ತೀರ್ಥಹಳ್ಳಿ,ಜ.03:
ಇತಿಹಾಸ ಪ್ರಸಿದ್ಧ ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯು ಜ.13 ರಿಂದ 15ರವರೆಗೆ ಜಾತ್ರೆ ನಡೆಯಲಿದ್ದು, ಜ.15ಕ್ಕೆ ರಥೋಥ್ಸವ, ತೆಪ್ಪೋತ್ಸವ ನಡೆಯಲಿದೆ. ಆದರೆ ಈ ಬಾರಿ ಸರಳವಾಗಿ ಆಚರಿಸಲು ನಿರ್ಧಾರ ಮಾಡಲಾಗಿದೆ ಎಂದು ಶಾಸಕ ಆರಗ ಜ್ಙಾನೇಂದ್ರ ಹೇಳಿದರು.
ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಎಳ್ಳಾಮಾವಾಸ್ಯೆ ಜಾತ್ರೆಯ ಬಗ್ಗೆ
ಡಾ. ಶ್ರೀಪಾದ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತಿಳಿಸಿದರು.
ಕರೋನಾ ನಿಯಮಾವಳಿ ಪಾಲನೆ ಕಡ್ಡಾಯ. ತೆಪ್ಪೋತ್ಸವದ ದಿನ ಸಾಂಪ್ರದಾಯಕವಾಗಿ ಹಸಿರು ಪಟಾಕಿ ಹೊಡೆಯಲು ಅನುಮತಿ ನೀಡಲಾಗಿದೆ. ನಂತರ ನದಿ ತೀರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಜಾತ್ರೆಗೆ ಸಂಬಂಧಿಸಿದಂತೆ ಎಲ್ಲಾ ಸಮಿತಿಗಳನ್ನು ಹಳೆಯ ಸಮಿತಿಯಂತೆ ಮುಂದುವರಿಸಲಾಗಿದೆ. ಎಳ್ಳಾಮಾವಾಸ್ಯೆ ಜಾತ್ರೆಗೆ ಅಂಗಡಿ ಮುಂಗಟ್ಟು ನಿಗದಿತ ಸ್ಥಳದಲ್ಲಿ ಮಾತ್ರ ಹಾಕಲು ನಿರ್ಧರಿಸಲಾಗಿದೆ. ಜತೆಗೆ ಜಾತ್ರೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ಪ್ರತಿ ವರ್ಷದಂತೆ ಈ ವರ್ಷವು ಅನ್ನದಾಸೋದ ಇರಲಿದೆ ಎಂದರು.


ಜಾತ್ರೆಯ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮ ಜ.13ಕ್ಕೆ ತೀರ್ಥಸ್ನಾನ,,ಜ.14ಕ್ಕೆ ರಥೋತ್ಸವ, ಜ.15ಕ್ಕೆ ತೆಪ್ಪೋತ್ಸವ ಸರಳವಾಗಿ ನಡೆಯಲಿದೆ.ಮಾಜಿ ಪ.ಪಂ.ಅಧ್ಯಕ್ಷ
ಸೊಪ್ಪುಗುಡ್ಡೆ ರಾಘವೇಂದ್ರ ಅವರಿಗೆ ಜಾತ್ರೆಯ ಉಸ್ತುವಾರಿ ನೀಡಿದ್ದು, ಅವರ ನೇತೃತ್ವದಲ್ಲಿ ಜಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಆಶಾಲತಾ, ಪಪಂ ಮುಖ್ಯಾಧಿಕಾರಿ ನಾಗೇಂದ್ರಕುಮಾರ್, ಸಂದೇಶ್ ಜವಳಿ, ನಾಗರಾಜ್ ಶೆಟ್ಟಿ, ದೇವಸ್ಥಾನದ ಅರ್ಚಕ ರಾಕೇಶ್ ಭಟ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!