ಶಿವಮೊಗ್ಗ, ಜ.05:
ಕಳೆದ 13 ವರ್ಷಗಳಿಂದ ತುಂಗಾ ತರಂಗ ಪತ್ರಿಕೆ ಹೊಸ ಬಳಗದ ಮೂಲಕ ಜಿಲ್ಲೆ ಹಾಗೂ ರಾಜ್ಯದಲ್ಲಿ ಗುರುತಿಸುವ ಹಂತಕ್ಕೆ ಬಂದಿದ್ದು, ಜನಧ್ವನಿಯಾಗಿ ಇನ್ನಷ್ಟು ಬೆಳೆಯಲಿ ಎಂದು ಮಾಜಿ ಲೋಕಸಭಾ ಸದಸ್ಯ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಇಂದಿಲ್ಲಿ ಹೇಳಿದರು.


ಅವರು ಇಂದು ಪತ್ರಿಕಾ ಕಛೇರಿ ಆವರಣದಲ್ಲಿ ನಡೆದ ಸರಳ ಸುಂದರ ಸಮಾರಂಭದಲ್ಲಿ ತುಂಗಾ ತರಂಗ ಆತ್ಮೀಯ ಬಳಗದೊಂದಿಗೆ 2024ರ ಕ್ಯಾಲೆಂಡರ್ ಬಿಡುಗಡೆ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಪತ್ರಿಕೆ ನಡೆಸುವುದು ಕಷ್ಟದ ಕೆಲಸ ಅದರ ನಡುವೆಯೂ ಪತ್ರಿಕೆಯನ್ನು ವ್ಯವಸ್ಥಿತವಾಗಿ ಜನರ ಮುಂದೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.
ಕಾರ್ಯಕ್ರಮದ ಮುಖ್ಯ ವಿಶೇಷ ಆಹ್ವಾನಿತರಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ, ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ತಿಮ್ಮೇಶಪ್ಪ ಅವರು ಮಾತನಾಡುತ್ತಾ, ಸಾಹಿತ್ಯ ಯಾವುದೋ ಒಂದು ಕಡೆಯಿಂದ ಬರುವುದಲ್ಲ. ಭಾವನೆಗಳ ಮೂಲಕ ಅಭಿವ್ಯಕ್ತಿಯಾಗುತ್ತದೆ. ಇಂದಿನ ದಿನಮಾನಗಳಲ್ಲಿ ಜನರಿಗೆ ನ್ಯಾಯ ಸಿಗಬೇಕೆಂದರೆ ಪತ್ರಿಕೋದ್ಯಮ ಹಾಗೂ ನ್ಯಾಯಾಂಗ ವ್ಯವಸ್ಥೆ ಅತಿ ಮುಖ್ಯವಾದುದು ಈ ಹಿನ್ನೆಲೆಯಲ್ಲಿ ಪತ್ರಿಕಾ ರಂಗ ಅತಿ ಹೆಚ್ಚು ಜವಾಬ್ದಾರಿ ಹೊರುವ ಅವಶ್ಯಕತೆ ಇದೆ ಎಂದರು.


ಪತ್ರಿಕಾ ಸಂಪಾದಕ ಎಸ್.ಕೆ.ಗಜೇಂದ್ರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರಂತರವಾಗಿ 13 ವರ್ಷಗಳಿಂದ ಪತ್ರಿಕೆ ಪ್ರತಿ ವರ್ಷ ವಿಶೇಷಾಂಕ ಹಾಗೂ ಕ್ಯಾಲೆಂಡರ್ ಹೊರತರುತ್ತಿದ್ದು, ಇದು ಇಂದಿನ ಮುದ್ರಣದ ದುಬಾರಿ ದಿನಗಳಲ್ಲಿ ಪತ್ರಿಕೆ ನಡೆಯಲು ನೆರವಾಗುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆಯ ಕೆ.ಹೆಚ್.ಅರುಣ್, ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಮಾಜಿ ಸದಸ್ಯ ಐಡಿಯಲ್ ಗೋಪಿ, ಕಾಂಗ್ರೆಸ್ ಗ್ರಾಮಾಂತರ ಮುಖಂಡ ಡಿಸಿ ಜಗದೀಶ್ವರ್, ರಾಘವೇಂದ್ರ ಸ್ಟೋನ್ ಕ್ರಶರ್‌ನ ಎಂ.ಪಿ.ಗಣೇಶ್, ಪತ್ರಕರ್ತ ಜಿ.ಸಿ.ಸೋಮಶೇಖರ್ ಮಾತನಾಡಿದರು.


ಈ ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಹೆಚ್.ಎಸ್.ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರಾದ ವೈ.ಹೆಚ್.ನಾಗರಾಜ್, ಹಿರಣಯ್ಯ, ಶರತ್‌ಚಂದ್ರ, ಪತ್ರಿಕಾಮಿತ್ರರಾದ ಶಿ.ಜು.ಪಾಶ, ಜಿ.ಚಂದ್ರಶೇಖರ್, ಮಂಜುನಾಥ್, ಅರುಣ್, ಭಾರತೀಯ ಮಾನವ ಹಕ್ಕುಗಳ ಸಮಿತಿಯ ಕೆ.ನಾಗರಾಜ್, ಎಸ್.ರಮೇಶ್, ದುರ್ಗಾಪ್ರಿಂಟರ‍್ಸ್‌ನ ಶ್ರೀನಿವಾಸ್, ಹೊಸಳ್ಳಿ ಜ್ಞಾನೋದಯ ವಿದ್ಯಾಸಂಸ್ಥೆಯ ಹರೀಶ್ ಸಾಗೋನಿ, ಸಾಹಿತಿ ಶಿಕ್ಷಕ ರಾ.ಹ.ತಿಮ್ಮೇನಹಳ್ಳಿ, ವಿಶ್ವಕರ್ಮ ಸೊಸೈಟಿಯ ರೂಪ, ಇಂದಿರಾ, ಸುರೇಶ್‌ಬಾಬು, ಉದಯ್, ಸಮೃದ್ದಿ ಹೋಟೆಲ್‌ನ ಹರೀಶ್, ಪ್ರಮುಖರಾದ ಹೆಚ್.ಬಿ.ಮಂಜುನಾಥ್, ಶಿವಕುಮಾರ್ ಎನ್. ಚಂದ್ರಹಾರನಹಳ್ಳಿ, ಶ್ರೀರಂಗ ಎಲೆಕ್ಟ್ರಾನಿಕ್ಸ್‌ನ ಬಾಬು, ತುಂಗಾ ತರಂಗ ಬಳಗದ ರಾಕೇಶ್, ರವಿ ಹಾಗೂ ಇತರರರು ಉಪಸ್ಥಿತರಿದ್ದರು
.

By admin

ನಿಮ್ಮದೊಂದು ಉತ್ತರ

error: Content is protected !!