ಶಿವಮೊಗ್ಗ,ಜ.22: ಸಂಸ್ಕೃತಿ ಸಂಸ್ಕಾರಗಳ ನಾಡು ಭಾರತವಾಗಿದ್ದು, ಭಾರತೀಯ ಸಂಸ್ಕೃತಿಯಿAದಲೇ ವಿಶ್ವದ ಗಮನ ಸೆಳೆದಿದ್ದು, ರಾಮಲಲ್ಲಾನ ಪ್ರತಿಷ್ಠಾಪನೆ ಆಗುತ್ತಿರುವುದು ಸಂತೋಷದ ವಿಚಾರವಾಗಿದ್ದು, ದೇಶ ಮುಂಬರುವ ದಿನಗಳಲ್ಲಿ ರಾಮರಾಜ್ಯವಾಗಲಿ ಎಂದು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಹೇಳಿದ್ದಾರೆ.
ಅವರು ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ಹಿಂದೂ ಸಂಘಟನೆಗಳು ಮತ್ತು ಭಕ್ತಾಧಿಗಳ ನೆರವಿನಿಂದ ಆಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಸಿಹಿ ಹಂಚಿ ಆರ್ಶೀವಚನ ನೀಡಿದರು.
ರಾಮರಾಜ್ಯ ಎಂದರೆ ಎಲ್ಲರನ್ನು ಪ್ರೀತಿಸುವುದು. ಸೌಹಾರ್ದಯುತವಾಗಿ ನಡೆದು ಎಲ್ಲರೂ ಸುಖಶಾಂತಿಯಿAದ ಬದುಕುವೆದೇ ರಾಮರಾಜ್ಯ ಎಂದು ಅರ್ಥ. ದೇವರು ಕಣ ್ಣಗೆ ಕಾಣುವುದಿಲ್ಲ. ಆದರೆ, ಎಲ್ಲ ಕಡೆಯು ಇರುತ್ತಾನೆ. ರಾಮನ ಜನ್ಮಸ್ಥಾನದಲ್ಲಿ ರಾಮನ ಸುಂದರ ದೇವಾಲಯ ನಿರ್ಮಾಣವಾಗಿ ರಾಮನ ಮೂರ್ತಿ ಇಂದು ಪ್ರತಿಷ್ಠಾಪನೆಗೊಂಡಿದೆ. ಭಾರತೀಯರ ಬಹುವರ್ಷದ ಕನಸು ನೆನಸಾಗಿದೆ. ಶ್ರೀರಾಮನ ಆದರ್ಶ ಪಾಲಿಸುವುದೇ ನಮ್ಮೆಲ್ಲರ ಕರ್ತವ್ಯವಾಗಬೇಕು. ಸಿಹಿ ಹಂಚಿ ಸಂಭ್ರಮಿಸಿದ್ದೇವೆ. ಸಿಹಿ ಎಂದರೆ ಸುಖಶಾಂತಿ ನೆಮ್ಮದಿ ಎಂದು ಅರ್ಥ ಎಂದರು.
ಆರ್‌ಎಸ್‌ಎಸ್ ಪ್ರಮುಖ ಪಟ್ಟಾಭಿ ಮಾತನಾಡಿ, ಪೂರ್ವಜರ 500 ವರ್ಷಗಳ ಹೋರಾಟಕ್ಕೆ ಇಂದು ಫಲ ದೊರೆತಿದೆ. ವಿದೇಶಿಗರ ದಾಳಿಗೆ ದೇಶದಲ್ಲಿ ಅನೇಕ ದೇವಸ್ಥಾನಗಳು ಧ್ವಂಸವಾಗಿವೆ. ರಾಮ ಎಲ್ಲರಿಗೂ ದೇವರು, ಆತನ ನಡವಳಿಕೆಯಿಂದಲೇ ರಾಮ ದೇವರಾಗಿದ್ದಾನೆ. ಮರ್ಯಾದ ಪುರುಷೋತ್ತಮ ಎನಿಸಿಕೊಂಡು ಎಲ್ಲರ ಹೃದಯಾಂತರಳಾದಲ್ಲಿ ಸ್ಥಾಪಿತನಾಗಿದ್ದಾನೆ. ಇದುವರೆಗೆ ತಿರುಚಿದ ಇತಿಹಾಸವನ್ನೇ ನಮಗೆ ತಿಳಿಸಲಾಗಿತ್ತು. ಇನ್ನು ರಾಮನ ನಿಜವಾದ ಇತಿಹಾಸ ಏನು? ಆತನ ಗುಣಗಳೇನು? ಎನ್ನುವುದು ತಿಳಿಸಲಾಗುತ್ತದೆ. ನಮಗೆ ನಾವೇ ಗುರು ಆಗಬೇಕು. ಎಲ್ಲೆಲ್ಲಿ, ಯಾವಾಗ, ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಸದ್ಗುಣ ಸಂಪನ್ನನಾದ ರಾಮ ತೋರಿಸಿದ್ದಾನೆ. ಮುಸಲ್ಮಾನರ ಪೂರ್ವಜರು ಕೂಡ ರಾಮನ ಕುಟುಂಬಕ್ಕೆ ಸೇರಿದವರು, ರಾಮ ಭಾರತೀಯರ ಆರಾಧ್ಯ ದೈವ ಎಂದರು.
ಮಾಜಿ ಸಚಿವ ಈಶ್ವರಪ್ಪ ಮಾತನಾಡಿ, ರಾಮಮಂದಿರ ಆಗಿದೆ. ಇನ್ನೂ ಮಥುರದಲ್ಲಿ ಕೃಷ್ಣನ ಪ್ರತಿಷ್ಠಾಪನೆ ಆಗಬೇಕು. ದುಃಖವೆಂದರೆ ಕರ್ನಾಟಕ ಸರ್ಕಾರ ಈ ಐತಿಹಾಸಿಕ ಕ್ಷಣವನ್ನು ಕಣ್ಣಲಿ ತುಂಬಿಕೊಳ್ಳಲು ಶಾಲ ಮಕ್ಕಳಿಗೆ ರಜೆ ನೀಡಬೇಕಿತ್ತು. ರಜೆ ನೀಡದೇ ಓರ್ವ ಖಳನಾಯಕನಾಗಿ ಇತಿಹಾಸ ಸೃಷ್ಠಿ ಮಾಡಿದರು ಎಂದರು.
ಸAಸದ ಬಿ.ವೈ.ರಾಘವೇಂದ್ರ ಮಾತನಾಡಿ, ಇಡೀ ಪ್ರಪಂಚದಲ್ಲಿ ಕೇಸರಿ ಧ್ವಜ ಹಾರಾಟವಾಗುತ್ತಿದೆ. ವಾಷಿಂಗ್‌ಟನ್‌ನಲ್ಲಿ ಕೂಡ ಸಂಭ್ರಮಾಚರಣೆ ನಡೆದಿದೆ. ಕನಸು ನೆನಸಾಗಿದೆ. ರಾಮಮಂದಿರಕ್ಕಾಗಿ ಬಲಿಯಾದ ಕರಸೇವಕರಿಗೆ ಈ ಸಂದರ್ಭದಲ್ಲಿ ಚಿರಶಾಂತಿ ಕೋರುತ್ತೇನೆ. ಮತ್ತು ನಿರ್ಮಾಣಕ್ಕೆ ಕಾರಣ Ãಭೂತರಾದ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಕೆ.ಇ.ಕಾಂತೇಶ್, ಜಗದೀಶ್, ನಾಗರಾಜ್, ಪ್ರಭು ಮತ್ತಿತರರಿದ್ದರು.