ಶಿವಮೊಗ್ಗ: ನಾವೇನೇ ಕೊಲೆ ಮಾಡಿದರೂ, ಯಾರಿಗೆ ಚಾಕು ಹಾಕಿದರೂ ಕಾಂಗ್ರೆಸ್ ಸರ್ಕಾರ ನಮಗೆ ರಕ್ಷಣೆ ಕೊಡುತ್ತದೆ ಎಂಬ ಧೈರ್ಯ ಮುಸ್ಲಿಂ ಗೂಂಡಾಗಳಿಗೆ ಬಂದಿದೆ. ಇದರಿಂದ ಅವರು ಅಟ್ಟಹಾಸ ಮೆರೆಯುತ್ತಿದ್ದಾರೆ. ಆದರೆ, ಹಿಂದು ಸಮಾಜ ಜಾಗೃತಿ ಆದರೆ ಈ ಸರ್ಕಾರ ಉಳಿಯಲ್ಲ ಎಂದು ಲೋಕಸಭಾ ಚುನವಣೆ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಗಳ ರಕ್ಷಣೆ ಇಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ಹಿಂದು ಯುವತಿ ಮೇಲೆ ಮುಸ್ಲಿಂ ಗೂಂಡಾ ಚಾಕುನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯದ ಉತ್ತರ ನೀಡುತ್ತಿದೆ. ಕಾಲೇಜು ಆವರಣಕ್ಕೆ ಹೋಗಿ ಹಿಂದು ಯುವತಿಯನ್ನು ಕೊಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಸರ್ಕಾರ ಕೊಲೆಗಾರನಿಗೆ ಒಂದು ನೇಣಿಗೆ ಹಾಕಬೇಕು, ಇಲ್ಲ ಗುಂಡಿಟ್ಟು ಕೊಲ್ಲಬೇಕು. ಆಗ ಮಾಡಿದರೆ ಮಾತ್ರ ಹಿಂದುಗಳಿಗೆ ಸ್ವಲ್ಪ ಸಮಾಧಾನ ಆಗುತ್ತದೆ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಈ ರೀತಿಯ ದುರ್ಘಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ಎಂಬಂತೆ ವರ್ತಿಸುತ್ತಿದೆ. ಇಂತಹ ಸಂದರ್ಭದಲ್ಲಿ ಹಿಂದುಗಳ ಪರವಾಗಿ ನಿಂತು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಈಗ ಸರ್ಕಾರ ನಿಮ್ಮ ರಕ್ಷಣೆಗೆ ಇದ್ದೇವೆ ಎಂದು ಧೈರ್ಯ ಕೊಡದಿದ್ದರೆ ಕಷ್ಟ ಆಗುತ್ತದೆ. ಹಿಂದು ಸಮಾಜದವರು ಹರಿಸುವ ಒಂದು ಹನಿ ರಕ್ತವೂ ನಿಮ್ಮ ಅಧಿಕಾರವನ್ನೇ ಕಿತ್ತುಕೊಳ್ಳಬಹುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ನಾವು ರಾಜಕೀಯ ಮಾಡಲ್ಲ:
ಹುಬ್ಬಳ್ಳಿಯಲ ನೇಹ ಕೊಲೆಯಿಂದ ಯಾರಿಗೆ ಹಿನ್ನಡೆಯಾಗುತ್ತದೆ. ಯಾರಿಗೆ ಮುನ್ನಡೆಯಾಗುತ್ತದೆ ಎಂಬ ರಾಜಕಾರಣವನ್ನು ನಾನು ಮಾಡಲ್ಲ. ನಮ್ಮ ಹೆಣ್ಣು ಮಗಳ ಜೀವ ಹೋಗಿದೆ. ಇದರಲ್ಲಿ ರಾಜಕೀಯ ಮಾಡಲ್ಲ. ಕಾಂಗ್ರೆಸ್ ನವರು ಇದರ ಬಗ್ಗೆ ರಾಜಕೀಯ ಮಾಡುತ್ತಿದೆ. ಗೃಹ ಸಚಿವ ಜಿ.ಪರಮೇಶ್ವರ್ ಅವರು ತನಿಖೆಗೂ ಮುನ್ನವೇ ಲವ್ ಜಿಹಾದ್ ಅಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಎಂ.ಬಿ.ಪಾಟೀಲ್ ಹುಬ್ಬಳ್ಳಿ ಪ್ರಕರಣವನ್ನ ಧರ್ಮದ ಲೇಪನ ಮಾಡಬೇಡಿ ಎಂದು ಹೇಳಿದ್ದಾರೆ. ಅವರ ಮಗಳಿಗೆ ಈ ರೀತಿ ಚಾಕು ಹಾಕಿದ್ದರೆ ಅವರು ಸುಮ್ಮನೆ ಇರ್ತಿದ್ದರಾ? ಇಬ್ಬರೂ ಬೇಜವಬ್ದಾರಿ ಸಚಿವರು ಎಂದು ಹರಿಹಾಯ್ದರು.
ಇನ್ನು ಕಾಂಗ್ರೆಸ್ ನಾಯಕ ಸುರ್ಜೆವಾಲ ಅವರು ಕೊಲೆಗಾರನ್ನು ತಕ್ಷಣವೇ ಬಂಧಿಸಿದ್ದೇವೆ ಎಂದಿದ್ದಾರೆ. ಇದು ಸಮಜಾಯಿಸಿ ಕೊಡುವ ರೀತಿಯೇ? ಅಕಸ್ಮಾತ್ ಇವರ ಮಗಳಿಗೆ ಈ ರೀತಿ ಆಗಿ ಕೇಂದ್ರ ಗೃಹ ಅಮಿತ್ ಶಾ ಅವರು 5 ನಿಮಿಷದಲ್ಲಿ ಕೊಲೆಗಾರರನ್ನು ಬಂಧಿಸಿದ್ದೇವೆ ಎಂದರೆ ಏನ್ ಅರ್ಥ. ನಾವು ಕೊಲೆಯಾಗದಂತೆ ನೋಡಿಕೊಳ್ಳಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
—–
ಏ.22ಕ್ಕೆ ರಾಷ್ಟ್ರಭಕ್ತರ ಬಳಗದಿಂದ ಪ್ರತಿಭಟನೆ
ಹುಬ್ಬಳ್ಳಿಯಲ್ಲಿ ಹಿಂದು ಯುವತಿ ಕೊಲೆ ಸೇರಿದಂತೆ ಬೆಂಗಳೂರು, ಚನ್ನಗಿರಿ ಪ್ರಕರಣವನ್ನೂ ಖಂಡಿಸಿ ರಾಷ್ಟ್ರಭಕ್ತರ ಬಳಗದಿಂದ ಏ.22ರಂದು ಬೆಳಗ್ಗೆ 10ಕ್ಕೆ ನಗರದ ದೈವಜ್ಞ ಕಲ್ಯಾಣ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಅಂದು ದೈವಜ್ಞ ಕಲ್ಯಾಣ ಮಂದಿರದಿಂದ ಆರಂಭವಾಗುವ ಪ್ರತಿಭಟನೆ ಮೆರವಣಿಗೆ ದುರ್ಗಿಗುಡಿ, ಸೀನಪ್ಪ ಶೆಟ್ಟಿ (ಗೋಪಿ ವೃತ್ತ) ವೃತ್ತ, ಬಾಲರಾಜ್ ಅರಸ್ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ ಎಂದರು.
ನಮ್ಮ ಪ್ರತಿಭಟನೆಗೆ ಅನುಮತಿ ಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಕೋರಿದ್ದೇವೆ. ಅನುಮತಿ ಕೊಡುತ್ತೇವೆ ಎಂದಿದ್ದಾರೆ. ಒಂದು ವೇಳೆ ಅವರು ಅನುಮತಿ ಕೊಡದಿದ್ದರೂ ನಾವು ಹಿಂದುಗಳಿಗಾಗಿ ಪ್ರತಿಭಟನೆ ಮಾಡೇ ಮಾಡುತ್ತಿದ್ದೇವೆ. ಅವರು ಬೇಕಾದರೆ ನಮ್ಮನ್ನು ಬಂಧಿಸಲಿ, ಹಿಂದುಗಳಿಗೆ ಅನ್ಯಾಯ ಆದಾಗ ನೋಡಿಕೊಂಡು ಸುಮ್ಮನೆ ಕೂರುವ ಮನುಷ್ಯ ನಾನಲ್ಲ. ನಾವು ಪ್ರತಿಭಟನೆ ಮಾಡೇ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೊಲೆಯಾಗದಂತೆ ನೋಡಿಕೊಳ್ಳಿ ಎಂದ ಈಶ್ವರಪ್ಪ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಕ್ರಮ ಎಂದಿರುವ ಸುರ್ಜೇವಾಲ್ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬೇಡ. ಡಿಸಿಎಂ ಮತ್ತು ಸಿಎಂ ಮೇಲೆ ಕ್ರಮ ಏನು ಎಂದು ಸ್ಪಷ್ಟಪಡಿಸಿ ಎಂದು ಪ್ರಶ್ನಿಸಿದರು.