
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು.

ತ್ಯಾವರೆಚಟ್ನಳ್ಳಿಯಲ್ಲಿ ಕೆ.ಎಸ್.ಈಶ್ವರಪ್ಪ ಚುನಾವಣಾ ಪ್ರಚಾರ ಕಾರ್ಯ ನಡೆಸಿದರು. ಶಿವ ಕೋ ಆಪರೇಟಿವ್ ಮಾಜಿ ಅಧ್ಯಕ್ಷ ಎಚ್.ಬಿ. ಕರಿಬಸಪ್ಪ ರವರ ಮನೆಗೆ ತೆರಳಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಲಿಂಗಾಯತ ಮುಖಂಡರಾದ ಮಹಾಲಿಂಗ ಶಾಸ್ತ್ರಿ, ಕೆ.ಈ.ಕಾಂತೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಂತರ ಕೃಷಿಕ ಮಲ್ಲೇಶಪ್ಪ ರವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಲಾಯಿತು. ಬಳಿಕ ಹೊಳಲೂರು ಮುಖಂಡರಾದ ಕಲ್ಯಾಣಪ್ಪರವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.

ಈಶ್ವರಪ್ಪ ಪ್ರಚಾರ ನಡೆಸುವ ಸಂದರ್ಭ ವಿವಿಧ ಪಕ್ಷದ ಕಾರ್ಯಕರ್ಯರು ಈಶ್ವರಪ್ಪರನ್ನು ಬೆಂಬಲಿಸುವುದು ತಿಳಿಸಿದರು. ನಾನು ಸ್ಪರ್ಧೆ ಘೋಷಣೆ ಮಾಡಿದ ಬಳಿಕ ನಿರೀಕ್ಷೆಗೂ ಮೀರಿ ನೀವೆಲ್ಲ ಬೆಂಬಲ ಕೊಡುತ್ತಿದ್ದೀರಿ, ನಿಮ್ಮೆಲ್ಲರ ಶಕ್ತಿಯಿಂದ ಕ್ಷೇತ್ರದಲ್ಲಿ ನಾನು ಗೆಲ್ಲುತ್ತೇನೆ ಎಂದು ಈಶ್ವರಪ್ಪ ಹೇಳಿದರು.