ಆನಂದಪುರ, ಫೆ.೧೩: ಜಾನಪದ ಮಹತ್ವ ತಿಳಿಸುವ ಅಗತ್ಯತೆ ಇದೆ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ಅದರ ಮಹತ್ವ ಮತ್ತು ಅಗತ್ಯವನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.


ಅವರು ಆನಂದಪುರ ಸಮೀಪದ ಕಣ್ಣೂರಿನ ಕಣ್ಣೇಶ್ವರ ಜಾನಪದ ಕಲಾತಂಡ ( ರೀ )ಕಣ್ಣೂರು. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಕಣ್ಣೂರಿನಲ್ಲಿ ನಡೆದ ಜಾನಪದ ಕಲಾ ಉತ್ಸವ ೨೦೨೪. ಉದ್ಘಾಟಿಸಿ ಮಾತನಾಡಿದರು.
ಭಾರತವು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಇತಿಹಾಸಪೂರ್ವ ದಿನಗಳಿಂದ ಹಿಡಿದು ಅತ್ಯಂತ ಸುಸಂಸ್ಕೃತ ಸಮುದಾಯಗಳವರೆಗೆ ನೃತ್ಯವು ಜೀವನದ ಒಂದು ಭಾಗವಾಗಿದೆ. ಸ್ಥಳೀಯ ಜಾನಪದ ಪ್ರಕಾರ, ಭಾರತದ ವಿವಿಧ ಭಾಗಗಳಲ್ಲಿ ಹಲವಾರು ನೃತ್ಯ ಶೈಲಿಗಳು ವಿಕಸನಗೊಂಡಿವೆ ಎಂದರು.


ಭಾರತೀಯ ಜಾನಪದ ನೃತ್ಯವು ಮೂಲಭೂತವಾಗಿ ಸಮಯ, ಹೆರಿಗೆ, ಮದುವೆಗಳು ಮತ್ತು ಹಬ್ಬಗಳ ಅಂಗೀಕಾರವನ್ನು ಆಚರಿಸಲು ನಡೆಸುವ ಸಂತೋಷದ ಸರಳ ಪ್ರದರ್ಶನವಾಗಿದೆ.ಜಾನಪದದ ಅಗತ್ಯ ಮತ್ತು ಮಹತ್ವದ ಬಗ್ಗೆ ಇಂದಿನ ಪೀಳಿಗೆಗೆ ಅರಿವಿಲ್ಲ. ಇದರಿಂದ ಅವರು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿದ್ದಾರೆ. ಜಾನಪದದ ಮಹತ್ವವನ್ನು ಅವರಿಗೆ ಮನದಟ್ಟಾಗುವಂತೆ ತಿಳಿಸಿದಲ್ಲಿಮತ್ತೆ ದೇಶಿಯ ಸಂಸ್ಕೃತಿಯತ್ತ ಮರಳುತ್ತಾರೆ ಎಂದರು.


ಪ್ರಾಸ್ತವಿಕವಾಗಿ ಮಾತನಾಡಿದ ಬಿ ಟಾಕಪ್ಪ ಮಾಜಿ ಅಧ್ಯಕ್ಷರು ಕರ್ನಾಟಕ ಜಾನಪದ ಅಕಾಡೆಮಿನೃತ್ಯಗಳು ಉತ್ತಮ ರೀತಿಯ ವ್ಯಾಯಾಮಗಳಾಗಿವೆ, ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸಲು ದೈಹಿಕ ಮತ್ತು ನೃತ್ಯ ಚಟುವಟಿಕೆಗಳನ್ನು ಸಂಯೋಜಿಸುವ ಅತ್ಯಂತ ಪರಿಣಾಮಕಾರಿ ಮತ್ತು ಸೃಜನಶೀಲ ಸಂತೋಷವನ್ನು ನೀಡುತ್ತದೆ ಎಂದರು.
ವೇದಿಕೆಯಲ್ಲಿ ಪ್ರಮುಖರಾದ ಗಂಗಮ್ಮ , ಪರಮೇಶ್ವರಪ್ಪ. ಗುರುಮೂರ್ತಿ , ಷಣ್ಮುಖಪ್ಪ ಎಲ್. ಶಿವಪ್ಪ ಎಸ್.ಹೆಚ್ .ಮಂಜಪ್ಪ ಎಸ್.ಆರ್. ಜಿಸಿ ಮಂಜಪ್ಪ. ರಾಜಶೇಖರ್ ಎಂ .ಇನ್ನಿತರರು ಉಪಸ್ಥಿತರಿದ್ದರು.


ಜಾನಪದ ಉತ್ಸವದಲ್ಲಿ ಭರತನಾಟ್ಯ ಸುಗಮ ಸಂಗೀತ ಲಂಬಾಣಿ ನೃತ್ಯ ವೀರಗಾಸೆ ,ಡೊಳ್ಳಿನ ಕುಣಿತ ,ನಂಧಿದ್ವಜ, ಜೋಗತಿ ನೃತ್ಯ ,ಡೊಳ್ಳಿನ ಪದ ,ಜೋಗಿ ಪದ ಯಕ್ಷಗಾನ ಏಕಪಾತ್ರ ಅಭಿನಯ .ಸುಗ್ಗಿಗುಣಿತ ಜನರ ಮನಸೂರೆಕೊಂಡವು.

By admin

ನಿಮ್ಮದೊಂದು ಉತ್ತರ

error: Content is protected !!