ಶಿವಮೊಗ್ಗ,ಜ.೦೫: ರಾಮಭಕ್ತ ಶ್ರೀಕಾಂತ್ ಪೂಜಾರಿಯ ಮೇಲೆ ಕೇಸು ಇದ್ದರೆ ನಾನು ರಾಜ್ಯದ ಜನತೆಯ ಕ್ಷಮೆ ಕೇಳುತ್ತೇನೆ. ಇಲ್ಲದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಮಂತ್ರಿ ಪರಮೇಶ್ವರ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಇಂದು ಸವಾಲು ಹಾಕಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀಕಾಂತ್ ಪೂಜಾರಿ ಮೇಲೆ ೧೬ ಕೇಸುಗಳಿವೆ. ಈ ಮಣ್ಣಿನ ಕಾನೂನಿಗೆ ಬೆಂಬಲ ಕೊಡಬಾರದೇ, ಅಪರಾಧಿಗಳ ಪರವಾಗಿ ನಿಲ್ಲುತ್ತಾರೆ ಎಂದೆಲ್ಲ ಬಡಬಡಿಸಿದ್ದಾರೆ.

ಆದರೆ, ಅವರಿಗೆ ಗೊತ್ತಿರಲಿ ಅವರ ಮೇಲೆ ಇರುವ ಈ ಎಲ್ಲಾ ಕೇಸುಗಳು ಖುಲಾಸೆ ಆಗಿವೆ. ಇರುವುದು ಒಂದೇ ಕೇಸು ಅದಕ್ಕೂ ಕೂಡ ಎಫ್‌ಐಆರ್ ಆಗಿಲ್ಲ. ದೂರು ಕೂಡ ಕೊಟ್ಟಿಲ್ಲ. ಹೀಗಿದ್ದರೂ ಸಿದ್ದರಾಮಯ್ಯ ಅವರು ಸುಳ್ಳು ಹೇಳುತ್ತಿದ್ದಾರೆ. ಅವರು ಸಿದ್ದರಾಮಯ್ಯ ಅಲ್ಲ, ಸುಳ್ಳು ರಾಮಯ್ಯ ಎಂದು ವ್ಯಂಗ್ಯವಾಡಿದರು.


ಹಳೆಯ ಕೇಸನ್ನು ಇಟ್ಟುಕೊಂಡು, ರಾಮಭಕ್ತ ಶ್ರೀಕಾಂತ್ ಪೂಜಾರಿಯವರ ಮೇಲೆ ಮತ್ತೇ ಕೇಸು ದಾಖಲಿಸಿದವರ ಹಿಂದೆ ಷಡ್ಯಂತರವಿದೆ. ಭವಿಷ್ಯಹ ಮುಖ್ಯಮಂತ್ರಿ ಅಥವಾ ಗೃಹಮಂತ್ರಿಗಳು ಪೊಲೀಸ್ ಇಲಾಖೆಯನ್ನು ಮುಂದಿಟ್ಟುಕೊಂಡು ಈ ಕೇಸು ದಾಖಲಿಸಿರಬಹುದು. ಇದೊಂದು ಕುತಂತ್ರ ರಾಜಕಾರಣವಾಗಿದೆ. ವಿನಕಾರಣ ಕೇಸು ದಾಖಲಿಸಿಕೊಂಡ ಪೊಲೀಸರ ಮೇಲೂ ಕೂಡ ಕ್ರಮ ಕೈಗೊಳ್ಳಬೇಕು. ಯಾವ ತಪ್ಪಿಲ್ಲದೇ ೧೪ ದಿನ ನ್ಯಾಯಾಂಗ ಬಂಧನದಲ್ಲಿಟ್ಟ ಕ್ರಮ ಸರಿಯೇ ಎಂದು ಪ್ರಶ್ನೆ ಮಾಡಿದರು.


ಶ್ರೀಕಾಂತ್ ಪೂಜಾರಿ ಕೇಸ್‌ಗೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದ ತೀರ್ಪು ಬರಲಿದೆ, ಅವರಿಗೆ ನ್ಯಾಯ ಸಿಗಲಿದೆ.ಕಾಂಗ್ರೆಸ್ ನಾಯಕರು ಹಿಂದೂ ಭಕ್ತರನ್ನು ಅವಹೇಳನ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ಓಲೈಸಲು ತೊಡಗಿದ್ದಾರೆ. ಈಗಾಗಲೇ ದಲಿತ ಮತ್ತು ಹಿಂದುಳಿದವರನ್ನು ಮರೆತಿದ್ದಾರೆ. ಮುಂದೊಂದು ದಿನ ಮುಸ್ಲಿಂರನ್ನು ಕೈಬಿಡುತ್ತಾರೆ ಎಂದರು..


ದತ್ತ ಪೀಠಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ೨೦೧೭ನೇ ಇಸವಿಯ ಕೇಸನ್ನು ೭ ವರ್ಷದ ನಂತರ ಮತ್ತೆ ತೆಗೆದುಕೊಂಡಿದ್ದಾರೆ. ಗೊಂದಲ ಹುಟ್ಟಿಸಿದ್ದಾರೆ, ಇದು ಸರಿಯಲ್ಲ ಹೇಗೆ ರೀಓಪನ್ ಮಾಡಿದ್ದಾರೆ ಎಂಬುವುದು ಗೊತ್ತಿದೆ. ಒಟ್ಟಾರೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮತ್ತು ಗೃಹಸಚಿವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಹಿಂದೂ ಕಾರ್ಯಕರ್ತರಿಗೆ, ರಾಮಭಕ್ತರಿಗೆ ಕಿರುಕುಳ ನೀಡುವುದೇ ಕಾಂಗ್ರೆಸ್‌ನ ಕೆಲಸವಾಗಿದೆ. ಸ್ವಾಭಿಮಾನ ಕಟ್ಟುವ ಕನಸ್ಸೇ ಅವರಿಗಿಲ್ಲ. ಸಂತೋಷ್ ಕೇಸ್‌ನಲ್ಲಿ ನನ್ನ ಪಾತ್ರ ಇಲ್ಲ ಎಂದು ಕೋರ್ಟೆ ಹೇಳಿದೆ. ಕೋರ್ಟ್ ಬಗ್ಗೆ ಅವರಿಗೆ ಗೌರವಿಲ್ಲ. ನನ್ನ ಬಳಿ ಬರಲಿ, ನಾನು ತೋರಿಸುತ್ತೇನೆ ಎಂದ ಅವರು, ಜಗದೀಶ್ ಶೆಟ್ಟರ್ ಸವದಿಯವರು ರಾಮಮಂದಿರಕ್ಕೆ ದೇಣಿಗೆ ಕೊಟ್ಟಿರಬಹುದು. ದೇಣಿಗೆ ಕೊಟ್ಟವರು ಕೋಟ್ಯಾಂತರ ಜನರಿದ್ದಾರೆ. ಇವರಿಬ್ಬರೇ ಏನು ಅಲ್ಲ. ಹಾಗ ಮೋದಿ ಭಕ್ತರಾಗಿದ್ದರು, ಈಗ ಮಸೀದಿ ಕಟ್ಟಲು ದೇಣಿಗೆ ಕೊಡಲು ಎಂದು ವ್ಯಂಗ್ಯವಾಡಿದರು.


ಅನ್ನಭಾಗ್ಯದ ಅಕ್ಕಿಗೆ ಅರಿಷಿಣ ಹಾಕಿ ಮಂತ್ರಾಕ್ಷತೆ ಕೊಡುತ್ತಿದ್ದಾರೆ ಎಂಬ ಕಾಂಗ್ರೆಸ್ಸಿಗರ ಟೀಕಿಗೆ ಉತ್ತರಿಸಿದ ಅವರು, ಮಂತ್ರಾಕ್ಷತೆಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಈಶ್ವರಪ್ಪ ಅಂತ ಇರಲ್ಲ. ಅದು ಆಯೋಧ್ಯೆಯಿಂದ ಬಂದ ಮಂತ್ರಾಕ್ಷತೆ, ಅದನ್ನು ಹಂಚುತ್ತಿದ್ದೇವೆ. ಈ ಕಾಂಗ್ರೆಸ್ಸಿಗರಿಗೆ ಏನು ಮಾಡಬೇಕು ಎಂದು ಗೊತ್ತಿಲ್ಲ. ವಿಲಿವಿಲಿ ಒದ್ದಾಡುತ್ತಿದ್ದಾರೆ. ಗಲಭೆ ಮಾಡಿ, ಲೋಕಸಭಾ ಚುನಾವಣೆ ಗೆಲ್ಲಬಹುದು ಎಂದು ಮಾಡಿದ್ದಾರೆ. ಈ ಸುಳ್ಳುಬುರುಕರನ್ನು ಜನರು ನಂಬುವುದಿಲ್ಲ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್, ರತ್ನಾಕರ ಶೆಣೈ, ಚಂದ್ರಶೇಖರ್, ಕೆ.ವಿ.ಅಣ್ಣಪ್ಪ, ಮಾಲತೇಶ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!