ಶಿವಮೊಗ್ಗ,ಫೆ.02:ಕೇಂದ್ರ ಹಣಕಾಸು ಸಚಿವ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ಕಾಟಾಚಾರದ ನಿರಾಶದಾಯಕ ವೇಸ್ಟ್ ಬಜೆಟ್ ಆಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್ ಸುಂದರೇಶ್ ದೂರಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇದು ಅತ್ಯಂತ ಕಳಪೆ ಬಜೆಟ್. ಕಳೆದ ಬಜೆಟ್‍ನಲ್ಲಿ ಕರೋನದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ 20,000 ಕೋಟಿ ಹಣವನ್ನು ಸಣ್ಣ ಕೈಗಾರಿಕೆಗಳಿಗೆ ಮೀಸಲು ಇಟ್ಟಿರುವುದಾಗಿ ಘೋಷಣೆ ಮಾಡಿದ್ದರು. ಆದರೆ ಜಿಲ್ಲೆಯ ಯಾವ ಕೈಗಾರಿಕೆಗು ಇದರಿಂದ ಪ್ರಯೋಜನ ಆಗಲಿಲ್ಲ. 2022 ಗುಡಿಸಲು ಮುಕ್ತ ರಾಷ್ಟ್ರ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದರು. ಈವರೆಗೂ ಜಿಲ್ಲೆಯಲ್ಲಿ ಒಂದು ಮನೆಯ ನಿರ್ಮಾಣ ಆಗಿಲ್ಲ ಎಂದು ದೂರಿದರು.

ಗ್ರಾಮೀಣ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ ಮೀಸಲು ಇಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಯಾವುದೇ ಗ್ರಾಮೀಣ ರಸ್ತೆ ನಿರ್ಮಾಣ ಆಗಿಲ್ಲ ರಕ್ಷಣಾ ಇಲಾಖೆಗೆ ಪ್ರತಿ ವರ್ಷ ಲಕ್ಷಾಂತರ ಕೋಟಿ ಹಣ ಇಡುತ್ತಿದ್ದಾರೆ ಆದರೆ ಈ ಹಣದಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ ಇದರಲ್ಲಿ ಪಾರದರ್ಶಕತೆ, ಮಾಯವಾಗಿದೆ ಎಂದರು.

ಈ ಬಾರಿಯ ಬಜೆಟ್‍ನಲ್ಲಿ ಮಹಿಳೆಯರಿಗೆ ಒತ್ತು ನೀಡಿರುವುದಾಗಿ ಘೋಷಣೆ ಮಾಡಿದ್ದಾರೆ ಆದರೆ ಬೆಲೆ ಏರಿಕೆಯಿಂದ ತÀತ್ತರಿಸಿರುವ ಜನರಿಗೆ ಯಾವುದೇ ಪರಿಹಾರ ಇದರಲ್ಲಿ ಇಲ್ಲ ನಿರುದ್ಯೋಗ ನಿವಾರಣೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂಷಿಸಿದರು.

ಈ ಕೇಂದ್ರ ಬಜೆಟ್‍ನಲ್ಲಿ ಯಾವುದೇ ಉಚಿತ ಭರವಸೆ ನೀಡಿಲ್ಲ ಇವರು ಕೇವಲ ರಾಮಮಂದಿರ ಮತ್ತು ಇವಿಎಂ ಮೇಲೆ ಚುನಾವಣೆ ನಡೆಸಲು ಹೊರಟಿದ್ದಾರೆ ಜನಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ ಧರ್ಮದ ಆಧಾರದ ಮೇಲೆ ಚುನಾವಣೆ ನಡೆಸುವುದೇ ಬಿಜೆಪಿ ಅಜೆಂಡ ಎಂದು ದೂರಿದರು.

ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಸಂಸದ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿರುವುದು ಗಮನಕ್ಕೆ ಬಂದಿದೆ ಈ ಬಗ್ಗೆ ನಾನು ಏನು ಮಾಡಲು ಬರುವುದಿಲ್ಲ ಮಾಧ್ಯಮಗಳ ವರದಿಯನ್ನು ಕೆಪಿಸಿಸಿಗೆ ಕಳಿಸಿಕೊಟ್ಟಿದ್ದೇನೆ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು. ಯೋಗೀಶ್ ಮತ್ತು ಆಯನೂರು ನಡುವಿನ ಮಾತಿನ ಸಮರಕ್ಕೆ ಅದು ಪಕ್ಷದ ಆಂತರಿಕ ವಿಚಾರ. ಸಣ್ಣ ವಿಚಾರವದು. ಇಬ್ಬರಿಗೂ ಕರೆದು ಮಾತನಾಡಿದ್ದೇನೆ ಎಂದರು.

ಪ್ರಧಾನಮಂತ್ರಿ ಮೋದಿ ಪ್ರವಾಸೋಧ್ಯಮಕ್ಕೆ ಒತ್ತು ನೀಡಿ ತಮ್ಮ ಗೆಳೆಯರಾದ ಅದಾನಿ, ಅಂಬಾನಿಯವರಿಗೆ ನೆರವು ನೀಡುತ್ತಿದ್ದಾರೆ. 11.90ಲಕ್ಷ ಕೋಟಿ ಬಡ್ಡಿ ಕಟ್ಟುತ್ತಿದ್ದೇವೆ. 113 ಲಕ್ಷ ಕೋಟಿ ಮೋದಿ ಅವಧಿಯಲ್ಲಿ ಹೆಚ್ಚುವರಿ ಸಾಲ ಮಾಡಲಾಗಿದೆ. ಆಪತ್ತಿಗೆ ಇಟ್ಟ 3 ಲಕ್ಷ ಕೋಟಿ ಹಣವನ್ನು ಕೂಡ ವಿತ್‍ಡ್ರಾ ಮಾಡಲಾಗಿದೆ. ಕಳೆದ ಬಜೆಟ್‍ನಲ್ಲಿಯೇ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಘೋಷಣೆ ಮಾಡಲಾಗಿತ್ತು. ಹಣ ಬಿಡುಗಡೆಯಾಗಿಲ್ಲ. ಈ ಬಾರಿ ಅದರ ಸುದ್ದಿಯೇ ಇಲ್ಲ. ಬರೀ ಆಯೋಧ್ಯೆ ರಾಮ ಮತ್ತು ಇವಿಎಂ ಮೇಲೆ ಅವಲಂಭಿತರಾಗಿದ್ದಾರೆ ಎಂಬುವುದು ಕಂಡುಬರುತ್ತಿದೆ. ರೈತರಿಗೆ, ಯುವಕರಿಗೆ, ಯಾವುದೇ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಬರೀ ಧರ್ಮದ ಆಧರದ ಮೇಲೆ ಚುನಾವಣೆ ನಡೆಸಲು ಹೊರಟ್ಟಿದ್ದಾರೆ. ಧರ್ಮಕ್ಕಾಗಿ ಮುಗ್ಧ ಜನರನ್ನು ಕೆಣಕಿ ಗೊಂದಲವೆಬ್ಬಿಸಿ ದೇಶದ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಬಡ ಜನರ ತೆರಿಗೆ ಹಣವನ್ನು ತಮ್ಮ ಸ್ನೇಹಿತರಿಗೆ ಹಂಚುತ್ತಿದ್ದಾರೆ. ಬಾವುಟ ಹಾರಿಸಿದ ಕೂಡಲೇ ಜನರ ಹಸಿವು ನೀಗುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಶೇಖರ್, ಕಲೀಮ್ ಪಾಷಾ, ಚಂದನ್, ಚಂದ್ರ ಭೂಪಾಲ, ಸೌಗಂಧಿಕಾ, ಮುಜೀಬ್ , ವೈ.ಬಿ.ಚಂದ್ರಕಾಂತ್, ಪಿ.ಎಸ್. ಗಿರೀಶ್‍ರಾವ್, ಆಫ್ರಿದಿ, ಪ್ರವೀಣ್, ಇನ್ನಿತರರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!