ಶಿವಮೊಗ್ಗ, ಮಾ.೨೧:
ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಿಳಿಸುವ ಹಾಗೂ ಸೌಲಭ್ಯ ಪಡೆಯಲು ಉಚಿತ ಸೇವಾ ಕೇಂದ್ರ ಸ್ಥಾಪಿಸಿರುವ ಎಂ. ರಾಜಶೇಖರ್ ಬಳಗದ ಕಾರ್ಯ ಶ್ಲಾಘನೀಯ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.


ಅವರು ಎಂ.ರಾಜಶೇಖರ್ ಬಳಗದಿಂದ ಹೊರತಂದಿರುವ ಸರ್ಕಾರ ಸೌಲಭ್ಯಗಳ ಮಾಹಿತಿಯನ್ನು ಒಳಗೊಂಡ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.


ನಗರದ ೨೭ನೇ ವಾರ್ಡ್‌ನ ಅಣ್ಣಾನಗರದ ನಾಗರೀಕರಿಗೆ ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್, ವೃದ್ಯಾಪ್ಯ ವೇತನ, ಅಂಗವಿಕಲ ವೇತನ, ಆಯುಷ್ಮಾನ್ ಕಾರ್ಡ್ ಸೇರಿದಂತೆ ರಾಜ್ಯ ಸರ್ಕಾರದ ಹಲವು ಸೌಲಭ್ಯಗಳ ಮಾಹಿತಿ ನೀಡುವುದರ ಜೊತೆಗೆ ಉಚಿತವಾಗಿ ಅದನ್ನು ಮಾಡಿಕೊಳ್ಳುವ ಜವಾಬ್ದಾರಿ ಹೊತ್ತಿರುವ ಎಂ.ರಾಜಶೇಖರ್ ಬಳಗದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ರಾಜಶೇಖರ್ ಮಾತನಾಡುತ್ತಾ, ಬಳಗದ ಸದಸ್ಯರಿಂದ ೨೭ನೇ ವಾರ್ಡ್‌ನ ಅಣ್ಣಾನಗರದ ನಾಗರೀಕರ ಮನೆ ಮನೆಗೆ ತೆರಳಿ ನಮ್ಮ ಬಳಗಕ್ಕೆ ಸದಸ್ಯತ್ವ ನೊಂದಣಿ ಮಾಡುವ ಜೊತೆಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸೌಲಭ್ಯದಿಂದ ವಂಚಿತರಾದವರಿಗೆ ಸೌಲಭ್ಯವನ್ನು ತಲುಪಿಸುವ ಹಾಗೂ ಉಚಿತ ಸೇವಾ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಇದನ್ನು ೨೭ನೇ ವಾರ್ಡ್‌ನ ನಾಗರೀಕರು ಪಡೆದುಕೊಳ್ಳಬೇಕಾಗಿ ಮನವಿ ಮಾಡಿದರು.


ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್,  ಮಹಾನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ.ಯೋಗೇಶ್, ಮಾಜಿ ಸೂಡಾ ಅಧ್ಯಕ್ಷ ಎನ್.ರಮೇಶ್, ಒಬಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ವಿಶ್ವನಾಥ್ ಕಾಶಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯು. ಶಿವಾನಂದ್, ದಕ್ಷಿಣ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಕಲೀಂಪಾಶ, ಉತ್ತರ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಎಂ.ಎಸ್.ಶಿವಕುಮಾರ್, ಕಾಂಗ್ರೆಸ್‌ನ ಮುಖಂಡರಾದ, ಶಿ.ಜು.ಪಾಶ, ಪಿ.ವೆಂಕಟೇಶ್, ಎಸ್.ರಾಮನಾಥ್, ವಾಜಿದ್, ಚಿನ್ನಸ್ವಾಮಿ, ರಮೇಶ್, ಶ್ರೀಧರ್, ಬಸವರಾಜ್, ಸಂಪತ್ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!