ಶಿವಮೊಗ್ಗ,ಜ.12:
ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮಾರಂಭದಲ್ಲಿ “ಯುವ ನಿಧಿ” ಯೋಜನೆಗೆ ಚಾಲನೆ ದೊರೆಯಲಿದ್ದು ಈಗ ಅಂತಿಮ ಹಂತದ ತಯಾರಿಗಳು ಬರದಿಂದ ನಡೆಯುತ್ತಿವೆ.


ವಿಶಾಲವಾದ ಪೆಂಡಾಲ್ ನಲ್ಲಿ ಕನಿಷ್ಠ 40,000 ಜನ ಕುಳಿತುಕೊಳ್ಳುವ ಆಸನಗಳನ್ನು ಸಿದ್ಧಪಡಿಸಿದ್ದು, ವೇದಿಕೆ ವೈಭವದಿಂದ ಅಲಂಕೃತಗೊಂಡಿದೆ. ಇಡೀ ವಾತಾವರಣವನ್ನು ಹಾಗೂ ಅಲ್ಲಿನ ಪರಿಸರವನ್ನು ಇಂದು ಬೆಳಿಗ್ಗೆ “ತುಂಗಾತರಂಗ” ತನ್ನ ಕ್ಯಾಮರಾ ಕಣ್ಣುಗಳಿಂದ ಸೆರೆಹಿಡಿದು ನಿಮ್ಮ ಮುಂದೆ ನೀಡುವ ಪ್ರಯತ್ನ ಮಾಡುತ್ತದೆ ವಿಶೇಷವಾಗಿ ಮಧ್ಯಾಹ್ನದ ಊಟಕ್ಕೆ ಪಲಾವ್, ಮೊಸರನ್ನ ಸ್ವೀಟ್ ಹಾಗೂ ಮೆಣಸಿನಕಾಯಿ ಬೋಂಡಾ ಈಗಾಗಲೇ ಸುಮಾರು 200ಕ್ಕೂ ಹೆಚ್ಚು ಜನರಿಂದ ಸಿದ್ಧವಾಗುತ್ತಿವೆ.


ಎಲ್ಲರಿಗೂ ನೀರಿನ ಬಾಟಲ್ ಸಹಿತ ಊಟದ ವ್ಯವಸ್ಥೆಯನ್ನು ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದೆ ನೀಡಲು ಎರಡು ಕಡೆ ವಿಶಾಲವಾದ ಊಟದ ಅಂಕಣಗಳನ್ನು ಸಿದ್ಧಪಡಿಸಲಾಗಿದೆ.
ಅಂತೆಯೇ ಹಾಲಿ ಇರುವ ಶೌಚಾಲಯದ ಜೊತೆ ಮೂರು ಕಡೆ ಸುಲಭ ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗಿದೆ. ಕಸ ಹರಡದಂತೆ ನೋಡಿಕೊಳ್ಳಲು ಹತ್ತಾರು ಬೃಹತ್ ವಾಹನಗಳು ನಿಂತಿವೆ. ಎಲ್ಲೆಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎರಡು ಬಾರೀ ಲಾರಿಗಳಲ್ಲಿ ನೀರಿನ ಬಾಟೆಲ್ ಇಳಿಸುತ್ತಿದ್ದಾರೆ.

ಮತ್ತೊಂದು ವಿಶೇಷವೆಂದರೆ ಸುಮಾರು ಮೂವತ್ತಕ್ಕೂ ಹೆಚ್ಚು ಎಲ್ಇಡಿ ಟಿವಿಗಳನ್ನು ಅಳವಡಿಸಲಾಗಿದ್ದು ವೇದಿಕೆಯ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಆಗಮಿಸುವ ರಸ್ತೆಯಲ್ಲಿ ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರುವ ಪ್ಲೆಕ್ಸಿಗಳು ರಾರಾಜಿಸುತ್ತಿವೆ.


ಇಂದು ಬೆಳಗಿನ ಜಾವದಿಂದಲೇ ಇಡೀ ಆವರಣಕ್ಕೆ ನೀರನ್ನು ಹಾಕಲಾಗುತ್ತಿದ್ದು, ತಣ್ಣನೆಯ ವಾತಾವರಣ ಸೃಷ್ಟಿಯಾಗಲು ಹಾಗೂ ಸ್ವಚ್ಛತೆ ಕಾಪಾಡಲು ಕೆಲಸಗಾರರು ಮುಂದಾಗಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಜನರನ್ನು ಮೂರು ಬಾಗಿಲುಗಳ ಮೂಲಕ ಅವಕಾಶ ನೀಡಲಾಗಿದ್ದು, ವಿವಿಐಪಿ, ವಿಐಪಿಗಳಿಗೆ ಮತ್ತೊಂದು ವ್ಯವಸ್ಥೆಯನ್ನು ಮಾಡಲಾಗಿದೆ.


ಸೂಕ್ತ ಭದ್ರತೆ ಹಾಗೂ ರಕ್ಷಣೆಯ ನಡುವೆ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ನಡೆಸಲು ಕರ್ನಾಟಕ ರಾಜ್ಯ ಸರ್ಕಾರ ಅದರಲ್ಲೂ ವಿಶೇಷವಾಗಿ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು ಶಿವಮೊಗ್ಗ ಫ್ರೀಡಂ ಪಾರ್ಕ್ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ವೇದಿಕೆ ಸಿದ್ಧವಾಗಿದ್ದು ಇದೇ ಮೊದಲು ಎನ್ನಲಾಗುತ್ತಿದೆ.

By admin

ನಿಮ್ಮದೊಂದು ಉತ್ತರ

error: Content is protected !!