![cropped-tungataranga-logo1.png](https://tungataranga.com/wp-content/uploads/2020/04/cropped-tungataranga-logo1.png)
ಜನ ಅನುಭವಿಸುತ್ತಿರುವ ಕಷ್ಟ ನೋವುಗಳಿಗೆ ನಗರ ಜೆಡಿಎಸ್ ಧ್ವನಿಯಾಗಿ ಕೆಲಸ ಮಾಡುತ್ತಿದೆ :ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ https://tungataranga.com/?p=28106
ಎಂಪಿಎಂ ಪುನಶ್ಚೇತನ/ ಸಚಿವರ ವಿಡಿಯೋ ಸಂವಾದ- ನೀಲಗಿರಿ ಮರಗಳ ನಿಷೇಧ ತೆರವು, ಒಂದು ತಜ್ಞರ ಸಮಿತಿ ತೀರ್ಮಾನ https://tungataranga.com/?p=28084
ಮೇಲಿನ 👆👆ಸಂಪೂರ್ಣ ಸುದ್ದಿ ಓದಲು ಕೊಟ್ಟಿರುವ ಆಯಾ ಲಿಂಕ್ ಬಳಸಿ
ಬೆಂಗಳೂರು, ಫೆ.21:
ಶಿಕ್ಷಣ ಇಲಾಖೆ ಇಲಾಖೆ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಲೇ ಇದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳ ಪ್ರವೇಶದ್ವಾರದ ಮೇಲೆ ಹಾಕಲಾಗಿದ್ದ ಕೈಮುಗಿದು ಬನ್ನಿ ಘೋಷವಾಕ್ಯದ ಬದಲಾಗಿ ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾವಣೆ ವಿವಾದ ಸೃಷ್ಟಿ ಮಾಡಿತ್ತು.
ಬಡವರ ಕಷ್ಟಗಳಿಗೆ “ಕೈ” ಹಿಡಿದ ಕಾಂಗ್ರೆಸ್/ ಗ್ಯಾರಂಟಿಗಳ ಬಗ್ಗೆ ವಿಶ್ವಾಸ ತುಂಬಲು ಶಿವಮೊಗ್ಗದಲ್ಲಿ ಫೆ.24 ರಂದು ಸಮಾವೇಶ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ https://tungataranga.com/?p=28111
ಬಡವರ ಕಷ್ಟಗಳಿಗೆ “ಕೈ” ಹಿಡಿದ ಕಾಂಗ್ರೆಸ್/ ಗ್ಯಾರಂಟಿಗಳ ಬಗ್ಗೆ ವಿಶ್ವಾಸ ತುಂಬಲು ಶಿವಮೊಗ್ಗದಲ್ಲಿ ಫೆ.24 ರಂದು ಸಮಾವೇಶ:ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ https://tungataranga.com/?p=28111
ನೀರುದ್ಯೋಗಿಗಳಿಗೆ ಗುಡ್ ನ್ಯೂಸ್ /50 ಸಾವಿರಉದ್ಯೋಗಾವಕಾಶ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ https://tungataranga.com/?p=28080
ಮೇಲಿನ 👆👆ಸಂಪೂರ್ಣ ಸುದ್ದಿ ಓದಲು ಕೊಟ್ಟಿರುವ ಆಯಾ ಲಿಂಕ್ ಬಳಸಿ
ಸಾರ್ವಜನಿಕ ಆಕ್ರೋಶ, ಖಂಡನೆ ವ್ಯಕ್ತವಾಗುತ್ತಿದ್ದಂತೆ, ಯೂಟರ್ನ್ ಹೊಡೆದ ಸರ್ಕಾರ ಹಾಗೇ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿ ಮತ್ತೆ ಯಥಾಸ್ಥಿತಿ ಘೋಷವಾಕ್ಯ ಬರೆಸಿತು. ಅದಾದ ಮೇಲೆ ಮತ್ತೆ ಸರ್ಕಾರ ಖಾಸಗಿ ಶಾಲೆಗಳಲ್ಲಿ ಇನ್ನುಮುಂದೆ ನಾಡಗೀತೆ ಕಡ್ಡಾಯವಲ್ಲ ಎಂಬಂತ ಹೇಳಿಕೆ ನೀಡಿ ಆದೇಶ ಹೊರಡಿಸಿತು. ಇಲ್ಲಿಯೂ ಸಹ ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಲ್ಲ ಶಾಲೆಗಳಿಗೆ ಕಡ್ಡಾಯ ಎಂದಿತು. ಇದೀಗ ಹತ್ತನೇ ತರಗತಿ ಪರೀಕ್ಷೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕೆಂದು ಮೌಖಿಕ ಸೂಚನೆ ನೀಡಿ ಶಿಕ್ಷಣ ಇಲಾಖೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಹೌದು ಇತ್ತೀಚೆಗೆ ಪರೀಕ್ಷೆ ವೆಚ್ಚವೆಂದು ವಿದ್ಯಾರ್ಥಿಗಳಿಂದ 50 ರೂ, ವಸೂಲಿ ಮಾಡಿದ್ದ ಸರ್ಕಾರ. ಪರೀಕ್ಷೆ ಶುಲ್ಕ ವಸೂಲಿ ಮಾಡಿದ್ದಲ್ಲದೇ ಇದೀಗ ಹತ್ತನೇ ತರಗತಿಗೆ ನಡೆಯುವ ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆಗಳನ್ನ ತರುವಂತೆ ಶಾಲೆಯಿಂದ ಮೌಖಿಕ ಸೂಚನೆ ನೀಡಿದೆ ಎಂಬ ಮಾಹಿತಿ ಬಂದಿದೆ. ಈ ಸಂಬಂಧ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯಿಸಿದ್ದು, ಮಕ್ಕಳಿಂದ ಉತ್ತರ ಪತ್ರಿಕೆ ತರುವಂತೆ ಹೇಳಿರುವ ಶಿಕ್ಷಣ ಇಲಾಖೆ ನಡೆಯನ್ನು ಖಂಡಿಸಿದ್ದಾರೆ.
![](http://tungataranga.com/wp-content/uploads/2024/01/madhu-bangarappa-car-accident-1703735457.jpg)
ಪರೀಕ್ಷೆ ವೆಚ್ಚವೆಂದು ಶಾಲಾ ಮಕ್ಕಳಿಂದ 50ರೂ. ವಸೂಲಿ ಮಾಡಿದ್ದಲ್ಲದೆ ಈಗ ಪತ್ರಿಕೆಗಳನ್ನ ವಿದ್ಯಾರ್ಥಿಗಳೇ ತರಬೇಕು ಎಂದಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಪರೀಕ್ಷೆ ವೇಳೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ರೀತಿ ಮಾಡುತ್ತಿದ್ದಾರೆ ಎಂದು ನನಗನಿಸುತ್ತಿದೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೂರ್ವಸಿದ್ಧತೆ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕೆಂದು ಶಾಲೆಗಳಿಗೆ ಕೊಟ್ಟಿರುವ ಮೌಖಿಕ ಆದೇಶ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.
ಫೆ.24 ರಂದು ಫ್ರೀಡಂಪಾರ್ಕ್ನಲ್ಲಿ ಸರ್ಕಾರದ 5 ಗ್ಯಾರಂಟಿಗಳ ಜಿಲ್ಲಾ ಫಲಾನುಭವಿಗಳ ಸಮಾವೇಶ/ ಸಂಭ್ರಮದ ಹಬ್ಬಕ್ಕೆ ಬನ್ನಿ: ಹೆಚ್.ಸಿ. ಯೋಗೀಶ್ https://tungataranga.com/?p=28108
ತುಂಗಾ ರಿವರ್ ಫ್ರಂಟ್ ಯೋಜನೆ/ಫೆ.23 ರಿಂದ ಪ್ರಾಯೋಗಿಕವಾಗಿ ಸಾರ್ವಜನಿಕರಿಗೆ ಉಚಿತ ಪ್ರವೇಶ https://tungataranga.com/?p=28099
ಉಕ್ಕಿನ ನಗರಿ ಭದ್ರಾವತಿಯಲ್ಲಿ ಯಶಸ್ವಿ ಸಂವಿಧಾನ ಜಾಗೃತಿ https://tungataranga.com/?p=28101
ಮೇಲಿನ 👆👆ಸಂಪೂರ್ಣ ಸುದ್ದಿ ಓದಲು ಕೊಟ್ಟಿರುವ ಆಯಾ ಲಿಂಕ್ ಬಳಸಿ
ಒಟ್ಟಿನಲ್ಲಿ ಶಿಕ್ಷಣ ಇಲಾಖೆ ಒಂದಾದ ಮೇಲೊಂದು ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದೆ. ಮೊದಲಿಗೆ ಏನೋ ಮಾಡಲು ಹೋಗುತ್ತೆ. ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿ ಯುಟರ್ನ್ ಹೊಡೆಯುತ್ತೆ. ಇದೀಗ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆ ತರುವ ಮೌಖಿಕ ಆದೇಶವೂ ಸಹ ಸಾರ್ವಜನಿಕರ ಅಥವಾಕ ಪೋಷಕರ ಆಕ್ರೋಶ ಗುರಿಯಾಗುವ ಸಾಧ್ಯತೆ ಇದೆ.
ಇದು ಅಧಿಕೃತ ಸಂಗ್ರಹ ಸುದ್ದಿ, ಅನುದಾನರಹಿತ ಶಾಲೆಯವರೇ ಉತ್ತರಿಸಬೇಕು