ಭದ್ರಾವತಿ: ಒಂದೆಡೆ ಗ್ರಾಮ ಪಂಚಾಯ್ತಿಗೆ ಮತದಾನ ಆರಂಭವಾಗಿರುವ ನಡುವೆಯೇ ತಾಲೂಕಿನಲ್ಲಿ ಅಭ್ಯರ್ಥಿಯೊಬ್ಬರು ಬಹಿರಂಗವಾಗಿ, ಪೊಲೀಸರ ಎದುರಿಗೇ ಹಣ ಹಂಚಿರುವ ಘಟನೆ ನಡೆದಿದೆ.
ತಾಲೂಕಿನ ಕೂಡ್ಲಿಗೆರೆ ಪಂಚಾಯ್ತಿ ವ್ಯಾಪ್ತಿಯ ಕಲ್ಪನಹಳ್ಳಿ ಗ್ರಾಮದ ಚುನಾವಣೆ ಅಭ್ಯರ್ಥಿಯಾಗಿರುವ ಟ್ರಾಕ್ಟರ್ ಗುರುತಿನ ಕುಬೇರ್ ನಾಯ್ಕ ಎಂಬ ಅಭ್ಯರ್ಥಿ ಮತದಾರರನ್ನು ಸೆಳೆಯಲು ಬಹಿರಂಗವಾಗಿಯೇ ಹಣ ಹಂಚಿಕೆ ಮಾಡುತ್ತಿದ್ದಾರೆ.
ಹಣ ಹಂಚುತ್ತಿರುವ ವೀಡಿಯೋ ದೊರೆತಿದ್ದು, ಅಭ್ಯರ್ಥಿ ಮಹಿಳೆಯೊಬ್ಬರಿಗೆ ಹಣ ನೀಡುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಸ್ಥಳೀಯರ ಮಾಹಿತಿಯ ಪ್ರಕಾರ ಪ್ರತಿ ಮತಕ್ಕೆ 200 ರಿಂದ 500 ರೂ. ಹಣವನ್ನು ಹಂಚಿಕೆ ಮಾಡಲಾಗುತ್ತಿದ್ದು, ಇದು ಪೊಲೀಸರ ಎದುರಿಗೇ ನಡೆಯುತ್ತಿದ್ದೂ ಆರಕ್ಷಕರು ಕಂಡೂ ಕಾಣದಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮತದಾನದ ದಿನವೇ ಹೀಗೆ ಬಹಿರಂಗವಾಗಿ ಹಣ ಹಂಚಿಕೆ ಮಾಡುತ್ತಿರುವುದು ಹಾಗೂ ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗೆ ಧೋರಣೆಗೆ ಗ್ರಾಮಸ್ಥರು ಕಿಡಿ ಕಾರಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!