ಎರಡೇ ದಿನದಲ್ಲಿ ಕೊಲೆಗಾರರನ್ನ ಬಂಧಿಸಿದ ಗ್ರಾಮಾಂತರ ಪೊಲೀಸರು

ಶಿವಮೊಗ್ಗ, ಡಿ.17:
ಪ್ರೀತಿಸಿ ಕೈಕೊಟ್ಟರೆ ನೀವು ಚಿತ್ರ ವಿಚಿತ್ರವಾಗಿ ಏನೇನೋ ಅನುಭವಿಸುತ್ತೇವೆ ಎಂಬುದಕ್ಕೆ ಸಾಕ್ಷಿಯಾಗಿ ಶಿವಮೊಗ್ಗ ಹರಿಗೆ ಬಳಿ ನಡೆದ ಕೊಲೆ ಪ್ರಕರಣ ಕಾಣಿಸಿಕೊಳ್ಳುತ್ತದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸರ ಕಾರ್ಯಕ್ಷಮತೆ ಇಡೀ ಪ್ರಕರಣವನ್ನು ಹುಡುಕಾಡಿ ಹೊರತಂದಿದೆ. ಆರೋಪಿಗಳನ್ನು ಎರಡೇ ದಿನದಲ್ಲಿ ಬಂಧಿಸಿದೆ.


ಪ್ರೀತಿಸಿ ಮದುವೆಯಾಗದೇ ಹೊಸ ಮದುವೆಗೆ ತಯಾರಾಗಿದ್ದ ಪ್ರೇಮಿಯ ವರ್ತನೆ ವಿರುದ್ಧ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಕುಟುಂಬ ಆತನನ್ನು ಕೊಲೆ ಮಾಡಿದ ಘಟನೆಗೆ ತೀರಿದ ಪ್ರತಿಕಾರದಂತೆ ಕಾಣಿಸಿಕೊಂಡಿದ್ದ ಪ್ರಕರಣವನ್ನು ಈ ಪೋಲೀಸರು ಬೇಧಿಸಿದ್ದಾರೆ.


ವಿವರ:
ಪ್ರೀತಿ, ಪ್ರೇಮದ ಹೆಸರಲ್ಲಿ ತಂಗಿ ಆತ್ಮಹತ್ಯೆಗೆ ಕಾರಣನಾಗಿ ಮತ್ತೊಬ್ಬಳೊಂದಿಗೆ ಮದುವೆಗೆ ಮುಂದಾಗಿದ್ದ ಯುವಕನನ್ನು ಆಕೆಯ ಸಹೋದರನೇ ತನ್ನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿ ಪ್ರತಿಕಾರ ತೀರಿಸಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಏಳು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.


ಹರಿಗೆ ಕೆಇಬಿ ಕ್ವಾರ್ಟರ್ಸ್ ಹಿಂದೆ ಮಂಗಳವಾರ ಕಾರ್ತಿಕ್ (24) ಎಂಬಾತನ ಕೊಲೆಯಾಗಿದ್ದು ಪ್ರಕರಣದಲ್ಲಿ ವಿದ್ಯಾನಗರದ ಮೃತ ಯುವತಿಯ ಸಹೋದರ ಒಳಗೊಂಡಂತೆ ಏಳು ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಸಂತೋಷ್, ಮಂಜು, ಕಿರಣ್, ಶರತ್, ಶಿವು,ಕೃಷ್ಣ ಹಾಗೂ ಕರುಣ ಎಂದು ಗುರುತಿಸಲಾಗಿದೆ.
ಪ್ರೀತಿಸಿ ವಂಚಿಸಿದ್ದಲ್ಲದೆ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದೇ ಕೊಲೆಗೆ ಕಾರಣ ಎಂಬುದು ತನಿಖೆಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ.
ಕಾರ್ತಿಕ್ ಮತ್ತು ವಿದ್ಯಾನಗರದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಆಕೆಯಿಂದ ದೂರವಾಗಿದ್ದ ಕಾರ್ತಿಕ್ ಮತ್ತೊಬ್ಬ ಯುವತಿ ಜತೆ ಮದುವೆಗೆ ಸಿದ್ಧತೆ ನಡೆಸಿದ್ದ. ಈ ಬಗ್ಗೆ ಮಾಹಿತಿ ಪಡೆದ ಯುವತಿ ಕಳೆದ ಭಾನುವಾರವಷ್ಟೇ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ವಿದ್ಯಾನಗರದ ಯುವತಿ ಮತ್ತು ಗೋಪಾಳ ಬಡಾವಣೆಯ ಕಾರ್ತಿಕ್ ಪರಸ್ಪರ ಪ್ರೀತಿಸುತ್ತಿದ್ದರು.
ಪ್ರೀತಿ ಹೆಸರಲ್ಲಿ ಆಕೆಯೊಂದಿಗೆ ಸುತ್ತಾಡಿ ಮಜಾ ಮಾಡಿದ್ದ ಕಾರ್ತಿಕ್ ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ಮನನೊಂದು ಯುವತಿ ನೇಣುಬಿಗಿದುಕೊಂಡಿದ್ದಳು. ಆಕೆಯ ಮೂರು ದಿನದ ಪೂಜೆಯಂದು ಕಾರ್ತಿಕ್‌ನನ್ನು ಕರೆಸಿ ಕೊಲೆ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ.
ಆತ್ಮಹತ್ಯೆಗೂ ಮುನ್ನ ಯುವತಿ ಕಾರ್ತಿಕ್‌ನೊಂದಿಗೆ ಮದುವೆ ವಿಷಯ ಪ್ರಸ್ತಾಪಿಸಿದ್ದಳು. ನಿನಗೆ ಅನಾರೋಗ್ಯವಿದ್ದು ಮದುವೆಯಾಗಲ್ಲ ಎಂದು ನಿರಾಕರಿಸಿದ್ದ. ಈ ಬಗ್ಗೆ ನೊಂದ ಯುವತಿ ಪ್ರೀತಿ ವಿಷಯ ಬಹಿರಂಗ ಪಡಿಸಿ ನಿಶ್ಚಯವಾಗಿರುವ ಮದುವೆಯನ್ನು ನಿಲ್ಲಿಸುವುದಾಗಿಯೂ ಹೆದರಿಸಿದ್ದಳು. ಅದಕ್ಕೂ ಅಂಜಿಕೊಳ್ಳದ ಕಾರ್ತಿಕ್ ಯುವತಿಯನ್ನು ನಿರ್ಲಕ್ಷಿಸುತ್ತಿದ್ದ. ಯುವತಿ ಆತ್ಮಹತ್ಯೆ ಬಳಿಕ ಆಕೆಯ ಮೊಬೈಲ್ ತೆಗೆದುಕೊಂಡು ಪರಿಶೀಲಿಸಿದಾಗ ಕಾರ್ತಿಕ್ ಜತೆಗಿದ್ದ ಫೋಟೋಗಳು, ಆತನನೊಂದಿಗೆ ಸಂಭಾಷಣೆ ನಡೆಸಿದ್ದ ಆಡಿಯೋಗಳು ಸಿಕ್ಕಿದ್ದವು. ಸಹೋದರಿ ಸಾವಿಗೆ ಕಾರ್ತಿಕ್‌ನೇ ಕಾರಣ ಎಂದುಕೊಂಡ ಸಹೋದರ ಕೊಲೆಗೆ ಮಹೂರ್ತ ಫಿಕ್ಸ್ ಮಾಡಿದ್ದ.


ಮೃತ ಯುವತಿಯ ಮೂರು ದಿನದ ಪೂಜೆ ಮಂಗಳವಾರ ನಿಗದಿಯಾಗಿತ್ತು. ಅದೇ ದಿನವೇ ಆಕೆಯ ಸಹೋದರ ತನ್ನ ಸ್ನೇಹಿತರೊಂದಿಗೆ ಕಾರ್ತಿಕ್ ಕೊಲೆಗೆ ಸ್ಕೆಚ್ ಹಾಕಿದ್ದ.

ಅದರಂತೆ ಏಳು ಆರೋಪಿಗಳು ಬೆಳಗ್ಗೆಯೇ ಕಾರ್ತಿಕ್‌ನನ್ನು ಪುಸಲಾಯಿಸಿ ಕೆಇಬಿ ಕ್ವಾಟರ್ಸ್‌ಗೆ ಕರೆಸಿಕೊಂಡಿದ್ದರು. ಪೂಜೆಗೆಂದು ಬಂದ ಕಾರ್ತಿಕ್‌ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.


ಹೊಸ ವರ್ಷದಂತೆ ಮದುವೆ ಫಿಕ್ಸ್ ಆಗಿತ್ತು
ಯುವತಿಯಿಂದ ದೂರವಾದ ಕಾರ್ತಿಕ್‌ಗೆ ಮನೆಯಲ್ಲಿ ಮದುವೆ ಮಾಡಲು ನಿರ್ಧರಿಸಿದ್ದರು. ಆತನಿಗೆ ಕುಟುಂಬದವರು ಹೆಣ್ಣು ನೋಡಿ ನಿಶ್ಚಿತಾರ್ಥ ಕೂಡ ಮಾಡಿದ್ದರು.
ಜ.1ರಂದು ಸಾಗರದಲ್ಲಿ ಕಾರ್ತಿಕ್ ಮದುವೆ ನಿಗದಿಯಾಗಿತ್ತು.

By admin

ನಿಮ್ಮದೊಂದು ಉತ್ತರ

You missed

error: Content is protected !!