ಶಿವಮೊಗ್ಗ,ಜ.18 :

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ, ವಾಗ್ಮಿ, ಬರಹಗಾರ್ತಿ ಡಾ. ಶುಭಾ ಮರವಂತೆ ಇವರನ್ನು ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ನೂತನ ಸಂಯೋಜನಾಧಿಕಾರಿಯಾಗಿ ನೇಮಕ ಮಾಡಿ ಕುಲಸಚಿವರಾದ ಡಾ. ಸ್ನೇಹಲ್ ಸುಧಾಕರ್ ಲೋಖಂಡೆ ಅದೇಶಿಸಿದ್ದಾರೆ.


ಶಿವಮೊಗ್ಗ – ಚಿಕ್ಕಮಗಳೂರಿನ ಸುಮಾರು ಹನ್ನೆರಡು ಸಾವಿರ ಸ್ವಯಂಸೇವಕರನ್ನು ಹೊಂದಿರುವ ಕುವೆಂಪು ವಿವಿ ಎನ್ ಎಸ್ ಎಸ್ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಅನೇಕ ಸಾಧನೆ ಮಾಡಿದೆ. ಇತ್ತೀಚಿಗೆ ಅತ್ತ್ಯುತ್ತಮ ಕಾರ್ಯಕ್ರಮಾಧಿಕಾರಿ ರಾಜ್ಯ ಪ್ರಶಸ್ತಿಗೆ ಭಾಜನರಾದ ಡಾ. ಶುಭಾ ಅವರು ಕುವೆಂಪು ವಿಶ್ವ ವಿದ್ಯಾಲಯದ ಮೊಟ್ಟಮೊದಲ ಮಹಿಳಾ ಎನ್ ಎಸ್ ಎಸ್ ಸಂಯೋಜನಾಧಿಕಾರಿಯಾಗಿದ್ದಾರೆ.

ಕುಲಪತಿಗಳಾದ ಡಾ. ಎಸ್. ವೆಂಕಟೇಶ್, ಕುಲಸಚಿವರಾದ ಡಾ. ಸ್ನೇಹಲ್ ಸುಧಾಕರ್ ಲೋಖಂಡೆ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಗೋಪಿನಾಥ್, ಪ್ರಾಚಾರ್ಯರಾದ ಡಾ ವೀಣಾ ಎಂ. ಕೆ, ಡಾ. ಸೈಯದ್ ಸನಾವುಲ್ಲಾ, ಡಾ. ರಾಜೇಶ್ವರಿ ಎನ್.ಹಾಗೂ ಎಲ್ಲಾ ಕಾಲೇಜಿನ ಪ್ರಾಚಾರ್ಯರು, ಕಾರ್ಯಕ್ರಮಾಧಿಕಾರಿಗಳು, ವಿದ್ಯಾರ್ಥಿಗಳು, ಆತ್ಮೀಯರು ಡಾ. ಶುಭಾ ಮರವಂತೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!