ಶಿವಮೊಗ್ಗ,ಜ.೦೮: ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ (ಮ್ಯಾಮ್‌ಕೋರ್ಸ್)ದ ಸದಸ್ಯ ದಿನೇಶ್ ಕಡ್ತೂರು ಅವರು ಸಂಘದ ಮೇಲೆ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ದಾಖಲೆಗಳನ್ನು ಸಾಬೀತುಪಡಿಸಿದರೆ ಸಂಘ ಗಂಭೀರವಾಗಿ ಚಿಂತನೆ ಮಾಡಲಿದೆ ಎಂದು ಸಂಘದ ಉಪಾಧ್ಯಕ್ಷ ಹೆಚ್.ಎಸ್.ಮಹೇಶ್ ಸ್ಪಷ್ಟನೆ ನೀಡಿದರು.

ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಿನೇಶ್ ಕಡ್ತೂರು ಅವರು ಸಂಘದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಇದು ಷೇರದಾರರ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿದ್ದರೆ ಅದನ್ನು ದಾಖಲೆ ಮೂಲಕ ಸಲ್ಲಿಸಲಿ. ಹೀಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಅವರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಸಂಘ ಯೋಚಿಸುತ್ತದೆ ಎಂದರು.

ದಿನೇಶ್ ಕಡ್ತೂರು ಅವರು ಇದುವರೆಗೂ ಸಂಘದಲ್ಲಿ ೩.೬೦ ಕೋಟಿ ಖರ್ಚಾಗಿದೆ ಗಂಭೀರ ಆರೋಪ ಮಾಡಿದ್ದಾರೆ. ಅದರೆ, ೨೦೦೬ರಿಂದ ಇಲ್ಲಿಯವರೆಗೆ ಖರ್ಚಾಗಿರುವುದು. ೮೦ಲಕ್ಷ ಮಾತ್ರ.  ಈ ರೀತಿ ಸುದ್ದಿ ಹಬ್ಬಿಸುವುದು ಸರಿಯಲ್ಲ. ಪ್ರತಿವರ್ಷ ಅಯವ್ಯಯದಲ್ಲಿ ಮಂಡಿಸುವ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಇದು ಅನುಮೋಧನೆ ಪಡೆದಿರುತ್ತದೆ ಎಂದರು.

ಮ್ಯಾಮ್‌ಕೋರ್ಸ್‌ನ ಆಡಳಿತ ಮಂಡಳಿಯವರು ಪಕ್ಷವೊಂದರ ಪರ ಕೆಲಸ ಮಾಡುತ್ತಾರೆ ಎಂದು ಅವರು ಆರೋಪಿಸುತ್ತಾರೆ. ಲೋಕಸಭಾ ಚುನಾವಣೆ ಇದಕ್ಕೆ ಕಾರಣ ಎನ್ನುತ್ತಾರೆ. ಆದರೆ ಅವರು ಈ ಆರೋಪವನ್ನು ಮತ್ತು ಪತ್ರಿಕಾಗೋಷ್ಠಿಯಲ್ಲಿ ನಿರ್ದಿಷ್ಟ ಪಕ್ಷದ ಕಚೇರಿಯೊಂದರಲ್ಲಿಯೇ ಮಾಡಿದ್ದಾರೆ. ಹೀಗಾಗಿ ಅವರು ಯಾವ ಪಕ್ಷದವರು ಎಂದು ಗೊತ್ತಾಗುತ್ತದೆ. ಅದರೆ ಮ್ಯಾಮ್‌ಕೋರ್ಸ್‌ನ ಸಂಸ್ಥೆಯು ಇದುವರೆಗೂ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ. ಯಾವುದೇ ರಾಜಕೀಯ ವ್ಯಕ್ತಿಗಳು ಇಲ್ಲ. ನಾವು ರಾಜಕಾರಣವನ್ನು ಮಾಡುವುದು ಇಲ್ಲ ಎಂದರು.

ದಿನೇಶ್ ಕಡ್ತೂರು ಅವರು ಸಂಘದ ಬೈಲವನ್ನು ಸರ್ಕಾರ ತಿರಸ್ಕರಿಸಿದೆ ಎಂಬ ಆದೇಶದ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿರುವುದು ಕಂಡು ಬಂದಿದೆ. ಆದರೆ ಬೈಲಾ ತಿದ್ದುಪಡಿಯನ್ನು ತಿರಸ್ಕರಿಸಿರುವ ಬಗ್ಗೆ ಹಾಗೂ ಯಾವುದೇ ಮಾಹಿತಿ ನಮ್ಮ ಸಂಸ್ಥೆಗೆ ಬಂದಿಲ್ಲ. ಈ ಬಗ್ಗೆ ಯಾವ ಮಾತುಕತೆಗಳು ನಡೆದಿಲ್ಲ. ಈಗಿರುವಾಗ ಈ ತಿದ್ದುಪಡಿ ಬೈಲಾ ಕಡ್ತೂರು ಕೈಗೆ ಹೇಗೆ ಸಿಕ್ಕಿತು ಎಂಬುಂದೇ ಯಕ್ಷಪ್ರಶ್ನೆಯಾಗಿದೆ ಹಾಗೂ ಷೇರುದಾರರ ಆತಂಕಕ್ಕೆ ಕಾರಣವಾಗಿದೆ ಎಂದರು.

ಮ್ಯಾಮ್‌ಕೋರ್ಸ್‌ನಲ್ಲಿ ೪ಸಾವಿರ ಕೋಟಿ ವಹಿವಾಟು ನಡೆದರೂ ೪ಕೋಟಿ ಲಾಭ ಕಡ್ತೂರು ಹೇಳುತ್ತಾರೆ. ಆದರೆ ೨೦೨೨-೨೩ರಲ್ಲಿ ೧೨೨೭ ಕೋಟಿ ವ್ಯವಹಾರವಾಗಿದೆ. ಈ ಆರೋಪ ಕೂಡ ಸುಳ್ಳು. ಹೀಗೆ ಕಡ್ತೂರು ಮತ್ತು ಮಾಜಿ ಉಪಾಧ್ಯಕ್ಷರಾಗಿರುವ ಯು.ಎಸ್.ಶಿವಪ್ಪ ಅವರು ಸರ್ವ ಸದಸ್ಯರ ಸಭೆಗೂ ಮುಂಚಿತವಾಗಿ ಷೇರುದಾರರು ಸಮಾಲೋಚನಾ ಸಭೆಯನ್ನು ನಡೆಸುವಂತೆ ಕೋರಿದ್ದಾರೆ. ಮ್ಯಾಮ್‌ಕೋರ್ಸ್ ತಾವು ಗಳಿಸಿದ ಲಾಭದಲ್ಲಿ ಸದಸ್ಯರಿಗೆ ನಿಯಮದಂತೆ ಶೇ.೧೦ರಷ್ಟು ಡಿವಿಡೆಂಡ್ ನೀಡಿದೆ ಎಂದರು.

ಮ್ಯಾಮ್‌ಕೋರ್ಸ್ ಅಡಿಕೆ ಬೆಳೆಗಾರರ ಹಿತ ಕಾಪಾಡಲು ಬದ್ದವಾಗಿದೆ. ಎಲೆ ಚುಕ್ಕಿ ರೋಗದ ಬಗ್ಗೆ ಗಮನಹರಿಸಿದೆ. ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ನಿವ್ವಳ ಲಾಭವು ಹೆಚ್ಚಿದೆ. ೧೭೮ ಕೋಟಿ ವಹಿವಾಟು ಇಂದು ೧೨೭೭ ಕೋಟಿ ತಲುಪಿದೆ. ಹಾಜರಾತಿ ಸಂಖ್ಯೆ ಹೆಚ್ಚಿದೆ. ಅಡಿಕೆ ಬೆಳೆಗಾರರ ಜೀವನಾಡಿಯಾಗಿದೆ. ಕಡ್ತೂರು ಅಂತವರ ಆರೋಪಗಳನ್ನು ಯಾವ ಷೇರುದಾರರು ಒಪ್ಪಬಾರದು. ದೃತಿಗೆಡುವ ಅಗತ್ಯವಿಲ್ಲ ಎಂದರು.

Click

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಈಶ್ವರಪ್ಪ ಸಿ.ಬಿ., ಬಿ.ಸಿ.ನರೇಂದ್ರ, ಕೀರ್ತಿರಾಜ್ ಕೆ., ಕೃಷ್ಣಮೂರ್ತಿ ಕೆ.ವಿ., ಕೆ.ರತ್ನಾಕರ, ಸುಬ್ರಹ್ಮಣ್ಯ ವೈ.ಎಸ್., ಜಿ.ಈ.ವಿರೂಪಾಕ್ಷಪ್ಪ, ಸುರೇಶ್ ಚಂದ್ರ, ಕೆ.ಕೆ.ಜಯಶ್ರೀ, ವಿಜಯಲಕ್ಷ್ಮೀ, ಬಡಿಹಣ್ಣ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!