ಶಿಕಾರಿಪುರ,ಫೆ.೨೮: ದೇಶದ್ರೋಹಿಗಳಿಗೆ ರಕ್ಷಣೆ ನೀಡುತ್ತಿವೆ ಎನ್ನುವುದು ಕಾಂಗ್ರೆಸ್ ಸರ್ಕಾರದ ೬ನೇ ಗ್ಯಾರಂಟಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ನೆನ್ನೆ ಪಾಕಿಸ್ತಾನದ ಪರ ಘೋಷನೆ ಕೂಗಿದ ವ್ಯಕ್ತಿಯನ್ನು ಒದ್ದುಒಳಗೆಹಾಕುವುದನ್ನು ಬಿಟ್ಟು ಅವರ ಪರ ಮಾತನಾಡುತ್ತಾರೆ.
ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿಲ್ಲವೇ ತನಿಖೆ ಮಾಡುವುದು ಏನ್ ಇದೆ. ದೇಶದ್ರೋಹಿಗಳನ್ನು ಬಂಧಿಸಲು ಬಿಜೆಪಿ ಹೋರಾಟ ಮಾಡಬೇಕೆ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಸರ್ಕಾರ ಓಲೈಕೆ ಮಾಡುವುದನ್ನು ನಿಲ್ಲಿಸದಿದ್ದರೆ, ತುಂಬ ಕಷ್ಟವಾಗುತ್ತದೆ. ಪಾಕಿಸ್ತಾನದ ಪರವಾಗಿ ಕೂಗಿದವರನ್ನು ಬಂಧಿಸುವುದನ್ನು ಬಿಟ್ಟು ಅದರ ವಿರುದ್ಧ ಹೋರಾಟ ಮಾಡಿದವರನ್ನು ಬಂಧಿಸುವುದು ಯಾವ ನ್ಯಾಯ. ಕಾಂಗ್ರೆಸ್ ಸರ್ಕಾರಕ್ಕೆ ಮಾನವು ಮಾರ್ಯಾದೆಯೂ ಇಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ, ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅಕ್ಷಮ್ಯ ಅಪರಾಧ. ಇಂತಹ ಘಟನೆಗಳು ನಡೆಯಬಾರದು. ರಾಜ್ಯ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.