್ಮದೊಂದು ಉತ್ತರ

error: Content is protected !!