ಶಿವಮೊಗ್ಗ, ಫೆ.8:
ಪತಿಯನ್ನು ನೋಡಿಕೊಂಡು ಬರಲು ಸೌಧಿಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ನಗದು, ಹಾಗೂ ಬಂಗಾರದ ಕಳವು ಪ್ರಕರಣವನ್ನು ದೊಡ್ಡಪೇಟೆ ಪೊಲೀಸರು ಬೇಧಿಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಪೂರ್ಣ ವಿವರ
ದಿನಾಂಕ 25-05-2022 ರಂದು ಆರ್.ಎಂ.ಎಲ್ ನಗರದ ವಾಸಿ ಸಲ್ಮಾಖಾನಂ ರವರು ತಮ್ಮ ಮನೆಗೆ ಬೀಗ ಹಾಕಿಕೊಂಡು ತನ್ನ ಗಂಡನ ಬಳಿ ಸೌದಿ ಅರೇಬೀಯಾಕ್ಕೆ ಹೋಗಿದ್ದು, ನಂತರ ವಾಪಾಸ್ ದಿನಾಂಕ: 06-06-2023 ರಂದು ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಇಂಟರ್ ಲಾಕ್ ಅನ್ನು ಮುರಿದು ಒಳಗಡೆ ಪ್ರವೇಶ ಮಾಡಿ ಗಾಡ್ರೇಜ್ ಬೀರುವಿನಲ್ಲಿದ್ದ ಬಂಗಾರದ ಆಭರಣ ಹಾಗು 500 ರಿಯಾಲ್ ಮುಖಬೆಲೆಯ 9 ಸೌದಿ ಅರೇಬಿಯಾದ ನೋಟುಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0172/2023 ಕಲಂ 454, 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ ಕೆ, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ, ಬಾಬು ಆಂಜನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಎ ಉಪ ವಿಭಾಗ ಹಾಗು ಸುರೇಶ್. ಎಂ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಬಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ರವಿ ಪಾಟೀಲ್ ಪಿಐ ದೊಡ್ಡಪೇಟೆ ರವರ ನೇತೃತ್ವದಲ್ಲಿ, ವಸಂತ ಹೆಚ್,ಸಿ, ಪಿಎಸ್ಐ, ಶ್ರೀನಿವಾಸ್ ಆರ್, ಪಿಎಸ್ಐ ಮಂಜಮ್ಮ ಪಿಎಸ್ಐ ಹಾಗೂ ಸಿಬ್ಬಂಧಿಗಳಾದ ಹೆಚ್,ಸಿ ಲಚ್ಚಾ ನಾಯ್ಕ, ಪಾಲಾಕ್ಷನಾಯ್ಕ, ಸುರೇಶ್ ಬಿ,ಬಿ, ಸಿಪಿಸಿ ಚಂದ್ರನಾಯ್ಕ, ಪುನೀತ್ ಕುಮಾರ್, ನಿತಿನ್ ಮತ್ತು ಚಂದ್ರನಾಯ್ಕ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ದಿನಾಂಕಃ 02-02-2024 ರಂದು ಪ್ರಕರಣದ ಆರೋಪಿತನಾದ ಸಲೀಂ, 44 ವರ್ಷ, ಮಂಜುನಾಥ್ ಬಡಾವಣೆಯ ಹತ್ತಿರ, ತಿಮ್ಮಾನಗರ, ಸೂಪರ್ ಮಾರ್ಕೇಟ್ ಹಿಂಬಾಗ ಶಿವಮೊಗ್ಗ ಟೌನ್ ಈತನನ್ನು ದಸ್ತಗಿರಿ ಮಾಡಿ ಆರೋಪಿಯು ಕಳುವು ಮಾಡಿ ಮತ್ತೂಟ್ ಫೈನಾನ್ಸ್ ಮತ್ತು ಐ.ಐ.ಎಫ್.ಎಲ್ ಫೈನಾನ್ಸ್ ಗಳಲ್ಲಿ ಗಿರವಿ ಇಟ್ಟಿದ್ದಂತಹ ಅಂದಾಜು ಮೌಲ್ಯ 8,28,400/- ರೂಗಳ ಒಟ್ಟು 155 ಗ್ರಾಂ 35 ಮಿಲಿ ತೂಕದ ಬಂಗಾರದ ಆಭರಣಗಳನ್ನು, ಅಂದಾಜು ಮೌಲ್ಯ 8,350/- ರೂಗಳ ಒಟ್ಟು 109 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ರೂ 69,000/- ಮೌಲ್ಯದ 500 ರಿಯಾಲ್ ಮುಖ ಬೆಲೆಯ 6 ಸೌದಿ ಅರೇಬಿಯಾದ ನೋಟುಗಳು ಮತ್ತು ಅಂದಾಜು ಮೌಲ್ಯ 21,400/- ರೂಗಳ ವಾಚ್ ಗಳು, ಆರ್ಟಿಫಿಷಿಯಲ್ ಒಡವೆಗಳು, ವ್ಯಾನಿಟಿ ಬ್ಯಾಗ್ ಸೇರಿ ಒಟ್ಟು 10,00,000/- ರೂ ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಅವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.