ಶಿವಮೊಗ್ಗ, ಡಿ.28:
ಶಿವಮೊಗ್ಗ ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರುತ್ತಿದ್ದವ ಚೋರಡಿಯವ…, ಯಾವುದೀ ಗಾಂಜಾ, ರೈತನಾ ಆತ? ತುಂಗಾನಗರ ಪೊಲೀಸರು ದೊಡ್ಡದೊಂದು ಗಾಂಜಾ ಬೇಟೆ ಮಾಡಿದ್ದಾರೆ., ಈಗ ಕೆಲ ರೈತರು ಗಾಂಜಾ ಬೆಳೆಯಲು ತೊಡಗಿದರಾ? ಮಾರಲು ಬಂದಾತ ಬ್ರೋಕರ್ರಾ? ರೈತ ಬೆಳೆದನಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಸಂಪೂರ್ಣ ವಿವರ ಸುದ್ದಿ ಓದಿ:
ಮಾದಕ ವಸ್ತು ಗಾಂಜಾ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಕ್ತಿ ದಾಮ ಲೇಔಟ್ ನ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬನು *ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಮಿಥುನ್ ಕುಮಾರ್ ಜಿಕೆ, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಸುರೇಶ್, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ-ಬಿ, ಉಪ ವಿಭಾಗ, ರವರ ನೇತೃತ್ವದ ಮಂಜುನಾಥ, ಪೊಲೀಸ್ ನಿರೀಕ್ಷಕರು ತುಂಗಾನಗರ ಪೊಲೀಸ್ ಠಾಣೆ ಮತ್ತು ಕುಮಾರ್ ಕೂರಗುಂದ ಪೊಲೀಸ್ ಉಪನಿರೀಕ್ಷಕರು ತುಂಗನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ನಾಗರಾಜ್ 38 ವರ್ಷ ಮರಾಠಿ ಕ್ಯಾಂಪ್, ಚೋರಡಿ ಪೋಸ್ಟ್, ಶಿವಮೊಗ್ಗ ಈತನನ್ನು ವಶಕ್ಕೆ ಪಡೆದು ಆರೋಪಿತನಿಂದ ಅಂದಾಜು ಮೌಲ್ಯ 28,000/- ರೂಗಳ 680 ಗ್ರಾಂ ತೂಕದ ಒಣ ಗಾಂಜಾ ಮತ್ತು ರೂ 1050/- ನಗದು ಹಣವನ್ನು ಅಮಾನತುಪಡಿಸಿಕೊಂಡು, ಆರೋಪಿತನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0512/2023 ಕಲಂ 20(ಬಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
tungataranga.blogspot.com