ಆಧ್ಯಾತ್ಮ ಗುರುಗಳು, ನಡೆದಾಡುವ ಅಯ್ಯಪ್ಪ ಶ್ರೀ ಶ್ರೀ ರೋಜಾ ಗುರೂಜಿ ಅವರ ಹುಟ್ಟು ಹಬ್ಬವನ್ನು ನಾಡಿನ ವಿವಿಧ ಭಾಗಗಳಲ್ಲಿ ಆಚರಿಸಲಾಯಿತು.


ಶಿವಮೊಗ್ಗದಲ್ಲಿ ಶ್ರೀ ರೋಜಾ ಗುರೂಜಿ ಹಾಗೂ ಶ್ರೀ ಶಬರೀಶ್ ಗುರುಸ್ವಾಮಿ ಶಿಷ್ಯ ವೃಂದ ದಿಂದ ನಗರದ ಹಲವೆಡೆ ಅನ್ನ ಸಂತರ್ಪಣೆ ಮಾಡಲಾ ಯಿತು. ಮೆಗಾನ್ ಆಸ್ಪತ್ರೆಯ ಬಳಿ, ಬಸ್ ಸ್ಟ್ಯಾಂಡ್ ಹಾಗೂ ಶಿವಪ್ಪ ನಾಯಕ ವೃತ್ತದ ಬಳಿ ಉಪಹಾರ ಸೇವೆಯನ್ನು ಮಾಡಲಾಯಿತು. ಈ ಅನ್ನ ಸಂತರ್ಪ ಣೆಯಲ್ಲಿ ಶಬರೀಶ್ ಗುರುಸ್ವಾಮಿ ಅವರೊಂದಿಗೆ ಮನು ಸ್ವಾಮಿ, ಚಿದುಸ್ವಾಮಿ ಬಹು ಮುಖ್ಯವಾದ ಪಾತ್ರ ವಹಿಸಿದ್ದರು.
ಗುರುಗಳ ಹುಟ್ಟು ಹಬ್ಬದ ಅಂಗವಾಗಿ ರಾಮಣ್ಣ ಶ್ರೇಷ್ಟಿ ಪಾರ್ಕ್ ಬಳಿ ಇರುವ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಶಬರೀಶ್ ಸ್ವಾಮಿ ಅವ ರಿಂದ ಮದ್ಯಾಹ್ನದ ಭೋಜನವನ್ನು ಏರ್ಪಡಿಸಲಾ ಗಿತ್ತು. ಅನೇಕ ಭಕ್ತಾದಿಗಳು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದರು.


ಗುರುಗಳು ನೆಲೆಯಾಗಿರುವ ಹೊಸೂಡಿ ಫಾರ್ಮ್ ನಲ್ಲಿ ಮುರಳಿ ಸ್ವಾಮಿ, ಕಿರಣ್ ಸ್ವಾಮಿ ಹಾಗೂ ಸಂಗಡಿ ಗರು ಮಾಡಿದ ಬಾಳೆದಿಂಡಿನ ಅಲಂಕಾರದೊಂದಿಗೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸಲಾಯಿತು. ಹೊಸೂಡಿ ಶ್ರೀ ಅಯ್ಯಪ್ಪ ಸ್ವಾಮಿಗೆ ಶ್ರೀ ಶಬರೀಶ್ ಗುರುಸ್ವಾಮಿ ಯವರು ಶ್ರೀ ಧರ್ಮಲಿಂಗಂ ಸ್ವಾಮಿ ಯವರೊಂದಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಅಲ್ಲಿನ ಶಾಲಾ ಮಕ್ಕಳು ಗುರುಗಳಿಗೆ ಶುಭಾಶಯ ಕೋರಿದರು. ಶಾಲಾ ಮಕ್ಕಳು ಹಾಗೂ ಹೊಸೂಡಿ ಗ್ರಾಮಸ್ಥರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.


ಈ ಕಾರ್ಯಕ್ರಮದಲ್ಲಿ ಶ್ರೀ ಶಬರೀಶ್ ಗುರುಸ್ವಾಮಿ, ಶರತ್ ಸ್ವಾಮಿ, ನಿಖಿಲ್ ಸ್ವಾಮಿ, ಮುರುಗೇಶ್ ಸ್ವಾಮಿ, ಯೋಗರಾಜ್ ಸ್ವಾಮಿ, ಕಿರಣ್ ಸ್ವಾಮಿ, ಮುರಳಿ ಸ್ವಾಮಿ, ಮೌನೇಶ, ರವಿ, ಮಂಜು, ಸಂಜಯ್, ಪಳನಿ, ರಾಜೇಶ್, ಧರ್ಮಲಿಂಗಮ್, ಅರುಣ, ಗಣೇಶನ್, ಪೆರುಮಾಳ್, ಪಚ್ಚಾಂಡಿ, ಶಾಂತಿ, ಶ್ರೀ ಶಬರೀಶ ಭಕ್ತ ಮಂಡಳಿಯ ಸದಸ್ಯರು ಹಾಗೂ ಹೊಸೂಡಿ ಗ್ರಾಮಸ್ಥರು ಉಪಸ್ಥಿತರಿದ್ದರು.


ಬೆಂಗಳೂರು ಹಾಗೂ ಚೆನ್ನೈ ನಲ್ಲಿ ಶ್ರೀ ಶ್ರೀ ರೋಜಾ ಗುರೂಜಿ ಯವರ ಶಿಷ್ಯರು ಅನಾಥ ಆಶ್ರಮ ಹಾಗೂ ಬಡ ಜನತೆಗೆ ಅನ್ನ ಸಂತರ್ಪಣೆ ಮಾಡಿದರು. ಅನಾಥಾಶ್ರಮದ ಮಕ್ಕಳು ಗುರುಗಳಿಗೆ ಆರತಿ ಮಾಡಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಶ್ರೀ ರೋಜಾ ಗುರೂಜಿ ಶಿಷ್ಯ ವೃಂದದಿಂದ ಬೆಂಗಳೂರಿನಲ್ಲಿ ಚಂದ್ರು, ಅರುಣ್, ಜ್ಯೋತಿ, ಧಾರಿಣಿ, ಆದಿತ್ಯ, ರಾಜೇಶ್, ಕಲ್ಯಾಣಿ ಹಾಗೂ ಚೆನ್ನೈ ನಲ್ಲಿ ಸುರೇಶ್, ಜಯಶ್ರೀ, ಅನಂಧಿ, ಇಲವಳಗನ್, ಬಾಲಮುರುಗನ್ ಮತ್ತು ಇತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!