ಜಿಲ್ಲಾ ಕೈಗಾರಿಕಾ ಸಂಘದ ವತಿಯಿಂದ ಜಿಲ್ಲೆಯ ಕೈಗಾರಿಕೆಗಳ ಪಿತಾಮಹ ಎಂದು ಕರೆಸಿಕೊಳ್ಳುವ ದಿ. ಟಿ.ವಿ.ನಾರಾಯಣ ಶಾಸ್ತ್ರಿರವರ ೯೯ನೇ ಜನ್ಮ ದಿನಾಚರಣೆ ಹಾಗೂ “ನಾ ಕಂಡಂತೆ ನನ್ನ ಗುರು ಟಿ.ವಿ.ಎನ್”ರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಡಿ.೩೦ರ ಸಂಜೆ ೬ಗಂಟೆಗೆ ಸಾಗರ

ರಸ್ತೆಯ ಬಿಎಸ್‌ಎನ್‌ಎಲ್ ಕಚೇರಿ ಸಮೀಪದ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಫೌಂಡ್ರಿ ಕೈಗಾರಿಕೆಗಳು, ಆಟೋಮೊಬೈಲ್ ಕ್ಷೇತ್ರದಲ್ಲಿ ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳಲ್ಲಿ ಶ್ರೀಯುತರ ಅಮೂಲ್ಯವಾದ ಸೇವೆ ಮತ್ತು ಅಭಿವೃದ್ಧಿಯ ಚಿಂತನೆಗಳನ್ನು ಒಳಗೊಂಡಂತೆ ತಮ್ಮ

ಜೀವನ ಅವಧಿಯ ಪೂರ್ತಿ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಉದ್ದಿಮೆದಾರರ ಹಾಗೂ ಕಾರ್ಮಿಕರ ಭವಿಷ್ಯಕ್ಕಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.


ಸಮಾರಂಭವನ್ನು ಜಿಲ್ಲಾಧಿಕಾರಿ ಡಾ| ಆರ್. ಸೆಲ್ವಮಣಿ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಹಾಗೂ ಶಾಂತಲಾ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಛೇರ್‌ಮನ್ ಎಸ್. ರುದ್ರೇಗೌಡರು ಬಿಡುಗಡೆ ಮಾಡುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಸ್.ವಿಶ್ವೇಶ್ವರಯ್ಯ, ಉಪಾಧ್ಯಕ್ಷ ಹರ್ಷ ಬಿ.ಕಾಮತ್, ನಿರ್ದೇಶಕರಾದ ಎ.ಎಂ.ಸುರೇಶ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!