ಶಿವಮೊಗ್ಗ, ಫೆಬ್ರವರಿ ೨೧;): ತೀರ್ಥಹಳ್ಳಿ ವಲಯ ಅಬಕಾರಿ ಇಲಾಖೆಯು ಮುಟ್ಟುಗೋಲು ಹಾಕಿಕೊಂಡಿರುವ ಟಿ.ವಿ.ಎಸ್.ಸ್ಟಾರ್ ಸಿಟಿ ಹಾಗೂ ಟಿವಿಎಸ್ ಆಟೋ ರಿಕ್ಷಾ ವಾಹನಗಳನ್ನು
ಫೆ. ೨೩ ರಂದು ಬೆಳಗ್ಗೆ ೧೧.೦೦ಕ್ಕೆ ಅಬಕಾರಿ ಉಪ ನಿರೀಕ್ಷಕರ ಕಚೇರಿ, ತೀರ್ಥಹಳ್ಳಿ ವಲಯ ಕಚೇರಿ ಆವರಣದಲ್ಲಿ ಯಥಾಸ್ಥಿತಿಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು,
ಆಸಕ್ತರು ನೋಡಬಯಸಿದ್ದಲ್ಲಿ ಕಚೇರಿಯ ಸಮಯದಲ್ಲಿ ವೀಕ್ಷಿಸಬಹುದಾಗಿದೆ. ಹಾಗೂ ನಿಗದಿತ ಸಮಯದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಅಬಕಾರಿ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.