ಶಿವಮೊಗ್ಗ, ಫೆ 22 : ವನ್ಯ ಜೀವಿ ಸಂರಕ್ಷಣೆ ಅಘೋಷಿತ ವನ್ಯಜೀವಿ / ಪ್ರಾಣಿಗಳ ಅಂಗಾಂಗ ಪದಾರ್ಥಗಳು ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಹೊಂದಿರುವ ಸಾರ್ವಜನಿಕರು ಮಾಲೀಕತ್ವ ದೃಢೀಕರಣ ಹೊಂದಿರದೇ ಇದ್ದಲ್ಲಿ ಅರಣ್ಯ ಇಲಾಖೆಗೆ ಅರ್ಪಿಸಲು ನಿಯಮ 2024 ರಡಿ ದಿ: 10/04/2024 ರೊಳಗಾಗಿ ತಮ್ಮ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (ಪ್ರಾದೇಶಿಕ/ವನ್ಯಜೀವಿ) ಸಹಾಯಕ ಅರಣ್ಯ

ಸಂರಕ್ಷಣಾಧಿಕಾರಿಗಳು (ಪ್ರಾದೇಶಿಕ/ವನ್ಯಜೀವಿ) ವಲಯ ಅರಣ್ಯಾಧಿಕಾರಿಗಳು (ಪ್ರಾದೇಶಿಕ/ವನ್ಯಜೀವಿ) ಅಥವಾ ಹತ್ತಿರದ ಪೋಲಿಸ್ ಠಾಣಾ ಮುಖ್ಯಸ್ಥರುಗಳಲ್ಲಿ ನಿಗಧಿತ ನಮೂನೆ-1 ರೂ 100/-ಛಾಪಾ ಕಾಗದದಲ್ಲಿ ನೋಟರಿ ಮಾಡಿಸಿ ಅಫಿಡವಿಟ್ ಮುಖಾಂತರ ಅರ್ಪಿಸುವಂತೆ ಕೋರಲಾಗಿದೆ.

ವಲಯ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ; ಸಾಗರ ವಲಯ-9481991510, ವಲಯ ಅರಣ್ಯಾಧಿಕಾರಿ ಕಾರ್ಗಲ್ ವಲಯ-9481991509, ಆನಂದಪುರ ಮತ್ತು ಚೋರಡಿ ವಲಯ-9481991508, ಹೊಸನಗರ ವಲಯ-9481991506, ನಗರ ವಲಯ-9481991507, ಸೊರಬ ವಲಯ-9481991517,

ಆನವಟ್ಟಿ ವಲಯ-9481991516, ಶಿಕಾರಿಪುರ ವಲಯ-9481991513, ಶಿರಾಳಕೊಪ್ಪ ವಲಯ-9481991517, ಅಂಬ್ಲಿಗೊಳ ವಲಯ-9481991512 ಇವರುಗಳನ್ನು ಸಂಪರ್ಕಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಗರ ವಿಭಾಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—————————